



ಪ್ರತಿಯೊಬ್ಬ ವ್ಯಕ್ತಿಗಳಿಗೂ ಸುಂದರವಾದ ಕಲ್ಪನೆಗಳಿವೆ ಅವುಗಳಿಗೆ ಬಣ್ಣವನ್ನು ಹಚ್ಚಿದಾಗ ಸುಂದರವಾದ ಚಿತ್ರ ಚಿತ್ರಕಲೆ ಹೊರಬರುವುದು ಎಂದು ಸುಬ್ರಮಣ್ಯ ಕಮಲಶಿಲೆ ಅವರು ಅಭಿಪ್ರಾಯಪಟ್ಟರು. ಅವರು ಡ್ಯುಯಲ್ ಸ್ಟಾರ್ ಶಾಲೆ ಅಮಾಸೆಬೈಲಿನಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಬೆಂಕಿ ರಹಿತ ಅಡುಗೆ ತಯಾರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಚಿಕ್ಕ ಮಕ್ಕಳಲ್ಲಿ ಕ್ರಿಯಾಶೀಲತೆ, ಕಲ್ಪನೆ ಕನಸುಗಳು ಜಾಸ್ತಿ ಇರುತ್ತದೆ. ಅವರಿಗೆ ಸರಿಯಾದ ಮಾರ್ಗದರ್ಶನವನ್ನು ನೀಡಿದರೆ ಅವುಗಳಮೇಲೆ ಆಸಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ ಅದಕ್ಕೆ ಇಂತಹ ಕಾರ್ಯಕ್ರಮ ಸೂಕ್ತ ವೇದಿಕೆಯಾಗಿದೆ ಎಂದು ಹೇಳಿದ್ದಾರೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲರಾದ ವಡ್ಡರ್ಸೆ ಪ್ರಕಾಶ್ ಆಚಾರ್ಯ ವಹಿಸಿದ್ದರು ಚಿತ್ರಕಲೆ ಶಿಕ್ಷಕರಾದ ಲೋಕೇಶ್ ಆಚಾರ್ಯ ತೆಕ್ಕಟ್ಟೆ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಸುಯೋಗ ಹೆಗ್ಡೆ, ಶಾಲಾ ಉಪಾಧ್ಯಕ್ಷ ಸಚ್ಚಿದಾನಂದ ಅಡಿಗ, ಶಾಲಾ ಸಂಚಾಲಕ ಶಶಿಧರ್ ದೇವಾಡಿಗ, ಸಂಘದ ಕಾರ್ಯದರ್ಶಿ ಪ್ರತೀಕ್ ರಾವ್, ವಿದ್ಯಾರ್ಥಿ ಮುಖಂಡ ಪವನ್ ಕಲ್ಕೋರ್ ಹಾಗೂ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು. ಸಚ್ಚಿದಾನಂದ ಅಡಿಗ ಸ್ವಾಗತಿಸಿದರು, ಶಶಿಧರ್ ದೇವಾಡಿಗ ವಂದಿಸಿದರು, ವಿಘ್ನೇಶ್ ದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.