logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಭೂಮಿ ಹಾಗು ವನ್ಯಜೀವಿ ಉಳಿಸಿ ಎಂಬ ಧ್ಯೇಯವನ್ನಿರಿಸಿಕೊಂಡು ದೇಶದಾದ್ಯಂತ ಜಾಗೃತಿ ಮೂಡಿಸುಲಿರುವ ಹಿರಿಯಡ್ಕದ ಯುವಕ

ಟ್ರೆಂಡಿಂಗ್
share whatsappshare facebookshare telegram
30 Mar 2022
post image

ಕಾರ್ಕಳ: ಪರಿಸರ ಉಳಿಸುವುದು ಪ್ರತಿಯೊಬ್ಬ ನಾಗರೀಕನ ಆದ್ಯ ಕರ್ತವ್ಯ ಪರಿಸರ ಉಳಿದರೆ ಈ ಭೂಮಿಯಲ್ಲಿ ಉಳಿಯುತ್ತಾನೆ ಎಂಬ ಉದ್ದೇಶವನ್ನುಟ್ಟು ಕೊಂಡು ಉಡುಪಿ ಜಿಲ್ಲೆಯ ಹಿರಿಯಡ್ಕದ ಕಾಜಾರಗುತ್ತುವಿನ ಯುವಕನೊಬ್ಬ ದೇಶವ್ಯಾಪ್ತಿಯಲ್ಲಿ ಸುಮಾರು ೧೬೦೦೦ ಕಿ ಮಿ ಬೈಕ್ ರ‍್ಯಾಲಿಯನ್ನು ಮಾಡಲು ಮುಂದಾಗಿದ್ದಾನೆ . ಆ ಮೂಲಕ ಭೂಮಿ ಕಾಡು ಪ್ರಾಣಿ ಪಕ್ಷಿ ಪರಿಸರ ಜಾಗೃತಿ ಗಾಗಿ ಸಿಧ್ಧನಾಗಿದ್ದಾನೆ . ಹಿರಿಯಡ್ಕದ ಪುತ್ತಿಗೆ ನಿವಾಸಿ ಕಾಜರ ಗುತ್ತಿನ ನಲವತ್ತರ ಹರೆಯದ ಯುವಕ ಗುರುರಾಜ್ ನಾಯಕ್ ,. ಈ ಸುದ್ದಿಯ ಕೇಂದ್ರ ಬಿಂದು . ಮಣಿಪಾಲದ ಖಾಸಗಿ ಸಂಸ್ಥೆಯೊAದರಲ್ಲಿ ಲೆಕ್ಕ ವಿಭಾಗದಲ್ಲಿ ವೃತ್ತಿ ನಿರ್ವಹಿಸುತ್ತಿರುವ ಇವರಿಗೆ ಬಾಲ್ಯದಲ್ಲಿಯೆ ಪರಿಸರದ ಮೇಲಿನ ಎಲ್ಲಿಲ್ಲದ ಕಾಳಜಿ . .ಸ್ವಚ್ಚ ಪರಿಸರದ ಜಾಗೃತಿ ಮೂಡಿಸುವ ಕೈಂಕರ್ಯಕ್ಕೆ ತೊಡಗಿಕೊಂಡರು . ಈ ಉದ್ದೇಶದಿಂದಲೆ ಅನೇಕ ಕಡೆಗಳಲ್ಲಿ ಚಾರಣವನ್ನು ಕೈಗೊಂಡಿದ್ದಾರೆ ಆ ಸಂದರ್ಭದಲ್ಲಿ ಪ್ರವಾಸಿಗರು ಎಸೆದಿರುವ ಪ್ಲಾಸ್ಟಿಕ್ ಕವರ್ , ಕುಡಿದು ಎಸೆದ ಬಾಟಲ್ಸ್ ಗಳನ್ನು ಸಂಗ್ರಹಿಸಿ ಸಮೀಪದ ಡಂಪಿAಗ್ ಯಾರ್ಡ್ಗಳಿಗೆ ತಲುಪಿಸುತಿದ್ದಾರೆ .

ನೀರಿಗಾಗಿ ಜನಜಾಗೃತಿ : ೨೦೧೮ ರಲ್ಲಿ ಇವರು ಮೊದಲಬಾರಿಗೆ ಹೊಸ ಸಾಹಸಕ್ಕೆ ಮುಂದಾಗಿದ್ದರು , ಮಾನವನ ಬದುಕಜಿಗೆ ಅತ್ಯಗತ್ಯತೆಗಳಲ್ಲಿ ಒಂದಾದ ಶುದ್ದ ಕುಡಿಯುವ ನೀರಿನ ಕುರಿತು ಜನ ಜಾಗೃತಿ ಮೂಡಿಸಿದ ಇವರು ವಿವಿಧ ರಾಜ್ಯಗಳನ್ನು ಸಂಚರಿಸಿ ಕಾಶ್ಮೀರದÀ ಲಡಾಕ್ ವರೆಗೆ ಸುಮಾರು ೧೮೦೦೦ ಕಿ.ಮೀ ಕ್ರಮಿಸಿ ಜನ ಜಾಗೃತಿ ಮೂಡಿಸಿದ್ದರು

ಈ ಬಾರಿಯ ಬೈಕ್ ರ‍್ಯಾಲಿಯಲ್ಲಿ ಅಖಂಡ ಜಮ್ಮು ಕಾಶ್ಮಿರ ,ಮಿಝೋರಾಂ , ಮಣಿಪುರ ಹೊರತು ಪಡಿಸಿ ಉಳಿದ ಎಲ್ಲಾ ರಾಜ್ಯಗಳ ಪ್ರಯಾಣ ಮುಂದುವರೆಸಲಿದ್ದಾರೆ. ಎಪ್ರಿಲ್ ೧ ರಂದು ಯುಗಾದಿಯ ಹಬ್ಬದ ಶುಭ ಸಂದರ್ಭದಲ್ಲಿ ಹರಿಖಂಡಿಗೆ ಬಳಿಯ ಶೀರೂರು ಮೂಲ ಮಠದಿಂದ ಪೂಜಾ ಕೈಕಂರ್ಯಗಳನ್ನು ನೆರವೇರಿಸಿ ಪ್ರಯಾಣಕ್ಕೆ ಚಾಲನೆ ನೀಡಲಿದ್ದಾರೆ . ನೇರವಾಗಿ ರಾಜಸ್ಥಾನದ ಕಡೆಗೆ ತಮ್ಮ ಪ್ರಯಾಣ ಬೆಳೆಸಲಿದ್ದಾರೆ . ಇವರು ಸರಾಸರಿ ೫೦೦ ಕಿ.ಮಿ ಕ್ರಮಿಸಲಿದ್ದು ಈ ನಡುವೆ ಬೆಳಗ್ಗಿನ ಉಪಾಹಾರ , ಮಧ್ಯಾಹ್ನದ ಭೋಜನಾವಧಿ , ಸಂಜೆಯ ಫಲಾಹಾರ ಹಾಗು ರಾತ್ರಿಯ ವಿರಾಮದ ಅವಧಿಯಲ್ಲಿ ಬೈಕ್ ರ‍್ಯಾಲಿಯ ಉದ್ದೇಶ ಪರಿಸರ ಜನ ಜಾಗೃತಿ ಇವುಗಳ ಕುರಿತು ಮಾಹಿತಿಗಳನ್ನು ಆಯಾ ಆಯಾ ಪ್ರದೇಶಗಳ ಸ್ಥಳಿಯರಿಗೆ ನೀಡಲಿದ್ದಾರೆ . ಕೆಲವೆಡೆಗಳಲ್ಲಿ ಪ್ರಯಾಣಿಸುವ ದೂರವನ್ನು ಕಡಿತಗೊಳಿಸಿ ಪ್ರಚಾರ ಹಾಗು ಜನಜಾಗೃತಿ ಸಭೆಗಳನ್ನು ಹೆಚ್ಚಿಸಲಿದ್ದಾರೆ. ಒಟ್ಟಾರೆಯಾಗಿ ಎರಡು ತಿಂಗಳ ಕಾಲ ಮುಂಗಾರು ಮಳೆಗಾಲದ ಮುನ್ನ ಊರಿಗೆ ಆಗಮಿಸಲಿದ್ದಾರೆ .

ಪ್ರಚಾರಕ್ಕೆ ಸಿದ್ದವಾದ ಪರಿಕರಗಳು : ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈಗಾಗಲೆ ಆಂಗ್ಲ ಮತ್ತು ಹಿಂದಿ ಭಾಷೆಗಳಲ್ಲಿ ಸ್ಟಿಕ್ಕರ್ ಕರಪತ್ರಗಳನ್ನು ಮುದ್ರಿಸಲಾಗಿದೆ.

ನೇಪಾಳ , ಬಾಂಗ್ಲಾ ದೇಶ ಗಡಿ ಪ್ರದೇಶವಾದ ಡೌಕಿ ನದಿ ಚೈನ ಗಡಿಯ ನಾಥೂಲ ಪಾಸ್ , ತಮಾಂಗ್ , ಪಾಕಿಸ್ತಾ£ದ ಜೋಂಗವಾಲ ಗಡಿ , ಬರ್ಮ ಗಡಿಯ ಮೋನ್ ವಿಲೇಜ್ , ,,ಭೂತಾನ್ ಗಡಿಗು ತೆರಳಿ ಜನಜಾಗೃತಿ ಮೂಡಿಸಲಿದ್ದಾರೆ .

ದುಡಿದ ಸಂಪಾದನೆಯಲ್ಲಿ ಒಂದಿಷ್ಟು ಆದಾಯವನ್ನು ಶೇಖರಿಸಿಟ್ಟು ಅದರ ಸಂಪಾದನೆಯಿ0ದಲೆ ಈ ಬಾರಿಯ ಭೈಕ್ ರ‍್ಯಾಲಿ ಹಮ್ಮಿಕೊಂಡಿದ್ದೇನೆ . ಗುರುರಾಜ್ ನಾಯಕ್

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.