



ರಾಹುಲ್ ಅಥಣಿ ಬೆಳಗಾವಿ
ಹುಕ್ಕೇರಿ: ಹುಕ್ಕೇರಿ ತಾಲೂಕಿನ ಬೋರಗಲ್ ಗ್ರಾಮದಲ್ಲಿ ಒಂದೇ ಕುಟುಂಬದ 5 ಮಂದಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ನಡೆದಿದೆ.
ಬೋರಗಲ್ ಗ್ರಾಮದ 46 ವಯಸ್ಸಿನ ನಿವೃತ್ತ ಸೈನಿಕ ಗೋಪಾಲ ದೊಡ್ಡಪ್ಪ ಹಾದಿಮನಿ ಮತ್ತು ಆತನ ಮೂರು ಹೆಣ್ಣು ಮಕ್ಕಳು ಮತ್ತು ಓರ್ವ ಗಂಡು ಮಗ ಸೇರಿದಂತೆ ಐದು ಜನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಕ್ಕಳಾದ ಸೌಮ್ಯ ಗೋಪಾಲ್ ಮಾದೇವಿ(19), ಸ್ವಾತಿ ಗೋಪಾಲ ಹಾದಿಮನಿ(16), ಸಾಕ್ಷಿ ಗೋಪಾಲ್ ಹಾದಿಮನಿ(12), ಸೃಜನ್ ಗೋಪಾಲ್ ಹಾದಿಮನಿ(10) ಮೃತ ದುರ್ದೈವಿಗಳು. ಆತ್ಮ ಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ ಇತ್ತಿಚಿಗೆ ಗೋಪಾಲನ ಹೆಂಡತಿ ಕೊರೊನಾದಿಂದ ಸಾವನ್ನಪ್ಪಿದ್ದರು.
ಸ್ಥಳಕ್ಕೆ ಸಂಕೇಶ್ವರ ಪಿಎಸ್‍ಆಯ್ ಗಣಪತಿ ಕೊಗನೊಳ್ಳಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.