



ಉಡುಪಿ:ಮಲ್ಪೆ: ಮೀನು ವ್ಯಾಪಾರಿಯೊಬ್ಬರನ್ನು ಕಿಡ್ನಾಪ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟ ಪ್ರಕರಣ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.ಸಾಧೀಕ್ ಎಂಬವವರು ದೂರು ನೀಡಿದ್ದು , ಚಿಕ್ಕಮಗಳೂರಿನ ಕೊಪ್ಪದಿಂದ ತಮ್ಮನಾದ ಸುಲೈಮಾನ್ ಎಂಬವರು ಮೀನು ಲಾರಿಯ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು .ಸೆ.30 ರಂದು ಬೆಳಿಗ್ಗೆ 9:00 ಗಂಟೆಗೆ ಕೊಪ್ಪದ ಮನೆಯಿಂದ ಮಲ್ಪೆಗೆ ಮೀನು ಲಾರಿಯ ಚಾಲಕ ಕೆಲಸಕ್ಕೆ ಬಂದಿದ್ದು ಅ.1 ಇನ್ನೊಬ್ಬ ತಮ್ಮನಾದ ಶಂಶುದ್ದೀನ್ ಎಂಬವನು ಸುಲೈ ಮಾನ್ ಗೆ ಕರೆ ಮಾಡಿದಾಗ ಪೋನ್ ಕರೆ ಸ್ವೀಕರಿಸಲಿಲ್ಲ. ಸೆ.2ರಂದು ಮತ್ತೊಮ್ಮೆ ಬೆಳಿಗ್ಗೆ 9:00 ಗಂಟೆಗೆ ಸುಲೈಮಾನ್ ನ ಮೊಬೈಲ್ ನಂಬ್ರದಿಂದ ಶಂಶುದ್ದೀನ್ ಗೆ ಕರೆ ಬಂದಿದ್ದು ಆ ಕಡೆಯಿಂದ ಸಮೀರ್ ಎಂಬವನು ಮಾತನಾಡಿ ಸುಲೈ ಮಾನ್ ನಮ್ಮ ಜೊತೆಗೆ ಇದ್ದಾನೆ ಆತನನ್ನು ಬಿಡಬೇಕಾದರೆ ನಮಗೆ 15,00,000 ಲಕ್ಷ ಹಣವನ್ನು ಕೊಟ್ಟು ನೀವು ಕರೆದುಕೊಂಡು ಹೋಗಿ ಆತನನ್ನು ನಾವುಗಳು ಸೆ.1 ರಂದು ಮಲ್ಪೆಯಿಂದ ಅಪಹರಣ ಮಾಡಿಕೊಂಡು ಹೋಗಿರುತ್ತೆವೆ ಎಂದು ತಿಳಿಸಿದ್ದು ನಂತರ ಅವರ ಸಂಬಂಧಿಕರು ಮಲ್ಪೆಗೆ ಬಂದು ಅವರ ತಮ್ಮ ಸುಲೈಮಾನ್ ಬಗ್ಗೆ ವಿಚಾರ ನಡೆಸಿದಾಗ ಸುಲೈಮಾನ್ ಈತನು ಮೀನು ಲಾರಿಯ ಚಾಲಕ ಕೆಲಸದ ಜೊತೆಗೆ ಮೀನನ್ನು ಮಲ್ಪೆಯಲ್ಲಿ ತೆಗೆದುಕೊಂಡು ಕೇರಳಕ್ಕೆಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವುದಾಗಿ ತಿಳಿದುಬಂದಿದ್ದು ನಂತರ ಸುಲೈಮಾನ್ ಮೊಬೈಲಿಗೆ ಕರೆ ಮಾಡಿದಾಗ ಸದರಿ ಕರೆಯನ್ನು ಸಮೀರ್ ಎಂಬವನು ಸ್ವೀಕರಿಸಿ ನಮಗೆ ಸುಲೈಮಾನ್ ಮೀನು ವ್ಯವಹಾರದಲ್ಲಿ 15 ಲಕ್ಷ ಹಣವನ್ನು ಕೊಡಬೇಕು ಆ ಕಾರಣದಿಂದ ಅವನನ್ನು ಕೇರಳದ ಹನಸ್ ಮತ್ತು ಅವರ ಸಹೋದರರು ಅಪಹರಣ ಮಾಡಿರುತ್ತಾರೆ. ನೀವು ಬಂದು 15 ಲಕ್ಷ ಹಣ ಕೊಟ್ಟು ಕರೆದುಕೊಂಡು ಹೋಗಿ ಇಲ್ಲದಿದ್ದರೆ ಆತನನ್ನು ಕೊಂದು ಸಮುದ್ರಕ್ಕೆ ಬಿಸಾಡುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ.ಎಂದು ಸಾದಿಕ್ ಈ ಬಗ್ಗೆ ಮಲ್ಪೆ ಠಾಣಾ ಪ್ರಕರಣ ದಾಖಲಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.