



ನವದೆಹಲಿ : ಇನ್ನು ಹತ್ತು ವರ್ಷ ಕಳೆದರೂ ಕರ್ನಾಟಕದಲ್ಲಿ ನಾವು ನಂದಿನಿ ಬ್ರ್ಯಾಂಡ್‌ಗೆ ಸ್ಪರ್ಧೆ ನೀಡಲು ಆಗದು. ಏಕೆಂದರೆ ನಂದಿನಿ ಉತ್ಪನ್ನಗಳು ಹಾಗೂ ಅಮುಲ್ ಉತ್ಪನ್ನಗಳ ಬೆಲೆಯಲ್ಲಿ ಬಹಳ ವ್ಯತ್ಯಾಸವಿದೆ. ಹೀಗಾಗಿ ನಾವು ನಂದಿನಿಗೆ ಸ್ಪರ್ಧೆ ನೀಡಲು ಕರ್ನಾಟಕಕ್ಕೆ ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ.
ಹೀಗೆಂದು ಇತ್ತೀಚಿನ ‘ಅಮುಲ್ ವರ್ಸಸ್ ನಂದಿನಿ’ವಿವಾದಕ್ಕೆ ಅಮುಲ್ ವ್ಯವಸ್ಥಾಪಕ ನಿರ್ದೇಶಕ ಜಯೇನ್ ಮೆಹ್ತಾ ಪ್ರತಿಕ್ರಿಯೆ ನೀಡಿದ್ದಾರೆ. ಅಮುಲ್ ಬಹಿಷ್ಕಾರಕ್ಕೆ ಕರ್ನಾಟಕದಲ್ಲಿ ದೊಡ್ಡಮಟ್ಟದ ಕೂಗೆದ್ದಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕೆಯೊಂದಕ್ಕೆ ಈ ಸ್ಪಷ್ಟನೆ ನೀಡಿದ್ದಾರೆ.
ಇದು ಅಮುಲ್ ವರ್ಸಸ್ ನಂದಿನಿ ವಿಚಾರ ಅಲ್ಲ, ಬದಲಿಗೆ ಇದು ಅಮುಲ್ ಮತ್ತು ನಂದಿನಿಗೆ ಸಂಬಂಧಿಸಿದ ವಿಚಾರ. ನಾವಿಬ್ಬರೂ ರೈತರ ಮಾಲಿಕತ್ವದ ಸಹಕಾರ ಸಂಸ್ಥೆಗಳು. ಇಬ್ಬರೂ ಸಮಾನ ಉದ್ದೇಶದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. ನಾವು ಕರ್ನಾಟಕಕ್ಕೆ ನಂದಿನಿಯ ಜೊತೆ ಸ್ಪರ್ಧಿಸಲು ಬರುತ್ತಿಲ್ಲ, ಬದಲಿಗೆ ನಂದಿನಿಯ ಜೊತೆ ಇರಲು ಬರುತ್ತಿದ್ದೇವೆ’ ಎಂದು ಹೇಳಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.