logo
WhatsApp Image 2026-04-02 at 14.46.04.jpeg
hindalco everlast.jpeg

ಸೇಂಟ್ ಅಲೋಶಿಯಸ್ ಎಐಎಂಐಟಿ ಕ್ಯಾಂಪಸ್‌ನಲ್ಲಿ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026

ಟ್ರೆಂಡಿಂಗ್
share whatsappshare facebookshare telegram
11 Feb 2026
post image

ಮಂಗಳೂರು: ಸೇಂಟ್ ಅಲೋಶಿಯಸ್ (ಪರಿಗಣಿತ ವಿಶ್ವವಿದ್ಯಾನಿಲಯ) ಇದರ ಸ್ಕೂಲ್ ಆಫ್ ಬಿಸಿನೆಸ್ ಆಂಡ್ ಮ್ಯಾನೇಜ್‌ಮೆಂಟ್‌ನ ಎಂಬಿಎ ವಿಭಾಗವು ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮ (EDP) – 2026 ಅನ್ನು ಫೆಬ್ರವರಿ 10 ರಂದು ಕೊಟೇಕಾರಿನ ಎಐಎಂಐಟಿ (AIMIT) ಕ್ಯಾಂಪಸ್‌ನ ಆರ್ಥರ್ ಶೆನಾಯ್ ಸ್ಮಾರಕ ಸಭಾಂಗಣದಲ್ಲಿ ಯಶಸ್ವಿಯಾಗಿ ಆಯೋಜಿಸಿತು.

ಬೆಳಿಗ್ಗೆ 9:00 ರಿಂದ ಸಂಜೆ 4:15 ರವರೆಗೆ ನಡೆದ ಈ ದಿನಪೂರ್ತಿ ಕಾರ್ಯಕ್ರಮದಲ್ಲಿ ಪ್ರಮುಖ ಉದ್ಯಮ ಮುಖಂಡರು, ಅಧ್ಯಾಪಕರು ಹಾಗೂ ಉದ್ಯಮಿಯಾಗಬಯಸುವ ಆಸಕ್ತ ವಿದ್ಯಾರ್ಥಿಗಳು ಭಾಗವಹಿಸಿ ವಿಚಾರ ವಿನಿಮಯ ನಡೆಸಿದರು.

ಕಾರ್ಯಕ್ರಮವನ್ನು ಕೆಸಿಸಿಐ (KCCI) ಅಧ್ಯಕ್ಷರಾದ ಶ್ರೀ ಪಿ. ಬಿ. ಅಹ್ಮದ್ ಮುದಸ್ಸರ್ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ವಿಶೇಷ ಉಪನ್ಯಾಸ ನೀಡಿದರು. ಎಐಎಂಐಟಿ ನಿರ್ದೇಶಕರಾದ ವಂ| ಡಾ| ಕಿರಣ್ ಕೊಥಾ ಎಸ್.ಜೆ. ಅವರು ಅಧ್ಯಕ್ಷೀಯ ಭಾಷಣ ಮಾಡಿದರು. ಡೀನ್ ಡಾ. ರಜನಿ ಸುರೇಶ್ ಅವರು ಕಾರ್ಯಕ್ರಮದ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರೆ, ಸಾಂತಾ ಕ್ಲಾರಾ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ನಡೆದ ಈ ಕಾರ್ಯಕ್ರಮದ ಸಂಯೋಜನೆಯಲ್ಲಿ ಡಾ. ಸ್ವಪ್ನಾ ರೋಸ್ ಪ್ರಮುಖ ಪಾತ್ರ ವಹಿಸಿದ್ದರು. ವಿದ್ಯಾರ್ಥಿ ಸಂಯೋಜಕರಾದ ರಿಯೋನಾ ತೆರೇಸಾ ತ್ರಿಂದಾದೆ ಸ್ವಾಗತಿಸಿ, ಜಿಲ್ಸನ್ ಹ್ಯಾನ್ಸನ್ ಮಚಾದೊ ವಂದಿಸಿದರು. ರೆನಿಶಾ ಲೋಬೊ ಕಾರ್ಯಕ್ರಮ ನಿರ್ವಹಿಸಿದರು. ತಾಂತ್ರಿಕ ಗೋಷ್ಠಿಗಳಲ್ಲಿ 'ಜ್ಯೂಸ್ ಬಾಟಲ್' ಸ್ಥಾಪಕಿ ಪ್ರೀತಿ ನಾಯಕ್, 'ಕೆವಿಪಿ ಬಿಸಿನೆಸ್ ಸೊಲ್ಯೂಷನ್ಸ್'ನ ಅಜಯ್ ಪ್ರಭು ಹಾಗೂ 'ರೋಹನ್ ಕಾರ್ಪೊರೇಶನ್' ನಿರ್ದೇಶಕ ಡಿಯೋನ್ ಮೊಂತೇರೋ ಅವರು ತಮ್ಮ ಉದ್ಯಮ ಪಯಣದ ಸ್ಫೂರ್ತಿದಾಯಕ ಅನುಭವಗಳನ್ನು ಹಂಚಿಕೊಂಡರು. ಕಾರ್ಯಕ್ರಮದ ಕೊನೆಯಲ್ಲಿ ನಡೆದ 'ಮೆಂಟರ್‌ಪಿಚ್' ಸಂವಾದದಲ್ಲಿ ವಾತಿಕಾ ಪೈ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿ ಉದ್ಯಮಿಗಳಾದ ಥೋಬಿಸ್ಮನ್ ಥಾಮಸ್, ಜೋಯಲ್ ಪಿಂಟೊ, ಐಶ್ವರ್ಯ ಫ್ರಾನ್ಸಿಸ್, ಮನೋಜ್ ಕುಮಾರ್, ಗ್ವೆನ್ ಡಿಸೋಜ, ಮೊಹಮ್ಮದ್ ತೈಸೀರ್ ಮತ್ತು ಆಕಾಶ್ ಎಂ.ಜೆ. ತಮ್ಮ ಉದ್ಯಮ ಯೋಜನೆಗಳನ್ನು ಮಂಡಿಸಿದರು. ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಹೊಸ ಸ್ಫೂರ್ತಿ ಮತ್ತು ಆತ್ಮವಿಶ್ವಾಸವನ್ನು ತುಂಬುವ ಮೂಲಕ ಯಶಸ್ವಿಯಾಗಿ ಮುಕ್ತಾಯಗೊಂಡಿತು.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.