



ಬೆಂಗಳೂರು:ಪಡಿತರ ಚೀಟಿದಾರರ ಇ-ಕೆವೈಸಿ ಪ್ರಕ್ರಿಯೆಯನ್ನು ಆಯಾ ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಲ್ಲಿ ಸಂಗ್ರಹಿಸಲಾಗುತ್ತಿದೆ. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸರ್ಕಾರ ಅಕ್ಟೋಬರ್ 1 ರಿಂದ 10 ರವರೆಗೆ ಅವಧಿ ವಿಸ್ತರಣೆಯನ್ನು ಮಾಡಿ ಕೊನೆಯ ಅವಕಾಶ ನೀಡಿದೆ.
ಇದುವರೆಗೆ ಇ-ಕೆವೈಸಿ ಪ್ರಕ್ರಿಯೆಯನ್ನು ಮಾಡಿಸದ ಆದ್ಯತಾ ಮತ್ತು ಆದ್ಯತೇತರ ಪಡಿತರ ಚೀಟಿ ಕುಟುಂಬ ಸದಸ್ಯರುಗಳು ಕಡ್ಡಾಯವಾಗಿ ಈ ಅವಧಿಯ ಒಳಗಾಗಿ ಇ-ಕೆವೈಸಿ ಮಾಡಿಸುವುದು.ಒಂದು ವೇಳೆ ತಮ್ಮ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರು ಮರಣ ಹೊಂದಿದ್ದು ಅಥವಾ ಕೆಲಸ ನಿಮಿತ್ತ ವಿವಾಹವಾಗಿ ಬೇರೆ ಊರಿನಲ್ಲಿ ಅಥವಾ ಬೇರೆ ರಾಜ್ಯ, ವಿದೇಶದಲ್ಲಿ ನೆಲೆಸಿದ್ದಲ್ಲಿ ಅಂತಹ ಸದಸ್ಯರ ವಿವರವನ್ನು ನ್ಯಾಯಬೆಲೆ ಅಂಗಡಿ ಮಾಲಿಕರಿಗೆ ನೀಡುವುದು ಕುಟುಂಬ ಸದಸ್ಯರ ಕರ್ತವ್ಯವಾಗಿದ್ದು, ಮಾಹಿತಿ ನೀಡಲು ಕೋರಿದೆ.
6 ವರ್ಷ ಮೇಲ್ಪಟ್ಟ ಮಕ್ಕಳ ಆಧಾರ್ ಬಯೋ ಅಪ್‍ಡೇಟ್ ಮಾಡಿಸಿ ಇ-ಕೆವೈಸಿ ಮಾಡಿಸಲು ಇದು ಕೊನೆಯ ಅವಕಾಶವಾಗಿದ್ದು, ಅಕ್ಟೋಬರ್ 10 ರೊಳಗೆ ಇ-ಕೆವೈಸಿ ಮಾಡಿಸಲು ಕೋರಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.