



ಹೆಬ್ರಿ : ಮಹಿಳೆ ಸಮಾಜದಲ್ಲಿ ಎಲ್ಲ ಸ್ತರಗಳಲ್ಲಿ ಗುರುತಿಸಿಕೊಂಡಿದ್ದಾಳೆ. ಎಲ್ಲ ರೀತಿಯ ಸಾಂವಿಧಾನಿಕ ಹುದ್ದೆಯನ್ನು ಅಲಂಕರಿಸಿ ರಾಷ್ಟ್ರಪತಿಯಾದ ನಿದರ್ಶನಗಳಿವೆ. ಪುರುಷ ಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ವ್ಯವಸ್ಥಿತವಾಗಿ ಎಲ್ಲವನ್ನೂ ನಿಭಾಯಿಸುವ ಚಾಣಕ್ಷತೆ ಹೊಂದಿರುವುದರಿಂದ ಮಹಿಳೆಯು ಪುರುಷರಷ್ಟೇ ಸಮರ್ಥಳು ಎಂದು ಕುಚ್ಚೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇವತಿ ಶೆಟ್ಟಿ ಹೇಳಿದರು. ಅವರು ಶಾಂತಿನಿಕೇತನ ಯುವ ವೃಂದ, ಓಂಕಾರ ಮಹಿಳಾ ಮಂಡಳಿ ವತಿಯಿಂದ ಸಳ್ಳೆಕಟ್ಟೆ ಅಂಗವಾಡಿಯಲ್ಲಿ ಮಂಗಳವಾರ ನಡೆದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು. ಶಾಂತಿನಿಕೇತನ ಯುವ ವೃಂದದ ವತಿಯಿಂದ ಅಂಗನವಾಡಿಗೆ ಕುಕ್ಕರ್, ಗಡಿಯಾರ,ಚಾಪೆ ಹಾಗೂ ಮಹಾತ್ಮ ಗಾಂಧಿಯವರ ಭಾವಚಿತ್ರವನ್ನು ನೀಡಲಾಯಿತು. ಕುಚ್ಚೂರು ಗ್ರಾಮ ಪಂಚಾಯಿತಿ ಸದಸ್ಯೆ ಮಾಲಿನಿ, ಅಂಗನವಾಡಿ ಕಾರ್ಯಕರ್ತೆ ವಸಂತಿ, ಶಾಂತಿನಿಕೇತನ ಆಡಳಿತ ಮಂಡಳಿ ಸದಸ್ಯರಾದ ರಾಜೇಶ್ರೀ, ಆಶಾ, ಕಲಾವತಿ, ವಿನೋದ ಉಪಸ್ಥಿತರಿದ್ದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.