



ಉಡುಪಿ:
ಸೆಪ್ಟೆಂಬರ್ 27, ವಿಶ್ವ ಪ್ರವಾಸೋದ್ಯಮ ದಿನಾಚರಣೆಯ ಅಂಗವಾಗಿ ಉಡುಪಿ ಜಿಲ್ಲೆಯಲ್ಲಿ ಸುಸ್ಥಿರ, ಪರಿಸರ ಪೂರಕ, ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಜಿಲ್ಲೆಯ ಹೊಸ ಜಾಗಗಳನ್ನು ಪರಿಚಯಿಸುವ ಸಲುವಾಗಿ ಪ್ರವಾಸೋದ್ಯಮ ಇಲಾಖೆಯ ವತಿಯಿಂದ ವೀಡಿಯೋ ಸ್ಪರ್ಧೆ ಏರ್ಪಡಿಸಲಾಗಿದೆ.
ಈಗಾಗಲೇ ಪ್ರಸಿದ್ಧವಾಗಿರುವ ಜಾಗವನ್ನು ಹೊರತು ಪಡಿಸಿ, ಜನರನ್ನು ಆಕರ್ಷಿಸಬಲ್ಲ, ವಿಶೇಷ ಅನುಭವ ಒದಗಿಸಬಲ್ಲ, ಕಲೆ, ಕರಕುಶಲ ಕರ್ಮಿಗಳಿಗೆ ಅವಕಾಶ ಕೊಡಬಲ್ಲ, ಬಗೆ ಬಗೆಯ ಆಹಾರದ ರುಚಿ ಸವಿಯುವ, ವಿವಿಧ ಭಾಷೆ, ಸಂಸ್ಕೃತಿಗಳ ಚೆಲುವನ್ನು ಸಾರಬಲ್ಲ, ಹೊಸ ಜಾಗ, ಹೊಸ ಸಾಧ್ಯತೆ, ಹೊಸ ಅವಕಾಶಗಳ ಕುರಿತು ವೀಡಿಯೋಗಳನ್ನು ಮಾಡಿ ನಮಗೆ ಕಳುಹಿಸಿ.
ನಿಯಮಗಳು:
ವೀಡಿಯೋ 3 ನಿಮಿಷ ಮೀರಬಾರದು.
ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆಯನ್ನು ವೀಡಿಯೋದ ಕೊನೆಗೆ ಕಡ್ಡಾಯವಾಗಿ ನೀಡಬೇಕು.
ವೀಡಿಯೋಗಳನ್ನು ad@udupitourism.com ಇಮೇಲ್ ಅಥವಾ 8660881493 ವಾಟ್ಸಪ್ ಸಂಖ್ಯೆಗೆ 25-09-2021ರ ಒಳಗೆ ಕಳುಹಿಸಬೇಕು.
ಪ್ರಥಮ ಬಹುಮಾನ ₹5,000. ದ್ವಿತೀಯ ಬಹುಮಾನ ₹3,000 ಹಾಗೂ ತಲಾ ₹1,000 ಮೊತ್ತದ ನಾಲ್ಕು ಪ್ರೋತ್ಸಾಹಕ ಬಹುಮಾನಗಳು.
ತೀರ್ಪುಗಾರರ ನಿರ್ಣಯವೇ ಅಂತಿಮ.
ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.