


ಕಾರ್ಕಳ: ಕಾಡಿನ ಮರಗಳಿಗೆ ಬಿಳಲು ಬಿಟ್ಟ ಒಣಗುತ್ತಿರುವ ಬಿಳಲು ಬಳ್ಳಿಗಳು, ಬುಟ್ಟಿ ತಯಾರಿಕೆ ಬೇಕಾದ ಬಳ್ಳಿಗಳನ್ನು ಆಯ್ದುಕೊಂಡು ಅಗತ್ಯಕ್ಕೆ ಅನುಗುಣವಾಗಿ ಸಂಗ್ರಹಿಸಿ ವಿವಿಧ ಮಾದರಿಯ ಬುಟ್ಟಿಗಳನ್ನು ತಯಾರಿಸಿ, ಮಾರಾಟ ಮಾಡಿ ಜೀವನ ನಡೆಸುವ ಬುಡಗಟ್ಟು ಜನಾಂಗದವವರು ಅಲ್ಲಲ್ಲಿ ನೆಲೆಸಿ ಅರೆಮಾರಿಗಳಂತೆ ಇದ್ದು ಪ್ರಸ್ತುತ ಪಡುಬಿದ್ರಿಯ ಕುಚ್ಚಿಗುಡ್ಡೆಯ ವಾಸ್ತವ್ಯಕ್ಕೆ ಮಾಡುತ್ತಿರುವ ಅಣ್ಣು ಕೊರಗ, ಪತ್ನಿ ಕಸ್ತೂರಿ, ತಂಗಿ ಮಲ್ಲಿಕಾ ನೆರೆಮನೆಯರಾದ ಶೀಲ ಎಂಬವರು ಈ ಸುದ್ದಿಯ ಮೂಲ.
ಕಾರ್ಕಳ ಉತ್ಸವದಲ್ಲಿ ಆಯೋಜಿಸಿದ ಬದುಕು ಮತ್ತು ಕಲೆಯನ್ನು ಪ್ರತಿಬಿಂಬಿಸುವ ಪ್ರಾತ್ಯಕ್ಷಿಕೆ ಮಳಿಗೆಯಲ್ಲಿ ತಮ್ಮ ಕಲಾಪ್ರದರ್ಶನ ನಡೆಸಿದ್ದಾರೆ.
ಉತ್ತಮ ಅವಕಾಶ ದೊರೆಯುತ್ತಿದ್ದರೂ, ಪರಿಕರಗಳ ತಯಾರಿಕೆಗೆ ಅಗತ್ಯ ಇರುವ ಬಳ್ಳಿಗಳ ಸಂಗ್ರಹಕ್ಕೆ ಕೆಲವೊಂದು ಅಡಚಣೆಯಾಗಿರುವುದರಿಂದ ನಮ್ಮ ಬದುಕಿನ ಮೇಲೂ ಕರಿಛಾಯೆ ಮೂಡಿದೆ. ಕಾಡು ಪ್ರವೇಶಿಸಿದರೆ ಮಾತ್ರ ಬುಟ್ಟಿ ತಯಾರಿಕೆಗೆ ಬೇಕಾದ ಸಾಮಾಗ್ರಿಗಳು ದೊರೆಯುತ್ತದೆ. ಆದರೆ ಕಾಡು ಪ್ರವೇಶಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ. ನಮ್ಮ ಸಮಾಜವು ಎಂದಿಗೂ ಪರಿಸರದ ಮೇಲೆ ದಬ್ಬಾಳಿಕೆ ನಡೆಸಿಲ್ಲ. ಪರಿಸರದಲ್ಲಿ ಕಾಡು ಉಳಿದರೆ ಮಾತ್ರ ನಮ್ಮ ಕುಲಕಸುಬು ಮುಂದುವರಿದು ಜೀವನ ನಿರ್ವಹಣೆ ಸಾಧ್ಯ ಅನ್ನುತ್ತಾರೆ ಕೊರಗ ಸಮುದಾಯದ ಮುಖಂಡ ಪಾಂಗಾಳ ಬಾಬು ಕೊರಗ. .
ದೇವರಿಗೂ ಇಷ್ಟ ಬುಟ್ಟಿಯನ್ನು ದೇವಸ್ಥಾನಕ್ಕೆ ಹಣ್ಣುಕಾಯಿ, ಹೂ ಕೊಂಡು ಹೋಗಲು ತುಂಬ ಸಹಕಾರಿಯಾಗುತ್ತದೆ. ವೈದಿಕ ಕ್ರಮಕ್ಕೆ ಇದನ್ನು ಹೆಚ್ಚಾಗಿ ಉಪಯೋಗಿಸುತ್ತಿದ್ದಾರೆ. ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬಹುದು ಎಂದು ಬುಟ್ಟಿ ಖರೀದಿಗೆ ಬಂದ ಮೂಡಬಿದ್ರಿಯ ವೈದಿಕರಾದ ರಾಜೇಶ್ ಭಟ್ ಅಭಿಪ್ರಾಯ ಪಟ್ಟರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.