logo
WhatsApp Image 2026-04-02 at 14.46.04.jpeg
hindalco everlast.jpeg

ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
30 Oct 2021
post image

ಮೂಡುಬಿದಿರೆ: ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಎರ್ಮಾಳ್ ರೋಹಿತ್ ಹೆಗ್ಡೆ ಅವರು ಆಯ್ಕೆಯಾಗಿದ್ದಾರೆ. ಮೂಡುಬಿದಿರೆಯ ಸಮಾಜ ಮಂದಿರದಲ್ಲಿ ಇಂದು (ಅ. 30) ನಡೆದ ಕಂಬಳ ಸಮಿತಿ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಇತರ ಪದಾಧಿಕಾರಿಗಳು: ಪ್ರಧಾನ ಕಾರ್ಯದರ್ಶಿ- ನಾರಾವಿ ರಕ್ಷಿತ್ ಜೈನ್, ಉಪಾಧ್ಯಕ್ಷ- ಹೊಕ್ಕಾಡಿಗೋಳಿ ರಶ್ಮಿತ್ ಶೆಟ್ಟಿ, ಪುತ್ತೂರು ಚಂದ್ರಹಾಸ ಶೆಟ್ಟಿ, ಬೆಳ್ಳಿಪಾಡಿ ಕೈಪಾ ಕೇಶವ ಭಂಡಾರಿ, ಜಪ್ಪು ಮನ್ಕುತೋಟ ಗುತ್ತು ಅನಿಲ್ ಶೆಟ್ಟಿ, ಕೊಳಕೆ ಇರ್ವತ್ತೂರು ಉದಯ್ ಕೋಟ್ಯಾನ್, ಕೋಶಾಧಿಕಾರಿ- ಮೂಡುಬಿದಿರೆ ನ್ಯೂ ಪಡಿವಾಲ್ಸ್ ಹರ್ಷವರ್ಧನ್ ಪಡಿವಾಲ್, ಓಟಗಾರರ ಪರವಾಗಿ- ಕೊಳಕೆ ಇರ್ವತ್ತೂರು ಆನಂದ್, ಜೊತೆ ಕಾರ್ಯದರ್ಶಿ-  ಸುದೇಶ್ ಕುಮಾರ್ ಅರಿಗ, ಸಿದ್ಧಕಟ್ಟೆ ಸಂದೀಪ್ ಶೆಟ್ಟಿ, ಕೌಡೂರು ಬೀಡು ಯತೀಶ್ ಭಂಡಾರಿ, ಸರಪಾಡಿ ಧನಂಜಯ ಶೆಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ಇರುವೈಲ್ ದೊಡ್ಡಗುತ್ತು ಜಗದೀಶ್ ಶೆಟ್ಟಿ ಅವರು‌ ನೇಮಕಗೊಂಡಿದ್ದಾರೆ ಎಂದು ಕಂಬಳ ಸಮಿತಿ ತಿಳಿಸಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.