



ಉಡುಪಿ : ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ 'ಆರ್ಟಿಸ್ಟ್ರಿ' ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಡಿಸೆಂಬರ್ 4 ರಿಂದ ಡಿಸೆಂಬರ್ 12 ರವರೆಗೆ ನಡೆಯುತ್ತಿದೆ . ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳು ಪ್ರದರ್ಶನದಲ್ಲಿವೆ. ' ಮೈನ್'ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು ,' ಡಿವೈನ್'ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ . ' ಪ್ರಶಿ'ಯಲ್ಲಿ ರುಬಿ , ಎಮರಾಲ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು , ' ಎಥಿನಿಕ್ಸ್'ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ . ' ಏರ ' ಅನ್ನಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ ' ಹಾಯ್ ' ಯಲ್ಲಿ ಯುವತಿಯರ ಮನಸೆಳೆಯುವ ಮನಮೋಹಕ ಆಭರಣಗಳಿವೆ . ' ಸ್ಟಾರ್ಲೆಟ್'ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ . ಈ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ಸಂಪೂರ್ಣ ಪಾರದರ್ಶಕ , ಉಚಿತ ನಿರ್ವಹಣೆ , ವಿನಿಮಯದಲ್ಲಿ ಶೂನ್ಯ ಕಡಿತ , ಬೈಬ್ಯಾಕ್ ಗ್ಯಾರಂಟಿ , ಉಚಿತ ವಿಮೆ , ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿದ್ದು , 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್‌ನ ವಿಶೇಷತೆಗಳಾಗಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ . ಈ ಸಂದರ್ಭದಲ್ಲಿ ಗ್ರಾಹಕರಿಗೆ ಭಾರತದಾದ್ಯಂತ ಚಿನ್ನಾಭರಣಗಳಿಗೆ ಒನ್ ಇಂಡಿಯಾ ಒನ್ ಗೋಲ್ಡ್ ರೇಟ್ , ಶುದ್ಧ ಚಿನ್ನ ಸುಂದರ ವಿನ್ಯಾಸಗಳು ನ್ಯಾಯ ಸಮ್ಮತವಾದ ತಯಾರಿಕಾ ಶುಲ್ಕ ಇದು ನ್ಯಾಯಯುತ ಬೆಲೆಯ ಭರವಸೆ, ಬ್ರಾಂಡೆಡ್ ವಾಚ್‌ಗಳ ಮೇಲೆ ವಿಶೇಷ ಕಡಿತ ನೀಡಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ .
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.