



ಕಾರ್ಕಳ: ಕಾರ್ಕಳ ತಾಲೂಕಿನ ಹೆರ್ಮುಂಡೆ ಗ್ರಾಮದ ಮರ್ಣೆ ಗ್ರಾಮ ಪಂಚಾಯತಿಹಾಗೂ ಶಿರ್ಲಾಲು ಗ್ರಾಮ ಪಂಚಾಯತಿ ಗಡಿ ಭಾಗವಾದ ಚಿಂಕರಮಲೆ ಯ ಅರಣ್ಯ ವ್ಯಾಪ್ತಿಯ ಉಯ್ಯಾಲೆ ಪಾದೆ ಎಂಬಲ್ಲಿ ವ್ಯಾಪ್ತಿ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಭಾರಿ ಕಾಡ್ಗಿಚ್ಚು ಅನಾಹುತ ಸಂಭವಿಸಿದ್ದು ಅನೇಕ ಮರಗಳು ಕಾಡ್ಗಿಚ್ಚಿಗೆ ಆಹುತಿಯಾಗಿದೆ. ಚಿಂಕರ ಮಲೆ ಅರಣ್ಯ ವ್ಯಾಪ್ತಿಯಲ್ಲಿ ಸುತ್ತ ಮುತ್ತ ಪ್ರದೇಶಗಳಲ್ಲಿ ಈಗಾಗಲೇ ಬೆಂಕಿ ವ್ಯಾಪಕವಾಗಿ ಹರಡುತ್ತಿದೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ. ಉಯ್ಯಾಲೆ ಪಾದೆಯು ಮುಖ್ಯ ರಸ್ತೆಯಿಂದ ಸುಮಾರು ಎರಡು ಕಿಮೀ . . ಗುಂಡಮ, ಮಾರ್ಲಿ, ಕುದುರು ಪ್ರದೇಶಗಳಲ್ಲಿ ವ್ಯಾಪಿಸಿದ್ದ ಬೆಂಕಿಯನ್ನು ಸುಮಾರು 50 ಜನರ ತಂಡ ಬೆಂಕಿಯನ್ನು ನಂದಿಸಿದೆ.ಕಳೆದ ಮೂರು ದಿನಗಳಿಂದ ಉರಿಯುತ್ತಿರುವ ಕಾಳ್ಗಿಚ್ಚಿಗೆ ಸುಮಾರು ಮೂರು ಹೆಕ್ಟೇರ್ ಪ್ರದೇಶ ಆಹುತಿಯಾಗಿದೆ.ಈಗಾಗಲೇ ಅರಣ್ಯಾಧಿಕಾರಿಗಳ ತಂಡವು ಕಾಡ್ಗಿಚ್ಚು ಹಬ್ಬಿರುವ ಪ್ರದೇಶಕ್ಕೆ ಭೇಟಿ ನೀಡಿ ಕಾಡ್ಗಿಚ್ಚು ಆರಿಸುವ ಲ್ಲಿ ನಿರತವಾಗಿದೆ.ಶಿರ್ಲಾಲು ಪ್ರದೇಶದಲ್ಲಿ ಕಾಡ್ಗಿಚ್ಚು ಹರಡದಂತೆ ಕಟ್ಟೆಚ್ಚರ ವಹಿಸಲಾಗಿದೆ. ಉಯ್ಯಾಲೆ ಪಾದೆ ಪ್ರದೇಶದಲ್ಲಿ ಸ್ಥಳೀಯರು ಜೇನು ತೆಗೆಯಲು ಹೋದ ಸಂದರ್ಭದಲ್ಲಿ ಜೇನು ಹುಳುಗಳನ್ನು ಓಡಿಸುವಾಗ ಹೊಗೆ ಹಾಕಿದ ಸಂದರ್ಭದಲ್ಲಿ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಮಾತನಾಡಿಕೊಳ್ಲುತಿದ್ದಾರೆ .ಅದರೆ ಸ್ಪಷ್ಠತೆ ಸಿಕ್ಕಿಲ್ಲ ಕಾರ್ಕಳ ತಾಲೂಕು ವಲಯ ಅರಣ್ಯಾ ವಲಯಾಧಿಕಾರಿ ಪ್ರಭಾಕರ್ ಕುಲಾಲ್ ಸಿಡಿಲಿನ ಬೆಂಕಿ ಬಿದ್ದಿರಬಹುದು ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.