



ಕಾರ್ಕಳ: ಜಾಗೃತಿ ಸಾಹಿತ್ಯಾಸಕ್ತ ಮಹಿಳಾ ಸಂಘಟನೆಯ ತಿಂಗಳ ಕಾರ್ಯಕ್ರಮವು ಕಾರ್ಕಳದ ವನಿತಾ ಸಮಾಜ ಸಭಾಂಗಣದಲ್ಲಿ ನಡೆಯಿತು. ಸಂಘದ ಸದಸ್ಯೆಯರಿಂದ ಪ್ರಬಂಧ ಮಂಡನೆ ನಡೆಯಿತು .ರಾಜಕೀಯದಲ್ಲಿ ಮಹಿಳೆ ಈ ವಿಷಯದ ಮೇಲೆ ಅನುಪಮಾ ಚಿಪ್ಲೂಂಣಕರ್ ಮಾತನಾಡಿ, ಮಹಿಳೆ ಮತ್ತು ರಾಜಕೀಯ ವೆಂಬ ವಿಚಾರ ಬಂದಾಗ ಎಷ್ಟೋ ವರ್ಷಗಳು ಸರಿದು ಹೋದರೂ ಮಹಿಳೆಗೆ ಇನ್ನೂ ಸಿಗಬೇಕಾದ ಮಾನ್ಯತೆ ಸಿಕ್ಕಿಲ್ಲವೆಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ ಯಾಕೆ ಹೀಗೆ ಎಂದರೆ ಸರಿಯಾದ ಉತ್ತರ ಸಿಗುವುದಿಲ್ಲ ಎಂದು ನುಡಿದರು. ಮಹಿಳಾ ಸಂಘಟನೆಗಳ ಕುರಿತು ಮಾತನಾಡಿದ ಮಾಲತಿ ವಸಂತರಾಜ್. ಸಂಘಟಿತ ನಾರಿ ಅಭಿವೃದ್ಧಿಗೆ ದಾರಿ ಎಂಬಂತೆ ಮಹಿಳೆಯರಲ್ಲಿ ಅಂತರ್ಗತ ವಾಗಿರುವ ಜಾಣ್ಮೆ,ಕಲೆ,ಶಕ್ತಿ, ಸಾಮರ್ಥ್ಯ ಗಳು ಹೊರಹೊಮ್ಮಿ ಫಲಕಾರಿಯಾಗುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು ಅತ್ಯಂತ ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂದರು . ಮಹಿಳೆಯರ ಮುಂದಿರುವ ಸವಾಲುಗಳು ಎನ್ನುವ ವಿಷಯದ ಕುರಿತು ಮನೋರಮಾ ರೈ ಸಂಘಟಿತ ನಾರಿ ಅಭಿವೃದ್ಧಿಗೆ ದಾರಿ .ಹೆಣ್ಣು ಮಾಯೆಯೂ ಹೌದು. ಶಕ್ತಿಯೂ ಹೌದು.ಆದರೆ ಆಕೆಯ ಮುಂದೆ ಸವಾಲುಗಳ ಸಾಲೇ ಇದೆ.ಅದನ್ನು ಎದುರಿಸಲು ಹೆಣ್ಣಿಗೆ ಶಿಕ್ಷಣದ ಅಗತ್ಯ ಇದೆ ಎಂದು ನುಡಿದರು . ವಸುಧಾ ಶೆಣೈ ಯವರು ಪ್ರಾರ್ಥಿಸಿದರು. ಜಾಗೃತಿಯ ಅಧ್ಯಕ್ಷೆ ಮಿತ್ರಪ್ರಭಾ ಹೆಗ್ಡೆ ಸ್ವಾಗತಿಸಿದರು. ಅರುಣಾ ಶಿರ್ತಾಡಿ ವಂದಿಸಿದರು. ಡಾ.ಸುಮತಿ ಪಿ ಕಾರ್ಯಕ್ರಮ ನಿರ್ವಹಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.