



ಚಿಕ್ಕಬಳ್ಳಾಪುರ: ತಾಯಿಯ ಸಾವಿನಿಂದ ನೊಂದು ಅಕ್ಕ ಹಾಗೂ ತಮ್ಮ ರೈಲಿನ ಹಳಿಯಲ್ಲಿ ಮಲಗಿ ಸಾವಿಗೆ ಶರಣಾಗಿರುವ ಘಟನೆ ಶಿಡ್ಲಘಟ್ಟದಲ್ಲಿ ನಡೆದಿದೆ.
ಮೃತರು ಪ್ರೇಮನಗರ ನವ್ಯ ಅಲಿಯಾಸ್ ಶಿಲ್ಪ (25) ಮತ್ತು ಪ್ರಭು(23) . ಶಿಡ್ಲಘಟ್ಟದ ಮಾರ್ಗವಾಗಿ ಬೆಂಗಳೂರಿನಿಂದ ಕೋಲಾರಕ್ಕೆ ತೆರಳುವ ರೈಲಿಗೆ ಹಳಿ ಮೇಲೆ ಮಲಗಿ ಇವರು ಸಾವಿಗೆ ಶರಣಾಗಿದ್ದಾರೆ.
ತಾಯಿಯ ಸಾವು ಇವರಿಬ್ಬರನ್ನು ತೀವ್ರವಾಗಿ ಕಾಡಿತ್ತು ಎನ್ನಲಾಗಿದೆ. ಪ್ರಭು ಈ ಹಿಂದೆ ಮನೆಯ ಮೇಲಿನಿಂದ ಬಿದ್ದು ಸಾವಿಗೆ ಯತ್ನಿಸಿದ್ದ. ಆದರೆ ಅದು ವಿಫಲವಾಗಿತ್ತು. ಇದೀಗ ನವ್ಯ ಹಾಗೂ ಪ್ರಭು ತಮ್ಮಿಬ್ಬರ ಕೈಗಳನ್ನು ದಾರದಿಂದ ಕಟ್ಟಿಕೊಂಡು ಶಿಡ್ಲಘಟ್ಟ ರೈಲ್ವೆ ನಿಲ್ದಾಣಕ್ಕೆ ಕೂಗಳತೆ ದೂರದಲ್ಲಿನ ಶೆಟ್ಟಪ್ಪನವರ ತೋಪಿನ ಪಕ್ಕ ಹಾದು ಹೋಗುವ ರೈಲು ಹಳಿ ಮೇಲೆ ತಲೆಯಿಟ್ಟು ಮಲಗಿ ಸಾವಿಗೆ ಶರಣಾಗಿದ್ದಾರೆ. ಸಂಜೆಯಾದರೂ ಮಕ್ಕಳು ಮನೆಗೆ ಬಾರದೇ ಇದ್ದಾಗ ಆತಂಕಗೊಂಡ ತಂದೆ ನಟರಾಜ್ ಮರುದಿನ ಸುತ್ತಮುತ್ತಾ ಹುಡುಕಾಡಿದ್ದಾರೆ. ಆದರೆ ಬಳಿಕ ಮಕ್ಕಳು ಸಾವಿಗೆ ಶರಣಾಗಿರುವ ವಿಷಯ ತಿಳಿದು ಬಂದಿದೆ.
ಲಲಿತಮ್ಮ ಮತ್ತು ನಟರಾಜ್‌ಗೆ ಮೂವರು ಮಕ್ಕಳಿದ್ದು ಮೊದಲನೆ ಪುತ್ರ ನವೀನ್ ಮರಗೆಲಸ ಮಾಡುತ್ತಿದ್ದ. ನವ್ಯ ಮತ್ತು ಪ್ರಭು ಮನೆಯಲ್ಲೇ ಇರುತ್ತಿದ್ದರು. ಇವರು ಹೆಚ್ಚಾಗಿ ತಾಯಿಯ ಜೊತೆಗೆಯೇ ಇರುತ್ತಿದ್ದರು ಎಂದು ತಿಳಿದು ಬಂದಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.