



ಉಡುಪಿ:ವಿದ್ಯುತ್ ಪ್ರವಹಿಸಿ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ 76 ನೆ ಬಡಗಬೆಟ್ಟು ಒಳಕಾಡು ಎಂಬಲ್ಲಿ ನಡೆದಿದೆ. ಬ್ರಹ್ಮಾವರ ವಿದ್ಯಾ ನಿಕೇತನ ಶಾಲೆಯ ವಾಹನ ಚಾಲಕ ಚಂದ್ರಜೋಗಿ(45)ಮೃತಪಟ್ಟ ದುರ್ದೈವಿ ರಾತ್ರಿ ಊಟಕ್ಕೆ ಚಟ್ನಿ ತಯಾರಿಸುವ ಬಗ್ಗೆ ಮಿಕ್ಸಿ ಆನ್‌ಮಾಡುವಾಗ, ಮಿಕ್ಸಿಯ ವಿದ್ಯುತ್ ಪ್ರವಾಹ ತಂತಿಯಲ್ಲಿ ತೊಂದರೆಯಿದ್ದುದನ್ನು ಸರಿಪಡಿಸಲು ಹೋದಾಗ ವಿದ್ಯುತ್ ಪ್ರವಾಹಕ್ಕೆ ಒಳಗಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಉಡುಪಿ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಜೋಗಿ ಯವರು ಮಾರ್ಗಮಧ್ಯೆ ಮೃತಪಟ್ಟಿದ್ದಾರೆ . ಈ ಬಗ್ಗೆ ಉಡುಪಿ ನಗರ ಠಾಣೆ ಪ್ರಕರಣ ದಾಖಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.