



ಮುಂಬೈ: ನಟ ಹಾಗೂ ಕಾಮಿಡಿಯನ್ ತೀರ್ಥಾನಂದ್ ರಾವ್ ಅವರು ಕಪಿಲ್ ಶರ್ಮಾ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ‘ಕಾಮಿಡಿ ಸರ್ಕಸ್ ಕೆ ಆಜೂಬೆ’ ಶೋನಲ್ಲಿ ಕಪಿಲ್ ಶರ್ಮಾ ಜೊತೆ ಅವರು ಕೆಲಸ ಮಾಡಿದ್ದರು. ಈಗ ಅವರು ಫೇಸ್ಬುಕ್ ಲೈವ್ ಬಂದು ವಿಷ ಕುಡಿದಿದ್ದಾರೆ. ‘ನನ್ನ ಸಾವಿಗೆ ಆ ಮಹಿಳೆಯೇ ಕಾರಣ’ ಎಂದು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ತೀರ್ಥಾನಂದ್ ಅವರ ಆರೋಗ್ಯದ ಬಗ್ಗೆ ಎಲ್ಲರಿಗೂ ಆತಂಕ ಮೂಡಿದೆ.
ತೀರ್ಥಾನಂದ್ ಅವರು ಫೇಸ್ಬುಕ್ ಲೈವ್ ಬಂದಿದ್ದಾರೆ. ಈ ವೇಳೆ ಅವರು ಲಿವ್-ಇನ್ ರಿಲೇಷನ್ಶಿಪ್ ಬಗ್ಗೆ, ಬ್ಲಾಕ್ಮೇಲ್ ಮಾಡುತ್ತಿರುವ ಬಗ್ಗೆ, ಹಣ ಕಿತ್ತಿರುವ ಬಗ್ಗೆ ಆರೋಪಿಸಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು, ಆ ಯುವತಿ ಯಾರು ಎಂಬಿತ್ಯಾದಿ ವಿಚಾರ ಇನ್ನಷ್ಟೇ ಬಯಲಿಗೆ ಬರಬೇಕಿದೆ.
‘ಮಹಿಳೆಯಿಂದಾಗಿ ನಾನು 3-4 ಲಕ್ಷ ರೂಪಾಯಿ ಸಾಲದಲ್ಲಿದ್ದೇನೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ನನಗೆ ಅವಳ ಪರಿಚಯ ಆಯಿತು. ಆಕೆ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು. ಆದರೆ ಇದಕ್ಕೆ ಕಾರಣ ನನಗೆ ತಿಳಿದಿಲ್ಲ. ನಂತರ ಆಕೆ ನನಗೆ ಕರೆ ಮಾಡಿ ಭೇಟಿಯಾಗಬೇಕೆಂದು ಹೇಳುತ್ತಿದ್ದಳು’ ಎಂದು ತೀರ್ಥಾನಂದ್ ವಿಡಿಯೋದಲ್ಲಿ ಹೇಳಿದ್ದಾರೆ.
ಇದಾದ ಬಳಿಕ ಅವರು ವಿಷದ ಬಾಟಲಿ ತೆಗೆದುಕೊಂಡು ಕುಡಿದ್ದಾರೆ. ಆ ಬಳಿಕ ಅವರ ಗೆಳೆಯ ಮನೆಗೆ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಅಂದಹಾಗೆ, ಈ ರೀತಿ ಅವರು ಆತ್ಮಹತ್ಯೆಗೆ ಪ್ರಯತ್ನಿಸಿರೋದು ಇದೇ ಮೊದಲೇನು ಅಲ್ಲ. 2021ರ ಡಿಸೆಂಬರ್ ನಲ್ಲಿ ಅವರು ಆತ್ಮಹತ್ಯೆಗೆ ಯತ್ನಿಸಿದ್ದರು. ಈ ವೇಳೆಯೂ ಅವರು ಲೈವ್ ಬಂದಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.