



ಕಾರ್ಕಳ: ಜಾಗ ಮಾರಾಟಗಾರರು ಹಾಗೂ ಖರೀದಿದಾರರ ನಡುವೆ ಗಲಾಟೆ ಯಾದ ಘಟನೆ ಕಾರ್ಕಳ ತಾಲೂಕಿನ ಈದು ಎಂಬಲ್ಲಿ ನಡೆದಿದೆ . ಈ ವಿಚಾರವಾಗಿ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದೆ.
ಕಾರ್ಕಳ ತಾಲೂಕಿನ ಈದು ಗ್ರಾಮದ ಶಕುಂತಳ ಶೆಟ್ಟಿ ಅವರು ನೀಡಿದ ದೂರಿನಲ್ಲಿ, ಶಕುಂತಳ ಶೆಟ್ಟಿ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ತಮ್ಮ ಮಗಳ ಮನೆಯಲ್ಲಿದ್ದರು. ಈ ನಡುವೆ ಮಾ.೪ ರಂದು ಸುಧಾಕರ ಪೂಜಾರಿ, ಸುಪ್ರಿಯ ಪೂಜಾರಿ, ಅಪ್ಪು ಯಾನೆ ರಾಜೇಶ, ಸುಮಂಗಳ ಪೂಜಾರಿ ಹಾಗೂ ಸೇರಿಕೊಂಡು ಶಕುಂತಳ ಶೆಟ್ಟಿ ಅವರ ಈದು ಗ್ರಾಮದಲ್ಲಿರುವ ಮನೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ, ಮನೆಯಲ್ಲಿದ್ದ ಶಕುಂತಳ ಶೆಟ್ಟಿ ಅವರಿಗೆ ಸೇರಿದ್ದ, ಮೂರುವರೆ ಲಕ್ಷ . ಮೌಲ್ಯದ ಚಿನ್ನಾಭರಣ ಸೇರಿ ಬೆಲೆ ಬಾಳುವ ಗೃಹೋಪಯೋಗಿ ವಸ್ತುಗಳನ್ನು ಹಾಗೂ ದಾಖಲೆ ಪತ್ರಗಳನ್ನು ಕಳವು ಮಾಡಿದ್ದಾರೆ.ಈ ಬಗ್ಗೆ ಮಾ.೫ ರಂದು ಬೆಳಗ್ಗೆ ಶಕುಂತಳ ಶೆಟ್ಟಿ ಅವರು ಗಂಡನೊAದಿಗೆ ಆರೋಪಿತರಲ್ಲಿ ವಿಚಾರಿಸಲು ಹೋದಾಗ ಆರೋಪಿತರು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡದಂತೆ ಜೀವ ಬೆದರಿಕೆ ಹಾಕಿದ್ದಾರೆ. ಹಾಗೂ ಘಟನೆಯಿಂದ ತಮಗೆ ಸುಮಾರು ಎಂಟುವರೆ ಲಕ್ಷಕ್ಕಿಂತಲೂ ಅಧಿಕ ನಷ್ಟ ಉಂಟಾಗಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಇನ್ನು ಶಕುಂತಳ ಶೆಟ್ಟಿ ಹಾಗೂ ಅವರ ಗಂಡನ ವಿರುದ್ಧ ಈದುವಿನ ಸುಪ್ರಿಯಾ ಎಂಬವರು ಪೊಲೀಸರಿಗೆ ಪ್ರತಿ ದೂರು ನೀಡಿದ್ದು, ಶಕುಂತಳ ಶೆಟ್ಟಿ ಅವರು ಸುಪ್ರಿಯಾ ಅವರಿಗೆ ಈ ಹಿಂದೆ ಜಾಗವನ್ನು ಮಾರಾಟ ಮಾಡಿರುತ್ತಾರೆ. ಮಾ.೪ ರಂದು ಸುಪ್ರಿಯಾ ಅವರು ತಮ್ಮ ಜಾಗದಲ್ಲಿ ತಮ್ಮ ತಂದೆ, ಸುಧಾಕರ ಪೂಜಾರಿ, ತಂಗಿ ಸುಮಂಗಳ ಇವರ ಜೊತೆಯಲ್ಲಿ ಕೃಷಿ ಕೆಲಸ ಮಾಡುತ್ತಿದ್ದಾಗ ಅಲ್ಲಿಗೆ ಬಂದ ಶಕುಂತಳಾ ಶೆಟ್ಟಿ ಹಾಗೂ ಆಕೆಯ ಗಂಡ ನಿತ್ಯಾನಂದ ಶೆಟ್ಟಿಯು ಸುಪ್ರಿಯಾ ಹಾಗೂ ಅವರ ಮನೆಯವರಿಗೆ ಕೆಲಸ ಮಾಡದಂತೆ ತಡೆದು ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ. ಹಾಗೂ ಸುಪ್ರಿಯಾ ಅವರ ತಂದೆ ಮೇಲೆ ಹಲ್ಲೆ ಮಾಡಿ ಬೆದರಿಕೆ ಹಾಕಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಎರಡೂ ಘಟನೆಗೆ ಸಂಬAಧಿಸಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.