



ಕಾರ್ಕಳ: ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಕಾರ್ಕಳ ಇದರ ಸೇವಾಕೇಂದ್ರದಲ್ಲಿ ಫೆ.19 ರಂದು ಮಹಾಶಿವರಾತ್ರಿಯ ಪ್ರಯುಕ್ತ ಹೈಸ್ಕೂಲ್ ಮಕ್ಕಳಿಗೆ ಶಿವ ಭಕ್ತಿಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಕಳೆದ 38 ವರ್ಷಗಳಿಂದ ಈಶ್ವರೀಯ ಸೇವೆಯಲ್ಲಿ ತೊಡಗಿಕೊಂಡಿರುವ ಬ್ರಹ್ಮಕುಮಾರಿ ಬಿ.ಕೆ. ವಸಂತಿ ಇವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ, ಶಿವನನ್ನು ಅರಿತು ಶಿವರಾತ್ರಿ ಆಚರಿಸುವಂತೆ ಕರೆ ನೀಡಿದರು.
ಪರಮಾತ್ಮನು ಈ ಧರೆಗೆ ಬಂದು ಈಶ್ವರೀಯ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಮನುಷ್ಯರಿಗೆ ಸತ್ಯ ಜ್ಞಾನವನ್ನು ತಿಳಿಸಿ ಮಾನವರಿಂದ ದೇವ ಮಾನವರನ್ನಾಗಿ ಮಾಡುವಂತಹ ಶಿಕ್ಷಣ ನೀಡುತ್ತಿದ್ದು ದೇಶ ವಿದೇಶಗಳಲ್ಲಿ ಸಾವಿರಾರು ಸೇವಾ ಕೇಂದ್ರದಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಇದರ ಸದುಪ್ರಯೋಗ ಪಡೆದು ದೈವಿ ಗುಣಗಳನ್ನು ಧಾರಣೆ ಮಾಡಿ ವಿಶ್ವ ಶಾಂತಿಯ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಅವರು ತಿಳಿಸಿದರು.
ಮುಖ್ಯ ಅತಿಥಿ ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಮಾತನಾಡಿ, ವರ್ತಮಾನ ಸಮಯದಲ್ಲಿ ಧಾರ್ಮಿಕ ಹಾಗೂ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಈಶ್ವರೀಯ ಸಮಾಜದ ಸೇವೆ ಅನನ್ಯ ಎಂದರು.
ಇನ್ನೋರ್ವ ಅತಿಥಿ ಪುರಸಭಾ ಉಪಾಧ್ಯಕ್ಷೆ ಪಲ್ಲವಿ ಪ್ರವೀಣ್ ಮಾತನಾಡಿ, ಪ್ರತಿಯೊಬ್ಬರೂ ನೈತಿಕ ಶಿಕ್ಷಣವನ್ನು ಪಡೆಯಬೇಕೆಂದು ತಿಳಿಸಿದರು.
ಉದ್ಯಮಿ ಟಿ. ರಾಮ್‌ಚಂದ್ರ ನಾಯಕ್, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ನಾಯಕ್ ಸಾಣೂರು, ಪೂರ್ಣಿಮ ಕ್ಲೋತ್ ಶಾಪ್ ಮಾಲಕ ಹರಿಪ್ರಸಾದ್ ಪ್ರಭು ಉಪಸ್ಥಿತರಿದ್ದರು.
ಭಕ್ತಿಗೀತಾ ತೀರ್ಪುಗಾರರಾಗಿ ಗೀತಾ ಟೀಚರ್ ಸಾಣೂರು, ವಸಂತಿ ಕಡಂಬಳ, ಸುರೇಶ್ ನಿಟ್ಟೆ ಭಾಗವಹಿಸಿದರು.
ಪ್ರಥಮ ಬಹುಮಾನ ಎಸ್. ಎನ್.ವಿ ಪ್ರೌಢ ಶಾಲೆಯ ರಕ್ಷಿತಾ, ದ್ವಿತೀಯ ಬಹುಮಾನ ಆಶ್ರೀತಾ, ತೃತೀಯ ಬಹುಮಾನ ಶ್ರೇಯ ಪಡೆದರು.
ಬಿ. ಕೆ ವರದರಾಯ ಪ್ರಭು ಸ್ವಾಗತಿಸಿದರು. ಬಿ. ಕೆ ಅನ್ನಪೂರ್ಣ ಸಂಸ್ಥೆಯ ಪರಿಚಯ ನೀಡಿದರು. ಬಿ.ಕೆ ಶಾಂತ ವಂದಿಸಿದರು. ಸೇವಾಕೇಂದ್ರದ ಸಂಚಾಲಕಿ ಬಿ.ಕೆ ವಿಜಯಲಕ್ಷ್ಮೀ ನಿರೂಪಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.