



ಕಾರವಾರ(ಉತ್ತರ ಕನ್ನಡ): ಸಮುದ್ರ ಅಧ್ಯಯನಕ್ಕೆಂದು ಬುಧವಾರ ಪಣಜಿಯಿಂದ ಕಾರವಾರಕ್ಕೆ ಆಗಮಿಸುತ್ತಿದ್ದ ಸಿಂಧು ಸಾಧನ ನೌಕೆ ಇಂಜಿನ್ ದೋಷದಿಂದ ಅಪಾಯಕ್ಕೀಡಾಗಿತ್ತು.
ತಕ್ಷಣ ಎಚ್ಚೆತ್ತ ಭಾರತೀಯ ಕೋಸ್ಟ್ ಗಾರ್ಡ್ ಸಿಬ್ಬಂದಿ ನೌಕೆಯಲ್ಲಿದ್ದ ಎಂಟು ವಿಜ್ಞಾನಿಗಳು ಸೇರಿ 36 ಮಂದಿಯನ್ನು ರಕ್ಷಣೆ ಮಾಡಿದ್ದು, ಮುಳುಗುತ್ತಿದ್ದ ನೌಕೆಯನ್ನು ಸಿಐಆರ್, ಎನ್ಐಒ ಹಡಗುಗಳ ಮೂಲಕ ಗೋವಾದ ವಾಸ್ಕೋ ಬಂದರಿಗೆ ಸಾಗಿಸಿದ್ದಾರೆ. ನ್ಯಾಷನಲ್ ಓಷಿಯಾನೋಗ್ರಾಫಿಕ್ ಇನ್ಸ್ಸ್ಟಿಟ್ಯೂಟ್‌ನ ಸಿಂಧು ಸಾಧನ ನೌಕೆಯು ಅರಬ್ಬಿ ಸಮುದ್ರದಲ್ಲಿ ಸಂಶೋಧನೆಗಾಗಿ ಗೋವಾದಿಂದ ಹೊರಟಿತ್ತು. ಭೂ ಭಾಗದಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದಾಗ ನೌಕೆಯ ಇಂಜಿನ್ ವಿಫಲವಾಗಿದೆ.
ಹಡಗಿನಲ್ಲಿ 8 ವಿಜ್ಞಾನಿಗಳು ಮತ್ತು 28 ಸಿಬ್ಬಂದಿ ಇದ್ದರು. ಅವರನ್ನು ರಕ್ಷಿಸಿ ಗೋವಾಕ್ಕೆ ಕರೆತರಲಾಯಿತು. ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ಕೋಸ್ಟ್ ಗಾರ್ಡ್ ಡಿಐಜಿ ಕೆಎಲ್ ಅರುಣ್ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.