



ಕಾರ್ಕಳ : ಧರ್ಮಸ್ಥಳದ ಧರ್ಮಾಧಿಕಾರಿ, ರಾಜರ್ಷಿ ಡಾ. ವಿರೇಂದ್ರ ಹೆಗ್ಗಡೆ, ಬಾಹುಬಲಿ ಖ್ಯಾತಿಯ, ಚಲನಚಿತ್ರ ಸಂಭಾಷಣಕಾರ ಮೂಲತಃ ಕರ್ನಾಟಕದವರಾದ ಕೆ.ವಿ ವಿಜೆಯೇಂದ್ರ ಪ್ರಸಾದ್, ಮಾಜಿ ಅತ್ಲೆಟಿಕ್ ಪಿ.ಟಿ ಉಷಾ, ಮತ್ತು ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ, ಇವರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರಕಾರ ರಾಜ್ಯ ಸಭೆಗೆ ನಾಮ ನಿರ್ದೇಶನ ಮಾಡಿ ರಾಜ್ಯ ಸಭೆಗೆ ಆಯ್ಕೆ ಮಾಡಿರುವುದಕ್ಕೆ ಕಾರ್ಕಳ ಭಾರತೀಯ ಜನತಾ ಪಕ್ಷ ತೀವ್ರ ಹರ್ಷ ವ್ಯಕ್ತ ಪಡಿಸಿದೆ. ಈಗಾಗಲೇ ಕರ್ನಾಟಕ ರಾಜ್ಯಾದ್ಯಂತ ಧರ್ಮಸ್ಥಳದ ಮೂಲಕ ವಿವಿಧೆಡೆ ಸಮಾಜ ಸೇವೆ, ಆರೋಗ್ಯ ವಿಕಾಸ,ಶಿಕ್ಷಣ,ಸಂಚಾರಿ ಆಸ್ಪತ್ರೆ, ಉಡುಪಿ ಹಾಗೂ ಹಾಸನದಲ್ಲಿ ಆರ್ಯುವೇದ ಆಸ್ಪತ್ರೆ. ಯೋಗ, ಪ್ರಕೃತಿ ಚಿಕಿತ್ಸೆ, ವಿಷೇಶವಾಗಿ ಗ್ರಾಮಾಭಿವೃದ್ಧಿ ಸ್ವಸಹಾಯ ಗುಂಪು, ಸ್ವ ಉದ್ಯೋಗ ತರಭೇತಿಯಂತಹ ಹಲವಾರು ಅಭಿವೃದ್ಧಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಡಾ.ವಿರೇಂದ್ರ ಹೆಗ್ಡೆಯವರನ್ನು ರಾಜ್ಯ ಸಭೆಗೆ ನೇಮಕ ಮಾಡಿರುವುದು ಪ್ರಧಾನಿ ನರೇಂದ್ರ ಮೋದಿಯವರ ಏಕ್ ಭಾರತ್ ಶ್ರೇಷ್ಠ ಭಾರತ್ ಗೆ ಮತ್ತೊಂದು ಗರಿ ಎಂದು ಕಾರ್ಕಳ ಮಂಡಲ ಬಿಜೆಪಿ ಅಧ್ಯಕ್ಷರಾದ ಮಹಾವೀರ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.