



ನವದೆಹಲಿ; ಬೆಲೆಏರಿಕೆಯಿಂದ ಕಂಗೆಟ್ಟಿರುವ ಜನತೆಗೆ ಮತ್ತೊಂದು ಹೊಡೆತ ಬೀಳುವ ಸಾಧ್ಯತೆ ದಟ್ಟವಾಗಿದೆ . ವಾಸ್ತವವಾಗಿ, ಪ್ರಸಕ್ತ ಹಣಕಾಸು ವರ್ಷದಲ್ಲಿ ಸುಮಾರು 76 ಮಿಲಿಯನ್ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ಹಿನ್ನೆಲೆಯಲ್ಲಿ ಯುನಿಟ್ ಗೆ 80 ಪೈಸೆ ಏರಿಕೆ ಕಾಣಲಿದೆ ಜೂನ್ 9ರಂದು ದಾಖಲೆಯ ವಿದ್ಯುತ್ ಬೇಡಿಕೆ 211 GW ಆಗಿತ್ತು. ಆದರೆ, ಮಾನ್ಸೂನ್ ಆರಂಭವಾದ ನಂತರ ಬೇಡಿಕೆ ಕಡಿಮೆಯಾಗಿದ್ದು, ಜುಲೈ 20 ರಂದು ಗರಿಷ್ಠ ವಿದ್ಯುತ್ ಬೇಡಿಕೆ 185.65 GW ಆಗಿತ್ತು. ಮೂಲಗಳ ಪ್ರಕಾರ, ಕೋಲ್ ಇಂಡಿಯಾದ ಕಲ್ಲಿದ್ದಲು ಜುಲೈ ಅಂತ್ಯದಿಂದ ಬರಲು ಪ್ರಾರಂಭಿಸುತ್ತದೆ ಮತ್ತು ನಂತ್ರ ಇದು ಆಗಸ್ಟ್-ಸೆಪ್ಟೆಂಬರ್‌ನಲ್ಲಿ ವಿದ್ಯುತ್ ಬಿಲ್ ಮೇಲೆ ಪರಿಣಾಮ ಬೀರುತ್ತದೆ. ಮೂಲಗಳ ಪ್ರಕಾರ, ಪೂರೈಕೆ ಕೊರತೆ ಅಕ್ಟೋಬರ್ 15ರವರೆಗೆ ಮುಂದುವರಿಯಬಹುದು ಎಂದು ಹೇಳಲಾಗಿದೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.