



ರಾತ್ರಿಯ ನೆಮ್ಮದಿಯ ನಿದ್ರೆಯನ್ನೂ ಹಾಳು ಮಾಡುವ ಈ ಸೊಳ್ಳೆಗಳಿಗೆ ಮುಕ್ತಿ ಹಾಡಲು ನೈಸರ್ಗಿಕ ಮತ್ತು ಸುರಕ್ಷಿತ ಮದ್ದುಗಳೇ ಒಳ್ಳೆಯ ಪರಿಹಾರ. ಮಾರುಕಟ್ಟೆಯಲ್ಲಿ ಲಭ್ಯವಿರುವ ಸೊಳ್ಳೆ ನಿವಾರಕಗಳು ತಕ್ಷಣದ ಪರಿಣಾಮವನ್ನು ಬೀರಬಹುದು, ಆದರೆ ಅವುಗಳಲ್ಲಿರುವ ರಾಸಾಯನಿಕಗಳು ನಮ್ಮ ಆರೋಗ್ಯಕ್ಕೆ, ವಿಶೇಷವಾಗಿ ಚಿಕ್ಕ ಮಕ್ಕಳಿಗೆ ಹಾನಿಕಾರಕ. ಅದಕ್ಕೆ ನಿಮ್ಮ ಮನೆಯಲ್ಲೇ ತಯಾರಿಸಬಹುದಾದ ಸೊಳ್ಳೆ ನಿವಾರಕಗಳು ಇಲ್ಲಿದೆ ನೋಡಿ.
ಬೆಳ್ಳುಳ್ಳಿ: ಸೊಳ್ಳೆಗಳು ಬೆಳ್ಳುಳ್ಳಿಯ ವಾಸನೆಯನ್ನು ಸಹ ಇಷ್ಟಪಡುವುದಿಲ್ಲ. ಬೆಳ್ಳುಳ್ಳಿ ರಸವನ್ನು ನೀರಿನಲ್ಲಿ ಬೆರೆಸಿ ಸಿಂಪಡಿಸುವುದರಿಂದ ಸೊಳ್ಳೆಗಳ ಕಾಟದಿಂದ ಮುಕ್ತಿ ಸಿಗುತ್ತದೆ.
ನಿಂಬೆಹಣ್ಣು ಮತ್ತು ಲವಂಗ: ಲವಂಗವನ್ನು ನಿಂಬೆ ಹೋಳುಗಳಾಗಿ ಜೋಡಿಸಿ ಕೋಣೆಯಲ್ಲಿ ಇರಿಸಿ. ಈ ವಾಸನೆಯಿಂದ ಸೊಳ್ಳೆಗಳು ಓಡಿಹೋಗುತ್ತವೆ.
ವಿನೆಗರ್: ನೀರು ಮತ್ತು ವಿನೆಗರ್ ಬೆರೆಸಿ ಕೋಣೆಯಲ್ಲಿ ಸಿಂಪಡಿಸುವುದರಿಂದ ಸೊಳ್ಳೆಗಳ ಸಂಖ್ಯೆ ಕಡಿಮೆಯಾಗುತ್ತದೆ.
ಪರಿಮಳಯುಕ್ತ ಸಸ್ಯಗಳು: ಸಿಟ್ರೊನೆಲ್ಲಾ ಮತ್ತು ತುಳಸಿಯಂತಹ ಸಸ್ಯಗಳು ಸೊಳ್ಳೆಗಳನ್ನು ದೂರವಿಡುತ್ತವೆ, ಆದ್ದರಿಂದ ಅಂತಹ ಸಸ್ಯಗಳನ್ನು ಮನೆಯಲ್ಲಿ ಇಡುವುದರಿಂದ ಸೊಳ್ಳೆಗಳ ಕಾಟವನ್ನು ಕಡಿಮೆ ಮಾಡಬಹುದು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.