


ಕಾರ್ಕಳ: ತ್ಯಾಜ್ಯ ವಿಲೇವಾರಿ ಸಮಸ್ಯೆ ಎಂದು ಪರಿಗಣಿಸುವುದು ಥರವಲ್ಲ . ಸಮರ್ಪಕವಾಗಿ ನಿರ್ವಹಣೆ ಹಾಗು ವಿಲೇವಾರಿ ಮಾಡುವುದರಿಂದ ಆರ್ಥೀಕ ಕ್ರೋಡಿಕರಣಗೊಂಡು ಉದ್ಯೋಗ ಅವಕಾಶಕ್ಕೆ ವಿಪುಲ ಅವಕಾಶ ನೀಡುತ್ತದೆ ಎಂದು ಮಂಗಳೂರಿನ ರಾಮಕೃಷ್ಣ ಮಠದ ಏಕಗಮ್ಯನಂದಜೀ ಸ್ವಾಮೀಜಿ ಹೇಳಿದರು. ಐತಿಹಾಸಿಕ ರಾಮಸಮುದ್ರ ಪರಿಸರದಲ್ಲಿ ಸ್ವಚ್ವ ಕಾರ್ಕಳ ಬ್ರಿಗೇಡ್ ವತಿಯಿಂದ ೧೦೦ನೇ ಸ್ವಚ್ಚತಾ ಅಭಿಯಾನದ ಪ್ರಯುಕ್ತ ಆಯೋಜಿಸಿದ ಸ್ವಚ್ಚ ಸಂಗಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಯೋಜನೆ ಫಲಪ್ರದವಾದರೆ ಜನರ ಸಹಕಾರ ತನ್ನಿಂದ ತಾನೇ ಬರುತ್ತದೆ. ಸ್ವಚ್ಚತೆಯ ಜಾಗೃತಿ ಮೂಡಿಸಿ ಜನರ ಸಮಸ್ಸೆಗೆ ಸ್ಪಂದಿಸಿದಾಗ ಸ್ವಚ್ಚತೆಗೆ ಒತ್ತು ದೊರೆಯುತ್ತಿದೆ. ಸ್ವಚ್ಚ ಪರಿಸರ, ಉತ್ತಮ ಆರೋಗ್ಯ ದೊರೆಯಲು ಸಾಧ್ಯ.ಎಂದು ಹೇಳಿದರು .
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನೀಲ್ ಕುಮಾರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಸ್ವಚ್ಚತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕಾರ್ಕಳದ ನಿಟ್ಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪದವಿನಲ್ಲಿ ಎಂಆರ್‌ಎಫ್ ಘಟಕ ಸ್ಥಾಪಿಸಿಸುವ ಉದ್ದೇಶ ಹೊಂದಲಾಗಿದೆ. ಅದಕ್ಕೆ ರೂ.೨ ಕೋಟಿ ಅನುದಾನ ಬಿಡುಗಡೆಗೊಂಡಿದ್ದು, ರಾಜ್ಯದಲ್ಲಿಯೇ ಮೊದಲ ಪ್ರಯೋಗವಾಗಲಿದೆ ಎಂದರು . ಅಭಿವೃದ್ಧಿ ಎಂದರೆ ಒಂದಿಷ್ಟು ಸ್ವಾರ್ಥತನವನ್ನು ಬದಿಗಿಡಬೇಕಾಗುತ್ತದೆ.ತ್ಯಾಗ ಮನೋಭಾವ ಇರಬೇಕಾಗುತ್ತದೆ. ಸಾಮಾಜಿಕ ಅಭಿವೃದ್ಧಿ, ಪರಿವರ್ತನೆಗಳು ಸರಕಾರ ಹಾಗೂ ಜನಪ್ರತಿನಿಧಿ ಗಳಿಂದ ಮಾತ್ರ ನಿರೀಕ್ಷಿಸಲು ಸಲ್ಲದು. ಯುವ ಮನಸ್ಸುಗಳು ಒಂದಾಗಿ ಇಂತಹ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕೆಂದರು. ಪುರಸಭಾ ಹಿರಿಯ ಆರೋಗ್ಯಾಧಿಕಾರಿ ಲೈಲಾ ಥೋಮಸ್, ಸ್ವಚ್ಛ ಭಾರತ್ ಮಿಶನ್ ನೋಡಲ್ ಅಧಿಕಾರಿ ಶ್ರೀನಿವಾಸ ರಾವ್ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.