



ಲಂಡನ್::ಕೋವಿಶೀಲ್ಡ್ ಹಾಗೂ ಯಾವುದೇ ಯುಕೆ ಅನುಮೋದಿಸಿದ ಲಸಿಕೆ ಪಡೆದ ಭಾರತೀಯರಿಗೆ ವಿಧಿಸಿದ್ದ 10 ದಿನಗಳ ಕ್ವಾರಂಟೈನ್ ಅನ್ನು ಇಂಗ್ಲೆಂಡ್ ಸರ್ಕಾರ ಹಿಂಪಡೆದಿದೆ.ಇಂಗ್ಲೆಂಡ್ ಸರ್ಕಾರ ಭಾರತದಲ್ಲಿ ಸಂಪೂರ್ಣ ಲಸಿಕೆ ಪಡೆದ ಭಾರತೀಯ ಪ್ರಯಾಣಿಕರಿಗೆ ಇನ್ಮುಂದೆ ಇಂಗ್ಲೆಂಡ್ ನಲ್ಲಿ ಕ್ವಾರಂಟೈನ್ ನಲ್ಲಿರುವ ಅಗತ್ಯವಿಲ್ಲ ಹಾಗೂ ಈ ನಿಯಮ ಅ.11ರಿಂದ ಜಾರಿಗೆ ಬರಲಿದೆ. ಈ ಬಗ್ಗೆ ಟ್ವೀಟ್ ಮಾಡಿದ ಭಾರತದ ಬ್ರಿಟಿಷ್ ಹೈ ಕಮಿಷನರ್ ಅಲೆಕ್ಸ್ ಎಲ್ಲಿಸ್, ಅ. 11ರಿಂದ ಪೂರ್ಣ ಕೋವಿಶೀಲ್ಡ್ ಅಥವಾ ಯಾವುದೇ ಯುಕೆ ಅನುಮೋದಿಸಿದ ಲಸಿಕೆ ಪಡೆದ ಭಾರತೀಯರಿಗೆ ಇಂಗ್ಲೆಂಡ್ ನಲ್ಲಿ ಯಾವುದೇ ಕ್ವಾರಂಟೈನ್ ಇಲ್ಲ. ಈ ಬಗ್ಗೆ ನಿಕಟ ಸಂಪರ್ಕದಲ್ಲಿದ್ದ ಭಾರತ ಸರ್ಕಾರಕ್ಕೆ ಧನ್ಯವಾದಗಳು ಎಂದಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.