


ಸ್ಫೋಟಕ ವಸ್ತುವನ್ನು ನೀರಿಗೆಸೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಂಧನಕ್ಕೊಳಗಾಗಿರುವ ಡ್ರೋನ್ ಖ್ಯಾತಿಯ ಡ್ರೋಣ್ ಪ್ರತಾಪ ಗೆ ಜೈಲೇ ಫಿಕ್ಸ್ ಆಗತ್ತಾ ಎನ್ನುವ ಪ್ರಶ್ನೆ ಶುರುವಾಗಿದೆ.
ಸೋಡಿಯಂ ಮೆಟಲ್ ಸ್ಪೋಟ ಪ್ರಕರಣದಲ್ಲಿ ಸಿಕ್ಕಾಕಿಕೊಂಡಿರೋ ಡ್ರೋನ್ ಪ್ರತಾಪ್ ಅವರ ಮೂರು ದಿನದ ಪೊಲೀಸ್ ಕಸ್ಟಡಿ ಅವಧಿ ಮುಗಿಯಲಿದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ 11ಗಂಟೆ ಸುಮಾರಿಗೆ ಪೊಲೀಸರು ಅವರನ್ನು ಮಧುಗಿರಿ ಜೆಎಂಎಫ್ ಸಿ ಕೋರ್ಟ್ ಗೆ ಹಾಜರುಪಡಿಸಲಿದ್ದಾರೆ. ಇದೀಗ ಪ್ರತಾಪ್ ಜೊತೆ ಈ ಪ್ರಕರಣದಲ್ಲಿ ಭಾಗಿಯಾಗಿರುವ ಪ್ರತಾಪ್‌ನ ಇಬ್ಬರು ಸ್ನೇಹಿತರನ್ನು ಮಿಡಿಗೇಶಿ ಪೊಲೀಸರು ಬಂಧಿಸಿದ್ದಾರೆ. ಕ್ಯಾಮೇರಾ ಮ್ಯಾನ್ ವಿನಯ್, ಹಾಗೂ ಸೋಡಿಯೋಂ ಕೊಡಿಸಿದ್ದ ಪ್ರಜ್ವಲ್ ಕೂಡ ಬಂಧನಕ್ಕೊಳಗಾಗಿದ್ದಾರೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿರುವ ಡ್ರೋನ್ ಪ್ರತಾಪ್‌ನನ್ನು ಶನಿವಾರ ಬೆಂಗಳೂರಿನ ಕೊತ್ತನೂರಿಗೆ ಕರೆದೊಯ್ದು, ಸೋಡಿಯಂ ಮೆಟಲ್ ಸಂಗ್ರಹದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲಾಗಿದೆಯಂತೆ. ಪ್ರಕರಣದ ತನಿಖೆ ಅಂತ್ಯವಾಗುವವರೆಗೂ ಪ್ರತಾಪ್ ಮತ್ತು ಸ್ನೇಹಿತರಿಗೆ ಜೈಲ್ ಫಿಕ್ಸ್ ಎನ್ನಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.