



ಕಾರ್ಕಳ : “ನಮ್ಮನ್ನು ಈ ಲೋಕಕ್ಕೆ ತಂದು, ಲಾಲನೆ-ಪಾಲನೆಗೈದು, ಬೆಳೆಸಿ ಒಳ್ಳೆಯ ವ್ಯಕ್ತಿಗಳನ್ನಾಗಿಸಿ ನಮ್ಮ ಭವಿಷ್ಯವನ್ನು ರೂಪಿಸುವ ನಮ್ಮ ತಂದೆ-ತಾಯAದಿರು ದೈವಸ್ವರೂಪಿಗಳು. ಅವರನ್ನು ಗೌರವಿಸಿ ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯ” ಎಂದು ಉಡುಪಿ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ| ಜೆರಾಲ್ಡ್ ಲೋಬೊ ತಿಳಿಸಿದರು .ಅವರು ಅತ್ತೂರು ಕಾರ್ಕಳ ಸಂತ ಲಾರೆನ್ಸ್ ಬಸಿಲಿಕ ಪುಣ್ಯಕ್ಷೇತ್ರದ ಮಹೋತ್ಸವದ ಎರಡನೇ ದಿನ ಸೋಮವಾರದಂದು ಪ್ರಮುಖ ಬಲಿಪೂಜೆಯನ್ನು ನೆರವೇರಿಸಿ ಪ್ರಬೋಧನೆಯನ್ನು ನೀಡುತ್ತಿದ್ದರು.


ಫೆಬ್ರವರಿ ೨೦ ರಂದು ಆರಂಭಗೊAಡ ವಾರ್ಷಿಕ ಮಹೋತ್ಸವವು ಎರಡನೇ ದಿನವಾದ ಸೋಮವಾರದಂದು ಭಕ್ತಾದಿಗಳ ನಿರಂತರ ಆಗಮನದಿಂದ ಕಳೆಗಟ್ಟಿತ್ತು. ದಿನದ ಪ್ರಮುಖ ಏಕೈಕ ಬಲಿಪೂಜೆಯನ್ನು ಉಡುಪಿಯ ಧರ್ಮಾಧ್ಯಕ್ಷ ಪರಮಪೂಜ್ಯ ಡಾ| ಜೆರಾಲ್ಡ್ ಲೋಬೊರವರು ನೆರವೇರಿಸಿ ಪ್ರಬೋಧನೆ ನೀಡಿದರು. ಮಹೋತ್ಸವದ ಎರಡನೇ ದಿನ ತಂದೆ ತಾಯಂದಿರಿಗಾಗಿ ಮೀಸಲಾಗಿಡಲಾಗಿತ್ತು. ತಂದೆ ತಾಯಿಗಳು ಮತ್ತು ಪೋಷಕರಿಗಾಗಿ ವಿಶೇಷ ಪ್ರಾರ್ಥನೆಗಳನ್ನು ನಡೆಸಲಾಯಿತು. ಹಲವಾರು ಹಿರಿಯ ದಂಪತಿಗಳು ಹಾಜರಿದ್ದು, ಯುವಜನರು ತಮ್ಮ ವೃದ್ಧ ಪೋಷಕರನ್ನು ಕೈಹಿಡಿದು ಕರೆತರುವ ದೃಶ್ಯ ವಿಶೇಷವಾಗಿತ್ತು. ದಿನದ ಬಲಿಪೂಜೆಗಳನ್ನು ವಂದನೀಯ ರಾಜೇಶ್ ಪಸನ್ಹ, ಕಟಪಾಡಿ; ವಂದನೀಯ ಹ್ಯಾರಿ ಡಿಸೋಜಾ, ಕಯ್ಯಾರ್, ವಂದನೀಯ ಮನೋಜ್ ಡಿಸೋಜಾ, ನಿಟ್ಟೆ; ವಂದನೀಯ ಪಾವ್ಲ್ ರೇಗೊ, ಮಿಯ್ಯಾರು ಇವರು ನೆರವೇರಿಸಿದರು. ದಿನದ ಅಂತಿಮ ಬಲಿಪೂಜೆಯನ್ನು ವಂದನೀಯ ಬೇಸಿಲ್ ವಾಸ್, ಮಡಂತ್ಯಾರು ಸಂಜೆ ೭ ಗಂಟೆಗೆ ನೆರವೇರಿಸಿ ಮಹೋತ್ಸವದ ಎರಡನೇ ದಿನದ ಕಾರ್ಯಕ್ರಮಗಳನ್ನು ಸಂಪನ್ನಗೊಳಿಸಿದರು. ಉಡುಪಿಯ ಜಿಲ್ಲಾಧಿಕಾರಿ ಶ್ರೀಯುತ ಕೂರ್ಮಾ ರಾವ್‌ರವರು ಮಹೋತ್ಸವದ ಮೊದಲನೇ ದಿನ ಭಾನುವಾರ ಪುಣ್ಯಕ್ಷೇತ್ರಕ್ಕೆ ಭೇಟಿಯಿತ್ತರು. ಮಹೋತ್ಸವದ ಮೂರನೇ ದಿನ ಮಂಗಳವಾರ ಬೆಳಿಗ್ಗೆ ೮,೧೦,೧೨ ಹಾಗೂ ಮಧ್ಯಾಹ್ನ ೨, ೪ ಮತ್ತು ೭ ಗಂಟೆಗೆ ಬಲಿಪೂಜೆಗಳು ನೆರವೇರಲಿವೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.