



ಲಕ್ನೋ: ಸಾರಸ್ ಕೊಕ್ಕರೆಯನ್ನು ರಕ್ಷಣೆ ಮಾಡಿ ಒಂದು ವರ್ಷಗಳ ಕಾಲ ಸಾಕಿದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬನಿಗೆ ಅರಣ್ಯ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಅಮೇಥಿ ಜಿಲ್ಲೆಯ ಮಂಡ್ಖಾ ಗ್ರಾಮದ ಆರೀಫ್ ಖಾನ್ ಗುರ್ಜರ್ ಅವರು ತಮ್ಮ ಹೊಲದಲ್ಲಿ ಸಿಕ್ಕಿದ್ದ ಕೊಕ್ಕರೆಯನ್ನು ಮನೆಗೆ ಕೊಂಡೊಯ್ದು ಸಾಕಿದ್ದರು. ಈಗ ಅರಣ್ಯ ಇಲಾಖೆ ಅವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಪಕ್ಷಿಯನ್ನು ಸಮಸ್ಪುರ್‍ನ ಅಭಯಾರಣ್ಯಕ್ಕೆ ಸ್ಥಳಾಂತರಿಸಿದ್ದು, ನೈಸರ್ಗಿಕವಾಗಿ ವಾಸಿಸಲು ಅವಕಾಶ ಮಾಡಿಕೊಟ್ಟಿದ್ದಾರೆ.
ಸಮಾಜವಾದಿ ಪಕ್ಷದ ನಾಯಕ ಅಕಿಲೇಶ್ ಯಾದವ್ (Akhilesh Yadav), ಅರಣ್ಯ ಇಲಾಖೆಯ ಕ್ರಮವನ್ನು ಖಂಡಿಸಿದ್ದಾರೆ. ಇಲಾಖೆಗೆ ಪ್ರಧಾನಿ ನಿವಾಸದ ನವಿಲನ್ನು ಕೊಂಡೊಯ್ಯುವ ಧೈರ್ಯ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.