logo
WhatsApp Image 2026-04-02 at 14.46.04.jpeg
hindalco everlast.jpeg

ಅಪರಿಮಿತ ವಾಹನ ಢಿಕ್ಕಿ : ಸ್ಥಳದಲ್ಲೇ ನರಿ ಸಾವು

ಟ್ರೆಂಡಿಂಗ್
share whatsappshare facebookshare telegram
18 Feb 2023
post image

ಹಿರಿಯಡ್ಕ: ಅಪರಿಚಿತ ವಾಹನವೊಂದು ಡಿಕ್ಕಿಯಾದ ಪರಿಣಾಮ ನರಿಯೊಂದು ಸ್ಥಳದಲ್ಲೇ ಮೃತಪಟ್ಟ ಘಟನೆ ಹಿರಿಯಡಕದ ಕೋಟ್ನಕಟ್ಟೆ ಸಮೀಪ ಇಂದು ರಾತ್ರಿ ನಡೆದಿದೆ. ಆಹಾರ ಹುಡುಕಿಕೊಂಡು ಬಂದ ನರಿಯೊಂದು ರಸ್ತೆ ದಾಟುವ ವೇಳೆ ರಭಸವಾಗಿ ಬಂದ ಯಾವುದೇ ವಾಹನ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ಗಂಭೀರವಾಗಿ ಗಾಯಗೊಂಡ ನರಿ ಸ್ಥಳದಲ್ಲೇ ಉಸಿರುಚೆಲ್ಲಿದೆ. ಚಾಲಕನು ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಬಳಿಕ ಅದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ಸಾರ್ವಜನಿಕರು ನರಿಯ ಮೃತದೇಹವನ್ನು ರಸ್ತೆಯ ಪಕ್ಕಕ್ಕೆ ಸರಿಸಿದ್ದಾರೆ .

ಸ್ಥಳಕ್ಕೆ ಧಾವಿಸದ ಅರಣ್ಯ ಇಲಾಖೆ : ವಾಹನ ಢಿಕ್ಕಿ ಹೊಡೆದು ಮೃತಪಟ್ಟ ನರಿಯ ಕಳೆಬರಹ ವನ್ನು ತೆಗೆಯುವಂತೆ ಸ್ಥಳೀಯರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದಾರೆ ಆದರು ಯಾವ ಅಧಿಕಾರಿಯು ಭೇಟಿ ನೀಡಿಲ್ಲ. ಆದರೆ ಸ್ಥಳೀಯರು ಶವವನ್ನು ಪಕ್ಕಕ್ಕೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು .

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.