ರೈತಾಪಿ ವರ್ಗವನ್ನು , ಬೆಳೆಯನ್ನು , ಕೃಷಿ ಪದ್ಧತಿಯನ್ನು ಪ್ರೋತ್ಸಾಹಿಸಲು ಸಾಕಷ್ಟು ಸ್ಕೀಮ್ಗಳನ್ನು ಸಾಕಷ್ಟು ಯೋಜನೆಗಳನ್ನು ಸರ್ಕಾರವು ಜಾರಿಗೆ ತಂದಿದೆ. ಕೃಷಿ , ತೋಟಗಾರಿಕೆ ಮತ್ತು ಪಶು ಸಂಗೋಪನೆ ಒಗ್ಗೂಡಿಸುವ ಮೂಲಕ ರೈತರ ಆದಾಯ ಹೆಚ್ಚಳ ಮಾಡಿ, ಕೃಷಿಯನ್ನು ಸುಸ್ಥಿರಗೊಳಿಸುವ ಉದ್ದೇಶದಿಂದ ಸಮಗ್ರ ಕೃಷಿ ಪದ್ಧತಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುತ್ತಿದೆ.
ಕೃಷಿ ಇಲಾಖೆಯ ಕಾರ್ಯಕ್ರಮಗಳು
1 ) ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮ ಯೋಜನೆ ವೈಶಿಷ್ಟಗಳು : 1.ಅದಿಸೂಚಿತ ಘಟಕ ದಲ್ಲಿ ಸಂಭವಿಸುವ ಹವಾಮಾನ ವೈಪರೀತ್ಯಗಳಾದ ಹೆಚ್ಚಿನ ಮಳೆ, ದೀರ್ಘಕಾಲ ತೇವಾಂಶ ಕೊರತೆ, ಬೆಳೆಗಳು ಮಳೆ ಬಂದು ನಾಶವಾದಗ, ಗುಡುಗು ಮಿಂಚುಗಳಿಂದ ಉಂಟಾಗುವ ಬೆಂಕಿ ಅವಘಡಗಳಿಂದ ಬೆಳೆ ಹಾನಿಯಾದಾಗ ಇಂತಹ ನಷ್ಟ ಕಂಡುಬಂದಲ್ಲಿ ವಿಮೆ ಮಾಡಿದ ರೈತರಿಗೆ ಶೇ. 25 ರಷ್ಟು ಬೆಳೆ ನಷ್ಟ ಪರಿಹಾರ ದೊರೆಯಲಿದೆ.
3)ಕೃಷಿ ಯಾಂತ್ರಿಕರಣ ಕೃಷಿ ಕೂಲಿ ಕಾರ್ಮಿಕರ ಕೊರತೆ ನೀಗಿಸಲು ಹಾಗೂ ಕೃಷಿ ಚಟುವಟಿಕೆ ಸಕಾಲಕ್ಕೆ ಕೈ ಗೊಳ್ಳಲು ಕೃಷಿ ಯಾಂತ್ರಿಕರಣಕ್ಕೆ ಉತ್ತೇಜನವನ್ನು ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಸವಲತ್ತುಗಳು : ಶೇ.50ರ ಸಹಾಯಧನದಲ್ಲಿ ಸಣ್ಣ ಅತಿಸಣ್ಣ,ಮಹಿಳಾ ರೈತರಿಗೆ,ಶೇ.90ರ ಸಹಾಯಧನದಲ್ಲಿ ಪರಿಶಿಷ್ಟ ಜಾತಿ /ಪಂಗಡದ ರೈತರಿಗೆ ಹಾಗೂ ಶೇ.40ರ ಸಹಾಯಧನದಲ್ಲಿ ಇತರೆ ವರ್ಗದ ರೈತರಿಗೆ ಕೃಷಿ ಯಂರೋಪಕರಣಗಳ ವಿತರಣೆ. ಶೇ 80ರ ಸಹಾಯಧನದಲ್ಲಿ ಗ್ರಾಮ ಮಟ್ಟದ ಕೃಷಿ ಯಂತ್ರೋಪಕರಣ ಗಳ ಬ್ಯಾಂಕ್ ಸ್ಥಾಪನೆಗೆ ಸಹಾಯಧನ (ಘಟಕ ವೆಚ್ಚ -ರೂ.10.00ಲಕ್ಷ )
4)ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಸವಲತ್ತುಗಳು : ಎಲ್ಲಾ ಅರ್ಹ ರೈತರಿಗೆ ವಾರ್ಷಿಕ ರೂ.10,000/-ಪ್ರೋತ್ಸಾಹಧನ ಕೇಂದ್ರ ಸರ್ಕಾರದಿಂದ ವಾರ್ಷಿಕ ರೂ.6000/- ರಾಜ್ಯ ಸರ್ಕಾರದಿಂದ ವಾರ್ಷಿಕ ರೂ.4000/- ಅರ್ಜಿ ಸಲ್ಲಿಸಬಹುದಾದ ಸ್ಥಳಗಳು : ರೈತ ಸಂಪರ್ಕ ಕೇಂದ್ರ,ಸಾರ್ವಜನಿಕ ಸೇವಾ ಕೇಂದ್ರ ಅರ್ಜಿ ಸಲ್ಲಿಕೆ ವಿಧಾನ : ನಿಗದಿತ ನಮೂನೆಯಲ್ಲಿ ಸ್ವಯಂ ಘೋಷಣೆ,ಆಧಾರ್,ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಭಾವಚಿತ್ರ.
5)ಕೃಷಿ ಮೂಲಭೂತ ಸೌಕರ್ಯ ಸವಲತ್ತು : ಕೊಯ್ಲುತ್ತರ ಮೂಲಭೂತ ಸಾಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿ ಸೃಷ್ಟಿಸಲು ಮಧ್ಯಮಾವದಿ /ದೀರ್ಘವಾದಿ ಸಾಲದ ಮೇಲಿನ ಶೇ 9ರ ಬಡ್ಡಿಗೆ ಶೇ 3 ರ ಬಡ್ಡಿ ಸಹಾಯಧನ (ಗರಿಷ್ಠ 2.00ಕೋಟಿ )
6)ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಬೆಳೆ ಅತ್ಪಾದಕತೆ ಹೆಚ್ಚಳ, ಸುಸ್ಥಿರ ಆದಾಯ, ಸಮತೊಲಿತ ಆಹಾರ ಉತ್ಪದನೆ, ತ್ಯಾಜ್ಯಗಳ ಮರುಬಳಕೆ, ನಿರಂತರ ಆದಾಯ ಪಡೆಯುವುದು ಇದರ ಇದರ ಗುರಿಯಾಗಿದೆ. ಸವಲತ್ತುಗಳು : ಸಣ್ಣ ಪ್ರಮಾಣದ ಕೃಷಿ ಹೊಂಡ ಪ್ರತಿ ಕ್ಯೂಬಿಗೆ ಮೀಟರ್ ಗೆ 150ರಂತೆ ಗರಿಷ್ಟ 45,000/-ಸಹಾಯಧನ ಹೆಚ್. ಡಿ ಪಿ. ಇ ಲೈನಿಂಗ್ ಗೆ ಗರಿಷ್ಟ ರೂ. 25000ಸಹಾಯಧನ ಸಾರಾಜನಕ ಸ್ಥಿರಿಕರಣಕ್ಕೆ ಪೂರಕ ಸಸ್ಯಾಬೇಲಿ, ಮಿಶ್ರ ಬೇಲಿ ರಕ್ಷಾಣಾತ್ಮಕ ತಡೆ, ಸಾರಾಜನಕ ಸ್ಥಿರಿಕರಣ ಸಸ್ಯಾಬೇಲಿಗೆ ಶೇ 50ರಂತೆ ರೂ.2500ಸಹಾಯಧನ ಬೆಳೆ ಪದ್ಧತಿ ಆಧಾರಿತ ಕುರಿ, ಮೇಕೆ,ಕೋಳಿಮೆವಿನ ಬೆಳೆ
ಬೆಳೆ ಪದ್ಧತಿ ಆಧಾರಿತ ಸಮಗ್ರ ಬೆಳೆ ರೂ 50% ಅಥವಾ ಗರಿಷ್ಠ ರೂ 15000ಸಹಾಯಧನ ಕುರಿ,ಮೇಕೆ,ಕೋಳಿ ಮೇವಿನ ಬೆಳೆ ಶೇ 50ರ ಸಹಾಯಧನ ಅಥವಾ ಗರಿಷ್ಟ ರೂ 10000ಸಹಾಯಧನ ಎರೆಹುಳು ತೊಟ್ಟಿ, ಅಜೋಲಾ ಘಟಕ, ಮರ ಆಧಾರಿತ ಕೃಷಿ, ಕೈ ತೋಟ,ಜೇನುಕೃಷಿ,ಮೀನು ಕೃಷಿ ಇತ್ಯಾದಿ. ಎರೆಹುಳು ತೊಟ್ಟಿ ಶೇ 50ರಂತೆ ರೂ 8500ಸಹಾಯಧನ ಅಜೋಲಾ ತೊಟ್ಟಿ ಶೇ 25ರಂತೆ ಗರಿಷ್ಟ 1000ಸಹಾಯಧನ ಮರ ಆಧಾರಿತ ಕೃಷಿ ಗರಿಷ್ಟ ರೂ 1500ಸಹಾಯಧನ ಹಿತ್ತಲ ಕೈತೋಟ ಶೇ.25ರಂತೆ ರೂ 1000ಸಹಾಯಧನ ಜೇನು ಕೃಷಿ ಪ್ರತಿಕುಟುಂಬಕ್ಕೆ 800ರಂತೆ ಗರಿಷ್ಟ 2 ಕುಟುಂಬ ಮೀನು ಕೃಷಿ 300-350ಪಿಂಗರ್ ಲಿಂಗ್ಸ್ ಪೂರಕ ಸಾಮಗ್ರಿ ಖರೀದಿ ರೂ 1500 ಸಹಾಯಧನ. ಹೀಗೆ ಕೃಷಿ ಸಂಬಂಧಿತ ಹಲವಾರು ಸವಲತ್ತುಗಳನ್ನು ಹಾಗೂ ಸಹಾಯಧನ ಗಳನ್ನು ಫಲಾನುಭವಿಗಳು ಕಾಣಬಹುದಾಗಿದೆ. ಹೆಚ್ಚಿನ ಮಾಹಿತಿ ಗಾಗಿ ಕೃಷಿ ಇಲಾಖೆ ಯನ್ನು ಸಂಪರ್ಕಿಸಬಹುದಾಗಿದೆ.
ದಿವ್ಯಾ ತೃತೀಯ ಬಿ.ಎ. ಪತ್ರಿಕೋದ್ಯಮ ವಿಭಾಗ ಎಂ. ಪಿ. ಎಂ ಕಾಲೇಜು ಕಾರ್ಕಳ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.