logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೊದಲ ಯಶಸ್ವಿ ಗ್ರಾಫ್ಟ್ ಮ್ಯಾನಿಪುಲೇಟೆಡ್ ಅರ್ಧ-ಹೊಂದಾಣಿಕೆಯ ಮೂಳೆ ಮಜ್ಜೆಯ ಕಸಿ - ಇದು ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ

ಟ್ರೆಂಡಿಂಗ್
share whatsappshare facebookshare telegram
26 Aug 2023
post image

ಮಣಿಪಾಲ: ಒಂದು ವರ್ಷದ ಬಾಲಕನಿಗೆ ಸಿವಿಯರ್ ಕಂಬೈನ್ಡ್ ಇಮ್ಮುನೊ ಡೆಫಿಸೈನ್ಸಿ ಎಂಬ ತೀವ್ರ ತರಹದ ರೋಗ ನಿರೋಧಕ ಶಕ್ತಿಯ ಕೊರತೆ ಇರುವುದು ಪತ್ತೆಯಾಯಿತು ಮತ್ತು ಬಾಲಕನನ್ನು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ಅಸ್ಥಿಮಜ್ಜೆ (ಬೋನ್ ಮಾರೋ ಟ್ರಾನ್ಸ್ ಪ್ಲಾಂಟೇಶನ್) ಕಸಿ ಮಾಡಲು ಕಳುಹಿಸಲಾಗಿತ್ತು. ಅಸ್ಥಿಮಜ್ಜೆ ಕಸಿ ಮಾಡುವುದೊಂದೆ ಆತನ ಕಾಯಿಲೆಯನ್ನು ಗುಣಪಡಿಸಬಲ್ಲ ಏಕೈಕ ಚಿಕಿತ್ಸೆಯಾಗಿತ್ತು

ಮೂಳೆ ಮಜ್ಜೆಯ ಕಸಿ ಎನ್ನುವುದು ವೈದ್ಯರು ಮತ್ತು ಶುಶ್ರೂಷಾ ಸಿಬ್ಬಂದಿಗಳ ತಜ್ಞ ತಂಡವು ಮಾಡುವ ಒಂದು ಸಂಕೀರ್ಣ ವೈದ್ಯಕೀಯ ಚಿಕಿತ್ಸೆಯಾಗಿದೆ. ಅಸ್ಥಿ ಮಜ್ಜೆಯ ಕಸಿ ಮಾಡುವದರಿಂದ ಇದಕ್ಕುಮೊದಲು ಗುಣಪಡಿಸಲಾಗದಂತಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಬಹುದಾಗಿದೆ ಮತ್ತು ಅನೇಕ ರೋಗಿಗಳ ಜೀವನವನ್ನು ಬದಲಾಯಿಸಿದೆ. ಅಸ್ಥಿ ಮಜ್ಜೆಯ ಕಸಿಯು ಕೆಂಪು ಕೋಶದ ಅಸ್ವಸ್ಥತೆಗಳು (ಥಲಸ್ಸೆಮಿಯಾ), ಮೂಳೆ ಮಜ್ಜೆಯ ವೈಫಲ್ಯ, ಇಮ್ಯುನೊ ಡಿಫಿಷಿಯನ್ಸಿ ಮತ್ತು ಕೆಲವು ಕ್ಯಾನ್ಸರ್ ಗಳಂತಹ ರೋಗಗಳಿಗೆ ಶಾಶ್ವತ ಗುಣಪಡಿಸುವ ಚಿಕಿತ್ಸೆಯಾಗಿದೆ. ಈ ಚಿಕಿತ್ಸೆಯಲ್ಲಿ ರೋಗಗ್ರಸ್ತ ಮೂಳೆ ಮಜ್ಜೆಯನ್ನು ತೆಗೆದು ಹಾಕಿ ಬದಲಿಗೆ, ರೋಗಮುಕ್ತ ಕಾಂಡಕೋಶಗಳನ್ನು ಬಳಸಿಕೊಂಡು ಆರೋಗ್ಯಕರ ರಕ್ತದ ಕಣಗಳನ್ನು ತಯಾರಿಸುವ ಮೂಳೆ ಮಜ್ಜೆಯನ್ನು ಕಸಿ ಮಾಡಲುತ್ತದೆ. ಈ ಕಾಂಡಕೋಶವನ್ನು ದಾನ ಮಾಡಲು ಪೂರ್ಣ ಎಚ್ಎಲ್ಎ-ಹೊಂದಾಣಿಕೆಯ ದಾನಿಗಳು ಇದಕ್ಕೆ ಸೂಕ್ತವಾಗಿರುತ್ತಾರೆ. ಆದರೆ ಪ್ರಸ್ತುತ ಲಭ್ಯವಿರುವ ತಂತ್ರಜ್ಞಾನ ಮತ್ತು ನಾವೀನ್ಯತೆಗಳ ಪ್ರಗತಿಯೊಂದಿಗೆ, ಅರ್ಧ- ಹೊಂದಾಣಿಕಯ ದಾನಿಗಳಿಂದ ಸಹ ಮೂಳೆ ಮಜ್ಜೆಯ ಕಸಿಯನ್ನು ಯಶಸ್ವಿಯಾಗಿ ಮಾಡಬಹುದು. ಆದ್ದರಿಂದ ಪ್ರತಿಯೊಬ್ಬ ರೋಗಿಯು ಪೋಷಕರು ಅಥವಾ ಒಡಹುಟ್ಟಿದವರ ರೂಪದಲ್ಲಿ ದಾನಿಯನ್ನು ಹೊಂದಿರುತ್ತಾರೆ.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಮಕ್ಕಳ ರಕ್ತಶಾಸ್ತ್ರ ಮತ್ತು ಆಂಕೊಲಾಜಿ ವಿಭಾಗದ ವೈದ್ಯರ ತಂಡವು ಈ ಮಗುವನ್ನು ಉಳಿಸಲು ವಿಶಿಷ್ಟವಾದ ಅಸ್ಥಿಮಜ್ಜೆಯ ಕಸಿ ಮಾಡಲು ನಿರ್ಧರಿಸಿತು. ರೋಗಿಯ ತಂದೆ ಕೇವಲ ಶೇಕಡಾ 50 ರಷ್ಟು ಎಚ್‌ಎಲ್‌ಎ ಹೊಂದಿಕೆಯಾಗಿದ್ದರು ಮತ್ತು ವೈದ್ಯಕೀಯ ಪರೀಕ್ಷೆಗಳ ನಂತರ ದಾನಿಯಾಗಿ ಆಯ್ಕೆಯಾದರು. ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅರ್ಚನಾ ಎಂವಿ ಮಾತನಾಡಿ, ‘ರೋಗಿಯು ಮಾರಣಾಂತಿಕ ಕ್ಷಯರೋಗದ ಸೋಂಕಿನಿಂದ ಬಳಲುತ್ತಿದ್ದ ಕಾರಣ ಕೀಮೋಥೆರಪಿ ಮತ್ತು ಇಮ್ಯುನೊಸಪ್ರೆಸಿವ್ ಔಷಧಗಳನ್ನು ಬಳಸಲಾಗಲಿಲ್ಲ. ಅಂತಹ ಔಷಧಿಗಳನ್ನು ತಪ್ಪಿಸಲು, ಟಿ ಸಿ ಆರ್ ಆಲ್ಫಾ ಬೀಟಾ ಡಿಪ್ಲೀಷನ್ ಎಂದು ಕರೆಯಲ್ಪಡುವ ಸ್ಟೆಮ್ ಸೆಲ್ ಗ್ರಾಫ್ಟ್ ಮ್ಯಾನಿಪ್ಯುಲೇಷನ್ ತಂತ್ರಜ್ಞಾನವನ್ನು ಬಳಸಲಾಯಿತು, ಇದು ಕಸಿ ಸಮಯದಲ್ಲಿ ಸಹಜವಾಗಿ ಪ್ರಕ್ರಿಯೆ ನಡೆಯಲು ಸಹಾಯ ಮಾಡುತ್ತದೆ ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡುತ್ತದೆ’ ಎಂದು ಹೇಳಿದರು.

ಈ ಮಗುವಿಗೆ ನಮ್ಮ ವಿಶೇಷ ಮೂಳೆ ಮಜ್ಜೆ ಘಟಕದಲ್ಲಿ ಮೂಳೆ ಮಜ್ಜೆಯ ಕಸಿ ಮಾಡಲಾಯಿತು ಮತ್ತು 6 ವಾರಗಳ ನಂತರ ಸ್ಥಿರ ಸ್ಥಿತಿಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಯಶಸ್ವಿ ಅರ್ಧ-ಹೊಂದಾಣಿಕೆಯ ಟಿ ಸೆಲ್ ಡೆಪ್ಲೇಷನ್ ನೊಂದಿಗೆ ಮೂಳೆ ಮಜ್ಜೆ ಕಸಿ ನಡೆಸಿ, ಈಗ ಒಂದು ವರುಷವಾಗಿದ್ದು ಮಗುವು ರೋಗ ಮತ್ತು ಸೋಂಕಿನಿಂದ ಮುಕ್ತವಾಗಿ , ಆರೋಗ್ಯಕರ ಜೀವನ ನಡೆಸುತ್ತಿದೆ.

ಇಮ್ಯುನೊಹೆಮಟಾಲಜಿ ಮತ್ತು ರಕ್ತ ವರ್ಗಾವಣೆ ವಿಭಾಗದ ಪ್ರಾಧ್ಯಾಪಕಿ ಮತ್ತು ಮುಖ್ಯಸ್ಧೆಯಾದ ಡಾ.ಶಮೀ ಶಾಸ್ತ್ರಿ ನೇತೃತ್ವದ ರಕ್ತ ಕೇಂದ್ರದ ವೈದ್ಯರ ತಂಡವು ಈ ಅಪರೂಪದ ಕಸಿಗೆ ಸಹಕರಿಸಿದೆ. ಮಕ್ಕಳ ರಕ್ತ ಶಾಸ್ತ್ರ ಮತ್ತು ಆಂಕೊಲೊಜಿ ವಿಭಾಗದ ಮುಖ್ಯಸ್ಥರಾದ ಡಾ.ವಾಸುದೇವ ಭಟ್ ಕೆ ಮಾಹಿತಿ ನೀಡಿ, “ರಾಜ್ಯದ ಈ ಕರಾವಳಿ ಪ್ರದೇಶದಲ್ಲಿ ಯಶಸ್ವಿ ಟಿ ಸೆಲ್-ಡಿಪ್ಲೀಟೆಡ್ ಹ್ಯಾಪ್ಲೋಡೆಂಟಿಕಲ್ ಬೋನ್ ಮ್ಯಾರೋ ಟ್ರಾನ್ಸ್‌ಪ್ಲಾಂಟ್‌ಗೆ ಒಳಗಾದ ಮೊದಲ ಪ್ರಕರಣ ಇದು. ಈ ನವೀನ ತಂತ್ರಜ್ಞನದೊಂದಿಗೆ, ದೊಡ್ಡ ತೊಡಕುಗಳಿಲ್ಲದೆ ಸಂಪೂರ್ಣವಾಗಿ ಹೊಂದಾಣಿಕೆಯ ದಾನಿಯು ಇಲ್ಲದಿರುವಾಗ ಕೂಡ ನಾವು ಮೂಳೆ ಮಜ್ಜೆಯ ಕಸಿ ಮಾಡಬಹುದಾಗಿದೆ” ಎಂದರು .

ವೈದ್ಯಕೀಯ ಅಧೀಕ್ಷಕರಾದ ಡಾ.ಅವಿನಾಶ್ ಶೆಟ್ಟಿ ಅವರು ಅಪರೂಪದ ರಕ್ತದ ಕಾಯಿಲೆಯಿಂದ ಬಳಲುತ್ತಿರುವ ಮಗುವಿನ ಜೀವ ಉಳಿಸುವ ನಿಟ್ಟಿನಲ್ಲಿ ಮಕ್ಕಳ ರಕ್ತ ಶಾಸ್ತ್ರ ಆಂಕೊಲಾಜಿ ವಿಭಾಗದ ವೈದ್ಯರ, ರಕ್ತನಿಧಿ ವೈದ್ಯರ ಮತ್ತು ಶುಶ್ರೂಷಾ ಸೇವೆಗಳ ತಂಡದ ಕಾರ್ಯವನ್ನು ಶ್ಲಾಘಿಸಿದರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.