logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಶಿಕ್ಷಕಿಯರಾಗಲು ಬಯಸುವ ಮಹಿಳೆಯರಿಗೆ 'ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್'ನಲ್ಲಿದೆ ಒಂದು ಸುರ್ವಣಾವಕಾಶ.

ಟ್ರೆಂಡಿಂಗ್
share whatsappshare facebookshare telegram
24 Mar 2025
post image

ಮಣಿಪಾಲ: ಮಣಿಪಾಲದ ಶ್ರೀ ಶಾರದ ಟೀಚರ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಅರ್ಹ ಆಸಕ್ತ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸುವ ಮಾಂಟೆಸ್ಸರಿ/ನರ್ಸರಿ/ಪೂರ್ವ ಪ್ರಾಥಮಿಕ ಶಿಕ್ಷಕಿಯರ ತರಬೇತಿ ಕೋರ್ಸ್ಗಳ ನೂತನ ಬ್ಯಾಚ್‌ಗಳು ಆರಂಭವಾಗಲಿದ್ದು ನಿರುದ್ಯೋಗಿ ಮಹಿಳೆಯರು, ಗ್ರಹಿಣಿಯರು ಇದರ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.

ಇಲ್ಲಿನ ತರಬೇತಿ ತರಗತಿಗಳು ನರ್ಸರಿಗೆ ಕಳುಹಿಸುವ 2 ರಿಂದ 3 ವರ್ಷಗಳ ಪ್ರಾಯದ ಮಕ್ಕಳ ಬಾಲಸಂರಕ್ಷಣೆಯ ಅಂಶಗಳನ್ನು ಬೆಳೆಸುವ ಭೋದನೆಗಳು, ಆ ಮಕ್ಕಳ ಜೊತೆ ವ್ಯವಹರಿಸುವ ರೀತಿ, ಪ್ರಾಸಬದ್ಧವಾಗಿ ಕಥೆ, ಪದ್ಯಗಳ ಮೂಲಕ ಅವರ ಏಕಾಗ್ರತೆಯನ್ನು ಬೆಳೆಸುವ ಕಲಿಕಾ ವಿಧಾನಗಳು ಅಲ್ಲದೆ ವ್ಯವಸ್ಥಿತ ಪಠ್ಯಕ್ರಮದ ಯೋಜನೆಗಳು, ರೈಮ್ಸ್, ಧ್ವನಿಶಾಸ್ತ ಮುಂತಾದ ಸಂವಹನಶೀಲಾ ಕಾರ್ಯಗಾರಗಳು ಮತ್ತು ವಿಚಾರಗೋಷ್ಠಿಗಳು ಒಳಗೊಂಡಿರುತ್ತವೆ.

ಅದೇ ರೀತಿ ಮಾಂಟೆಸ್ಸರಿ ವಿಧಾನದ ಸಲಕರಣೆಗಳ ಉಪಯೋಗ, ಮಗುವಿನ ದೈಹಿಕ, ಭಾವಾನಾತ್ಮಕ ಮತ್ತು ಸಾಮಾಜಿಕ ಬೆಳವಣಿಗೆಗಳಿಗೆ ಅನುಕೂಲವಾಗುವ ಪಠ್ಯಕ್ರಮಗಳೂ ಕೂಡ ಈ ತರಬೇತಿ ತರಗತಿಗಳಲ್ಲಿ ಮಹಿಳೆಯರಿಗೆ ಕಲಿಸಿ ಅವರನ್ನು ಪ್ರಬುದ್ಧ ಶಿಕ್ಷಕಿಯರನ್ನಾಗಿಸಿ ತಯಾರು ಮಾಡಲಾಗುತ್ತದೆ. ತರಬೇತಿ ಪಡೆದ ಶಿಕ್ಷಕಿಯರಿಗೆ ಅನೇಕ ಶಾಲೆಗಳಲ್ಲಿ ಸಂದರ್ಶನಕ್ಕೆ ಹೋಗಲು ಅವಕಾಶ ಕಲ್ಪಿಸಿ ಕೊಡಲಾಗುತ್ತದೆ ಹಾಗು ದೇಶ– ವಿದೇಶಗಳಲ್ಲಿ ಕೂಡ ಅವರಿಗೆ ವಿಪುಲ ಬೇಡಿಕೆಯಿದ್ದು ಈಗಾಗಲೇ ಸುಮಾರು 600 ಮಿಕ್ಕಿ ಮಹಿಳೆಯರು ತಮ್ಮ ಭವಿಷ್ಯವನ್ನು ಈ ಮೂಲಕ ನಿರ್ಮಾಣ ಮಾಡಿಕೊಂಡಿದ್ದಾರೆ.

ಈಗಾಗಲೇ ಪ್ರವೇಶಾತಿ ಆರಂಭವಾಗಿದ್ದು ಪಿಯುಸಿ ಮೇಲ್ಪಟ್ಟ ವಿದ್ಯಾರ್ಹತೆ ಹೊಂದಿದ ಮಹಿಳಾ ಆಭ್ಯರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬಹುದು ಎಂದು ಸಂಸ್ಥೆಯ ಸಂಯೋಜಕಿ ಸುನೀತಾ ಅವರು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಿ.ಸಿ.ಆಫೀಸ್ ಬಳಿ, ಕ್ರಿಸ್ಟಲ್ ಬಿಜ್ಹ್ ಹಬ್, 1ನೇ ಮಹಡಿಯಲ್ಲಿರುವ ಸಂಸ್ಥೆಯಲ್ಲಿ ಅಥವಾ 9901722527 ದೂರವಾಣಿಯನ್ನು ಸಂಪರ್ಕಿಸಬಹುದು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.