logo
WhatsApp Image 2026-04-02 at 14.46.04.jpeg
hindalco everlast.jpeg

ವಿಪರೀತ ತಲೆ ನೋವು: ಕೆದೂರಿನಲ್ಲಿ ಗೇರುಮರಕ್ಕೆ ನೇಣುಬಿಗಿದುಕೊಂಡು ಯುವಕ ಆತ್ಮಹತ್ಯೆ

ಟ್ರೆಂಡಿಂಗ್
share whatsappshare facebookshare telegram
18 Jun 2022
post image

ಕುಂದಾಪುರ: ವಿಪರೀತ ತಲೆ ನೋವಿನಿಂದ ಬಳಲುತ್ತಿದ್ದ ಯುವಕನೋರ್ವ ಗೇರುಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ತಾಲೂಕಿನ ಕೆದೂರು ಗ್ರಾಮದ ಮೂಡುಕೆದೂರು ಎಂಬಲ್ಲಿ ಜೂ.17ರಂದು ಮಧ್ಯಾಹ್ನ ನಡೆದಿದೆ. ಕೆದೂರು ನಿವಾಸಿ 34ವರ್ಷದ ಪ್ರವೀಣ ಶೆಟ್ಟಿ ಆತ್ಮಹತ್ಯೆ ಮಾಡಿಕೊಂಡ ಯುವಕ.‌ ಈತ ಕುಂದಾಪುರದ ಅರವಿಂದ ಮೋಟಾರ್ಸ ನಲ್ಲಿ ಕೆಲಸ ಮಾಡಿಕೊಂಡಿದ್ದನು. ಕಳೆದ 10 ತಿಂಗಳಿನಿಂದ ತಲೆ ನೋವಿನಿಂದ ಬಳಲುತ್ತಿದ್ದನು. ತಲೆನೋವಿನಿಂದ ರಾತ್ರಿ ಸರಿಯಾಗಿ ಮಲಗುತ್ತಿರಲಿಲ್ಲ ಹಾಗೂ ಮಾನಸಿಕ ಖಿನ್ನತೆಗೆ ಬಳಲುತ್ತಿದ್ದನು ಎನ್ನಲಾಗಿದೆ. ಇದೇ ಕಾರಣದಿಂದ ಮಾನಸಿಕವಾಗಿ ಮನನೊಂದು ಜೂ.17ರಂದು ಮೂಡು ಕೆದೂರು ರೈಲ್ವೆ  ಬ್ರಿಡ್ಜ್ ಬಳಿಯ ಗೇರುಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಪ್ರಕರಣ ದಾಖಲಾಗಿದೆ.

Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.