



ಹವಾಯಿ: ಅಮೆರಿಕದ ಹವಾಯಿ ದ್ವೀಪದ ಲಹೈನಾ ಪಟ್ಟಣದಲ್ಲಿ ವ್ಯಾಪಿಸಿರುವ ಭೀಕರ ಕಾಡ್ಗಿಚ್ಚು ಇದುವರೆಗೆ ಕನಿಷ್ಠ 93 ಜನರನ್ನ ಬಲಿ ಪಡೆದುಕೊಂಡಿದೆ.
ಲಹೈನಾ ಮತ್ತು ಅಪ್‌ಕಂಟ್ರಿ ಮಾಯಿಯಲ್ಲಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯ ಜ್ವಾಲೆಗಳನ್ನು ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಬೆಂಕಿ ನಂದಿಸುವ ಕಾರ್ಯ ಸಮರೋಪಾದಿಯಲ್ಲಿ ಮುಂದುವರೆದಿದೆ ಎಂದು ಮಾಯಿ ಕೌಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ಹವಾಯಿ ಗವರ್ನರ್ ಜೋಶ್ ಗ್ರೀನ್ ಅವರು ಮೃತರನ್ನು ಗುರುತಿಸಲು ಫೋರೆನ್ಸಿಕ್ ಕೆಲಸ ಮುಂದುವರೆದಿರುವುದರಿಂದ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಉಂಟಾಗಬಹುದು. ಹಾಗೆಯೇ, ಮೃತಪಟ್ಟವರ ಗುರುತು ಪತ್ತೆ ಕಾರ್ಯ ಮುಂದುವರೆದಿದೆ. ಸಿಬ್ಬಂದಿ ಮತ್ತು ಶ್ವಾನ ದಳ ಘಟನಾ ಸ್ಥಳದಲ್ಲಿ ಹುಟುಕಾಟ ಕಾರ್ಯಾಚರಣೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.
ಹವಾಯಿಯಲ್ಲಿ ಇದೇ ತಿಂಗಳ 9 ನೇ ತಾರೀಖಿನಿಂದ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ಕಾಡ್ಗಿಚ್ಚಿನ ಜ್ವಾಲೆ ಹಾಗೂ ಡೋರ ಚಂಡಮಾರುತ ದಕ್ಷಿಣ ಮಾರ್ಗವಾಗಿ ಸಾಗುತ್ತಿದ್ದು, ಮಾಯು ಮತ್ತು ಹವಾಯಿ ದ್ವೀಪವನ್ನು ಆವರಿಸಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.