



ಉಡುಪಿ : ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ 'ಆರ್ಟಿಸ್ಟ್ರಿ' ಕಲಾತ್ಮಕ ಚಿನ್ನಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಮೇಳವು ಇಂದು ಶ್ರೀಮತಿ ವಿದ್ಯಾ ಸರಸ್ವತಿ,ಶ್ರೀಮತಿ ಶಾಂಭವಿ ಭಂಡಾರ್ಕರ್,ಶ್ರೀಮತಿ ಡಾ.ಚರಿಷ್ಮಾ ಶೆಟ್ಟಿ ಅನಾವರಣಗೊಳಿಸಲಿದರು. ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣ ಪ್ರದರ್ಶನದಲ್ಲಿ ವಿವಿಧ ನಮೂನೆಯ ಚಿನ್ನ ಮತ್ತು ವಜ್ರಾಭರಣಗಳ ಸಂಗ್ರಹಗಳು ಪ್ರದರ್ಶನದಲ್ಲಿವೆ. ' ಮೈನ್'ನಲ್ಲಿ ವಜ್ರಾಭರಣಗಳ ಅಭೂತ ಪೂರ್ವ ಸಂಗ್ರಹ, ನವವಧುವಿನ ವಿಶಿಷ್ಟ ಸಂಗ್ರಹ ಹಾಗೂ ಪ್ರಮಾಣಿಕೃತ ವಜ್ರಾಭಾರಣಗಳಿದ್ದು , 'ಡಿವೈನ್'ನಲ್ಲಿ ಭಾರತೀಯ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಚಿನ್ನಾಭರಣಗಳ ಸಂಗ್ರಹವಿದೆ. ' ಪ್ರಶಿ'ಯದಲ್ಲಿ ರುಬಿ , ಎಮರಾಲ್ ಅಮೂಲ್ಯ ಹರಳುಗಳ ಸಮಕಾಲೀನ ಚಿನ್ನಾಭರಣಗಳ ಸಂಗ್ರಹವಿದ್ದು ,' ಎಥಿನಿಕ್ಸ್'ನಲ್ಲಿ ಕೈಕುಶಲತೆಯ ಸೊಬಗಿನ ಪಾರಂಪರಿಕ ಚಿನ್ನಾಭರಣಗಳ ಪ್ರದರ್ಶನ ಹಾಗೂ ಮಾರಾಟವಿದೆ . ' ಎರ ' ಆನ್ಕಟ್ ಡೈಮಂಡ್ಸ್ ಹಾಗೂ ಚಿನ್ನಾಭರಣಗಳ ಅಪೂರ್ವ ಸಂಗ್ರಹವಾದರೆ, ' ಸ್ಟಾರ್ಲೆಟ್'ನಲ್ಲಿ ಚಿಕ್ಕ ಮಕ್ಕಳಿಗಾಗಿ ಅತ್ಯಾಕರ್ಷಕ ವಿನ್ಯಾಸಗಳಿಂದ ಕೂಡಿದ ಚಿನ್ನಾಭರಣಗಳು ಈ ಪ್ರದರ್ಶನದ ವಿಶೇಷವಾಗಿದೆ. ಸಂಪೂರ್ಣ ಪಾರದರ್ಶಕ ,ಉಚಿತ ನಿರ್ವಹಣೆ , ವಿನಿಮಯದಲ್ಲಿ ಶೂನ್ಯ ಕಡಿತ , ಬೈಬ್ಯಾಕ್ ಗ್ಯಾರಂಟಿ , ಉಚಿತ ವಿಮೆ , ಎಲ್ಲಾ ಆಭರಣಗಳು ಸಹ ಹಾಲ್ ಮಾರ್ಕ್ ಹೊಂದಿದ್ದು , 28 ರೀತಿಯ ಪರೀಕ್ಷೆ ಮಾಡಿದ ವಜ್ರಾಭರಣಗಳು ಮಲಬಾರ್ ಗೋಲ್ ಆ್ಯಂಡ್ ಡೈಮಂಡ್ಸ್‌ನ ವಿಶೇಷತೆಗಳಾಗಿವೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ . ಈ ಸಂದರ್ಭದಲ್ಲಿ ಗ್ರಾಹಕರಿಗೆ ಚಿನ್ನಾಭರಣಗಳ ಮೇಲೆ ಫೇರ್ ಪ್ರೈಸ್ ಪ್ರೋಮಿಸ್ , ಶುದ್ಧ ಚಿನ್ನ ಸುಂದರ ವಿನ್ಯಾಸಗಳು ನ್ಯಾಯ ಸಮ್ಮತವಾದ ತಯಾರಿಕಾ ಶುಲ್ಕ ಇದು ನ್ಯಾಯಯುತ ಬೆಲೆಯ ಭರವಸೆ, ಬ್ರಾಂಡೆಡ್ ವಾಚ್‌ಗಳಾದ ಟಿಸ್ಸೋಟ್,ರೇಡೋ,ಫಾಸಿಲ್,ಟೈಮಕ್ಸ್,ಸೀಕೋ,ಆಲ್ಬೋ ವಾಚ್ ಗಳ ಮೇಲೆ ವಿಶೇಷ ಕಡಿತ ನೀಡಲಾಗುವುದು, ಈ ಪ್ರದರ್ಶನವು ಡಿಸೆಂಬರ್ 12 ತನಕ ನೆರವೆರಲಿದೆ ಎಂದು ಶಾಖಾ ಮುಖ್ಯಸ್ಥ ಹಫೀಝ್ ರೆಹಮಾನ್ ತಿಳಿಸಿದ್ದಾರೆ . ಈ ಸಂದರ್ಭದಲ್ಲಿ ಪುರಂದರ ತಿಂಗಲಾಯ,ರಾಘವೇಂದ್ರ ನಾಯಕ್,ಮುಸ್ತಫಾ,ತಂಝೀಮ್ ಶಿರ್ವ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.