



ಮಣಿಪಾಲ: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ(ಮಾಹೆ) ನೂತನ ಮುಖ್ಯ ನಿರ್ವಹಣಾಧಿಕಾರಿಯಾಗಿ (ಸಿಓಓ) ಡಾ. ರವಿರಾಜ ಎನ್. ಎಸ್. ನೇಮಕಗೊಂಡಿದ್ದಾರೆ. ಅವರು ಇದುವರೆಗೆ ಮಾಹೆಯ ಯೋಜನೆ ಮತ್ತು ಮಾನಿಟರಿಂಗ್ ವಿಭಾಗದ ನಿರ್ದೇಶಕರಾಗಿದ್ದರು.
ಮಾಹೆಯ ಶೈಕ್ಷಣಿಕೇತರ ಕ್ರಿಯಾತ್ಮಕ ವಿಭಾಗಗಳಾದ ಸಾಮಾನ್ಯ ಸೇವೆಗಳು, ಖರೀದಿ, ಯೋಜನೆಗಳು, ಮಾಹಿತಿ ತಂತ್ರಜ್ಞಾನ ಮತ್ತು ಡಿಜಿಟಲ್ ರೂಪಾಂತರ, ಮಾನವ ಸಂಪನ್ಮೂಲಗಳು, ಕಾನೂನು, ಕಾರ್ಪೊರೇಟ್ ಸಂಬಂಧಗಳು, ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮ, ಹಾಸ್ಟೆಲ್‌ಗಳು ಮತ್ತು ಕ್ಯಾಂಪಸ್ ಸುರಕ್ಷತೆ ಇವುಗಳ ನಿರ್ವಹಣೆಯನ್ನು ಡಾ.ರವಿರಾಜ್ ನೋಡಿಕೊಳ್ಳಲಿದ್ದಾರೆ.
ಡಾ.ರವಿರಾಜ ಅವರು ಜೈವಿಕ ವಿಜ್ಞಾನದಲ್ಲಿ ಮಂಗಳೂರು ವಿವಿಯಿಂದ ಎಂ.ಎಸ್ಸಿ. ಹಾಗೂ ಮತ್ತು 1997ರಲ್ಲಿ ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಇದರೊಂದಿಗೆ ಎಂಬಿಎ ಪದವಿಯನ್ನೂ ಪಡೆದಿದ್ದಾರೆ. ಇವರು ಪೋಸ್ಟ್ ಡಾಕ್ಟರಲ್ ತರಬೇತಿಯನ್ನು ಕೆನಡಾ ಮತ್ತು ಅಮೆರಿಕದ ವಿವಿಗಳಿಂದ ಪಡೆದಿದ್ದಾರೆ. ಅಮೆರಿಕದಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಡಾ.ರವಿರಾಜ್, 2020ರಲ್ಲಿ, ಕಾರ್ಪೊರೇಟ್ ಸಂಬಂಧಗಳ ಸ್ಥಾಪಕ ನಿರ್ದೇಶಕರಾಗಿ ಮಾಹೆ ವಿವಿಯನ್ನು ಸೇರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.