



ಉತ್ತರಪ್ರದೇಶ: ವಿವಾಹಿತೆ ಮಹಿಳೆಯೊಬ್ಬಳು ಫೇಸ್ಬುಕ್ ನಲ್ಲಿ ಪರಿಚಯವಾದ ಯುವಕನೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾಳೆ. ತಾನು ಮದುವೆಯಾಗಿರುವುದನ್ನು ಮರೆತು ಆತನೊಂದಿಗೆ ಓಡಿಹೋಗಿದ್ದಾಳೆ. ಆತನನ್ನು ನಂಬಿ ಹೋದವಳಿಗೆ ಅಲ್ಲಿ ಆಗಿದ್ದೇ ಬೇರೆ.
ಉತ್ತರ ಪ್ರದೇಶದ ಸಿದ್ಧಾರ್ಥನಗರದ ವ್ಯಕ್ತಿಯೊಬ್ಬ ದಲಿತ ಕುಟುಂಬಕ್ಕೆ ಸೇರಿದ ವಿವಾಹಿತ ಮಹಿಳೆಯೊಂದಿಗೆ ಫೇಸ್‌ಬುಕ್‌ನಲ್ಲಿ ಸ್ನೇಹ ಬೆಳೆಸಿ, ಆಕೆಯನ್ನು ಪ್ರೀತಿಯ ಬಲೆಗೆ ಬೀಳಿಸಿದ್ದಾನೆ. ತಾನು ಮದುವೆಯಾಗಿರುವುದನ್ನು ಮರೆತು ಆತನೊಂದಿಗೆ ಓಡಿಹೋಗಿದ್ದಾಳೆ. ಆತನನ್ನು ನಂಬಿ ಹೋದವಳನ್ನು ಬಲವಂತವಾಗಿ ಇಸ್ಲಾಂಗೆ ಮತಾಂತರಗೊಳಿಸಿದ್ದಾನೆ. ಇದೀಗಾ ಘಟನೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ. ಸಿದ್ಧಾರ್ಥನಗರ ಜಿಲ್ಲೆಯ ಮಿಶ್ರೌಲಿಯಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾನೂನುಬಾಹಿರ ಧಾರ್ಮಿಕ ಮತಾಂತರದ ಪ್ರಕರಣ ಅಡಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಶೈಲೇಶ್ ಕುಮಾರ್ ಕಳೆದ 4 ವರ್ಷದ ಹಿಂದೆ ಲಕ್ಷ್ಮೀ ಎಂಬಾಕೆಯನ್ನು ವಿವಾಹವಾಗಿದ್ದಾರೆ. ಇದೇ ವರ್ಷದ ಮೇ.31 ರ ರಾತ್ರಿ ತನ್ನ ಫೇಸ್ ಬುಕ್ ಪ್ರಿಯಕರನಿಗಾಗಿ 55 ಸಾವಿರ ನಗದು ಹಾಗೂ ಚಿನ್ನಾಭರಣದೊಂದಿಗೆ ಲಕ್ಷ್ಮೀ ಮನೆ ಬಿಟ್ಟು ಹೋಗಿದ್ದಾರೆ. ಐಪಿಸಿಯ ಸೆಕ್ಷನ್ 504 ಮತ್ತು 506, ಎಸ್‌ಸಿ/ಎಸ್‌ಟಿ ಕಾಯ್ದೆ ಮತ್ತು ಉತ್ತರ ಪ್ರದೇಶದ ಮತಾಂತರ ವಿರೋಧಿ ಕಾನೂನಿನ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಸಿದ್ಧಾರ್ಥನಗರದ ಉಪ ಪೊಲೀಸ್ ವರಿಷ್ಠಾಧಿಕಾರಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.