logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಹೂವಿನ ಬೆಳೆಗಾರರ ಸಹಕಾರ ಸಂಘ ನಿ, ಕಾರ್ಕಳ ಇದರ ಪ್ರಥಮ ವಾರ್ಷಿಕ ಮಹಾಸಭೆ

ಟ್ರೆಂಡಿಂಗ್
share whatsappshare facebookshare telegram
20 Dec 2021
post image

ಕಾರ್ಕಳ : ಹೂವಿನ ಬೆಳೆಗಾರರ ಸಹಕಾರ ಸಂಘ ನಿ, ಕಾರ್ಕಳ ಇದರ 2020-21 ನೇ ಸಾಲಿನ ಪ್ರಥಮ ವಾರ್ಷಿಕ ಮಹಾಸಭೆ ಸಂಘದ ಮುಖ್ಯ ಕಚೇರಿಯ ವಠಾರದಲ್ಲಿ ನಡೆಯಿತು.

ಸಂಘದ ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ ಡಿಸೋಜ, ಸಂಘದ ಉಪಾಧ್ಯಕ್ಷರಾದ ಶ್ರೀ ನವೀನ್ ಶೆಣೈ ಹಾಗೂ ಸಂಘದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಮತಿ ಫ್ಲೋರ ಮೆಂಡೋನ್ಸ, ಶ್ರೀ ವೆಂಕಟರಮಣ ಶರ್ಮ, ಶ್ರೀ ಶಶಿಕಾಂತ್ ಭಟ್, ಶ್ರೀಮತಿ ಫ್ಲೇವಿಯ ಆರಾನ್ಹ, ಶ್ರೀ ಜಾನ್ ಟೆಲ್ಲಿಸ್,ಶ್ರೀಮತಿ ಲವೀಟ ಕರ್ಡೂಜ, ಶ್ರೀ ರಮೇಶ್ ಬಿ. ನಿಟ್ಟೆ, ಶ್ರೀಮತಿ ವಿದ್ಯಾಲಕ್ಹ್ಮೀ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.. ಹಾಗೂ ಸಂಘದ ಮುಖ್ಯಕಾರ್ಯನಿರ್ವಾಹಣಾಧಿಕಾರಿಯಾದ ಕುl ಲತಾ ಹಾಗೂ ಸಿಬ್ಬಂದಿವರ್ಗದವರಾದ ಶ್ರೀಮತಿ ವಿನೋಲ ರೆಲ್ಮ ಮೆಂಡೋನ್ಸ, ವಿದ್ಯಾ ಹಾಗೂ ಬಂದಿರುವಂತ ಸರ್ವ ಸದಸ್ಯರು ಉಪಸ್ಥಿತರಿದ್ದರು.

ಪ್ರಾರ್ಥನೆಯನ್ನು ರಮೇಶ.. ಬಂದಿರುವಂತಹ ಅತಿಥಿ ಗಣ್ಯರನ್ನು ಹಾಗೂ ಎಲ್ಲ ಸದಸ್ಯರನ್ನು ಶ್ರೀಮತಿ ಫ್ಲೇವಿಯ ಆರಾನ್ಹ ಸ್ವಾಗತ ಸಂಸ್ಥೆಯ ಕಾರ್ಯನಿರ್ವಾಹಣಾಧಿಕಾರಿ ಕುl ಲತಾ ಇವರು ಹಿಂದಿನ ಸಭೆಯ ನಿರ್ಣಯ, ಮಹಾಸಭೆಯ ಆಮಂತ್ರಣ ಪತ್ರಿಕೆ ಹಾಗೂ 2021-22 ನೇ ಸಾಲಿನ ಅಂದಾಜು ಆಯಾವ್ಯಾಯ ಬಜೆಟ್ಟನು ಓದಿ ದಾಖಲಿಸಿ ಮಂಜೂರು ಮಾಡಿದರು...

ಸಂಘಕ್ಕೆ ಅತೀ ಹೆಚ್ಚು ಡೆಪಾಸಿಟ್ ಇಟ್ಟ ಶ್ರೀ ಮತಿ ವೈಲೆಟ್ ಕಾಬ್ರಾಲ್ ಹಾಗೂ ನಿರ್ದೇಶಕರಾದ ಶ್ರೀ ವೆಂಕಟರಮಣ ಶರ್ಮ , ಹಾಗೂ ಅತೀ ಹೆಚ್ಚು ಡೆಪಾಸಿಟ್ ಗೆ ಸಹಾಯ ಮಾಡಿದ ಸಂಸ್ಥೆಯ ನಿರ್ದೇಶಕರಾದ ಫ್ಲೋರ ಮೆಂಡೋನ್ಸರನ್ನು, ಅತೀ ಹೆಚ್ಚು ಮೆಂಬರ್ಷಿಪ್ ಗೆ ಸಹಾಯ ಮಾಡಿದ ಸಂಸ್ಥೆಯ ನಿರ್ದೇಶಕರಾದ ಉದಯ್ ವಿ. ಶೆಟ್ಟಿ ಮತ್ತು ಕುl ಯಶೋಧ ಮೊಯಿಲಿ ಹಾಗೂ ಸಂಸ್ಥೆಯ ಪಿಗ್ಮಿ ಏಜೆಂಟ್ ಆದ ಶರಣಪ್ಪ ಬಾಲಣ್ಣ ಗೌಡ ಇವರನ್ನು ಸಂಸ್ಥೆಯ ಅಧ್ಯಕ್ಷರು ಹಾಗೂ ನಿರ್ದೇಶಕರು ಸೇರಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದರು. ಬಂದಿರುವಂತಹ ಸದಸ್ಯರಿಗೆ ಶೇರ್ ಸರ್ಟಿಫಿಕೇಟ್ ಹಂಚಿಕೆ ಮಾಡಲಾಯಿತು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಫ್ರಾನ್ಸಿಸ್ ಡಿಸೋಜ ಇವರು ಕೆಲವೊಂದು ತತ್ತ್ವಜ್ಞಾನಿಗಳು ಕೆಲವೊಂದು ತತ್ವ ಸಿದ್ಧಾಂತಗಳನ್ನು ಮಂಡಿಸಿರುವ ತತ್ವ ಸಿದ್ದಂತದಂತೆ, ಯಶಸ್ಸು ಪಡೆಯಬೇಕಾದಲ್ಲಿ ನಿನ್ನನು ನೀನು ಗುರುತಿಸಿ, ನಿನ್ನನ್ನು ನೀನು ತಿದ್ದಿ, ನಿನಗೆ ನೀನು ಸಹಕರಿಸದಿದ್ದಲ್ಲಿ ಯಾವತ್ತೂ ಯಶಸ್ಸನ್ನು ಪಡೆಯಲಾರೆ.” ಎಂಬತ್ತೆ ಈ ಹೂವಿನ ಬೆಳೆಗಾರರ ಸಹಕಾರ ಸಂಘದಲ್ಲಿ ತಮ್ಮ ಪ್ರಾತಿನಿಧ್ಯ ಸಹಾಯ ಮತ್ತು ಸಹಕಾರ ಇಲ್ಲದೇ ಇದ್ದಲ್ಲಿ ಈ ಸಂಸ್ಥೆಯು ಶ್ರೇಯಸ್ಸು ಮತ್ತು ಅಭಿವೃದ್ಧಿಯನ್ನು ಹೊಂದುವುದು ಕಷ್ಟಸಾಧ್ಯ. ತಾವು ಈಗಾಗಲೇ ತಮ್ಮ ಸಹಕಾರವನ್ನು ಸಂಪೂರ್ಣವಾಗಿ ನೀಡಿದ್ದೀರಿ, ಇನ್ನೂ ಮುಂದೆಯೂ ತಮ್ಮ ಸಹಕಾರವನ್ನು ಸಹಭಾಗಿತ್ಯವನ್ನು ಆಶಿಸುತ್ತೇನೆ ಎಂದು ತಿಳಿಸಿದರು. ಮುಂದುವರೆದು ಹೂವಿನ ಬೆಳೆಗಾರರ ಸಹಕಾರ ಸಂಘ (ನಿ.) ಕಾರ್ಕಳ ಇದರ ಪ್ರಥಮ ವಾರ್ಷಿಕ ಮಹಾಸಭೆಯ ಈ ಸಂದರ್ಭದಲ್ಲಿ ಸಂಘದ ಜೊತೆ ಕೈ ಜೋಡಿಸಿದ ಸದಸ್ಯರಿಗೆ, ಬ್ಯಾಂಕ್ ಖಾತೆ ತೆರೆದ ಗ್ರಾಹಕರಿಗೆ, ಠೇವಣಿ ನೀಡಿ ಪ್ರೋತ್ಸಾಹಿಸಿದ ಠೇವಣಿದಾರರಿಗೆ, ಪಿಗ್ಮಿ ಕೊಟ್ಟು ಸಹಕರಿಸಿದವರಿಗೆ, ಸಾಲ ತೆಗೆದುಕೊಂಡು ಉತ್ತೇಜನ ನೀಡಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸಿದರು. ಕರ್ನಾಟಕ ರಾಜ್ಯದ ಚರಿತ್ರೆಯಲ್ಲೇ ಪ್ರಪ್ರಥಮ ಬಾರಿಗೆ ಕಾರ್ಕಳ ತಾಲೂಕಿನಲ್ಲಿ ತಾಲೂಕು ಮಟ್ಟದ ಹೂವಿನ ಬೆಳೆಗಾರರ ಸಹಕಾರ ಸಂಘವು ಆರಂಭಗೊಳ್ಳಲು ತಮ್ಮ ಸಹಕಾರವೂ ಮಹತ್ವದ್ದಾಗಿರುತ್ತದೆ. ನಮ್ಮ ಸಂಘವನ್ನು ಜಿಲ್ಲಾ ಮಟ್ಟದಲ್ಲಿ ಪ್ರದರ್ಶಿಸಬೇಕೆಂಬ ನಮ್ಮ ಆಶಾಯಕ್ಕೆ ನಿಮ್ಮ ಬೆಂಬಲ ತುಂಬಾ ಮುಖ್ಯ, ತಮ್ಮ ಸಹಕಾರ ಇದ್ದಲ್ಲಿ ಮುಂದಿನ ಸಮಯದಲ್ಲಿ ಇದನ್ನು ಕಾರ್ಯಗತ ಗೊಳಿಸಲು ಅದರ ಕಡೆ ಹೆಚ್ಚಿನ ಗಮನ ಹಾಗೂ ಪ್ರಯತ್ನ ಮಾಡುವುದಾಗಿ ಅಧ್ಯಕ್ಷರು ತಿಳಿಸಿದರು.

ಉಪಾಧ್ಯಕ್ಷರಾದ ನವೀನ್ ಶೆಣೈ ಎಲ್ಲರಿಗೂ ಧನ್ಯವಾದವನ್ನು ತಿಳಿಸಿದರು.ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ನಿರ್ದೇಶಕರಾದ ಶ್ರೀಮತಿ ವಿದ್ಯಾಲಕ್ಷ್ಮಿ ನೆರವೇರಿಸಿದರು..

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.