logo
WhatsApp Image 2026-04-02 at 14.46.04.jpeg
hindalco everlast.jpeg

ಕಡಲತೀರದಲ್ಲಿ ನೀರಿನಲ್ಲಿ ಆಟವಾಡುತಿದ್ದಾಗ ಮುಳುಗಿ ಮೃತ್ಯು.ಇಬ್ಬರ ರಕ್ಷಣೆ.

ಟ್ರೆಂಡಿಂಗ್
share whatsappshare facebookshare telegram
6 Oct 2021
post image

ಕಡಲತೀರದಲ್ಲಿ ನೀರಿನಲ್ಲಿ ಆಟವಾಡುತಿದ್ದಾಗ ಮುಳುಗಿ ಮೃತ್ಯು.ಇಬ್ಬರ ರಕ್ಷಣೆ.

ಉಡುಪಿ: ಜಿಲ್ಲೆಯ ಮಲ್ಪೆ ಕಡಲ ತೀರದಲ್ಲಿ ನೀರಿನಲ್ಲಿ ಆಡುತ್ತಿದ್ದ ವೇಳೆ ನೀರಿನಲ್ಲಿ ಮುಳುಗಿ ಯುವಕನೋರ್ವ ಮೃತಪಟ್ಟ ಘಟನೆ ಇಂದು ನಡೆದಿದೆ. ತುಮಕೂರಿನ ಅತ್ತರ್(23) ಎಂಬಾತ ಮೃತಪಟ್ಟರು .ಅ.5 ಮಧ್ಯಾಹ್ನ 12:00 ಗಂಟೆಗೆ ಮಲ್ಪೆ ಬೀಚ್ ಗೆ ಬಂದು ಮಧ್ಯಾಹ್ನ 2:00 ಗಂಟೆಗೆ ಸಲೀಂ, ಸಲ್ಮಾನ್, ಇಲಿಯಾಸ್, ಅರ್ಬಾಸ್, ಅತ್ತರ್, ಸುಹೇಲ್ ಇವರು ಸಮುದ್ರ ನೀರಿನಲ್ಲಿ ಆಟ ಆಟಲು ಸಮುದ್ರಕ್ಕೆ ಇಳಿದಿದಾರೆ, ಸಮುದ್ರದ ಅಲೆಗಳ ಅಬ್ಬರಕ್ಕೆ ಸಲ್ಮಾನ್, ಅರ್ಬಾಸ್, ಅತ್ತರ್ ನೀರಿನಲ್ಲಿ ಮುಳುಗಿದ್ದು, ಆ ಪೈಕಿ ಸಲ್ಮಾನ್ ಮತ್ತು ಅರ್ಬಾಸ್ ನನ್ನು ಮಲ್ಪೆ ಬೀಚ್ ನ ಟೂರಿಸ್ಟ್ ಬೋಟ್ ನವರು ರಕ್ಷಣೆ ಮಾಡಿದ್ದರು.. ಆದರೆ ಅತ್ತರ್ ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದು, ಮಧ್ಯಾಹ್ನ 3:00 ಗಂಟೆಗೆ ಅತ್ತರ್ ಮೃತದೇಹ ನೀರಿನಲ್ಲಿ ದೊರಕಿದೆ.. ಅತ್ತರ್ ಮಲ್ಪೆ ಬೀಚ್ ನಲ್ಲಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿರುವಾಗ ನೀರಿನ ಅಬ್ಬರಕ್ಕೆ ಸಿಲುಕಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.