logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ರಜತೋತ್ಸವ ಸಮಿತಿ ರಚನೆ. ಸಂಚಾಲಕರಾಗಿ ಪತ್ರಕರ್ತ ಮೊಹಮ್ಮದ್ ಶರೀಫ್ ಕಾರ್ಕಳ - ಪ್ರಧಾನ ಕಾರ್ಯದರ್ಶಿಯಾಗಿ ಜಯಕರ ಸುವರ್ಣ ಆಯ್ಕೆ

ಟ್ರೆಂಡಿಂಗ್
share whatsappshare facebookshare telegram
21 Dec 2022
post image

ಉಡುಪಿ: ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ 25 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಇಡೀ ವರ್ಷ 25 ಕಾರ್ಯಕ್ರಮಗಳನ್ನು ಆಯೋಜನೆ ಮಾಡಲು ಉಡುಪಿ ಜಿಲ್ಲಾ ಪತ್ರಕರ್ತರ ಸಂಘ ನಿರ್ಧರಿಸಿದೆ. ರಜತ ಮಹೋತ್ಸವದ ಹಿನ್ನೆಲೆಯಲ್ಲಿ ಸಮಿತಿಯನ್ನು ಸಂಘ ರಚಿಸಿದ್ದು ಹಿರಿಯ ವರದಿಗಾರ ಮುಹಮ್ಮದ್ ಶರೀಫ್ ಕಾರ್ಕಳ ಅವರನ್ನು ಸಂಚಾಲಕರನ್ನಾಗಿ ಆಯ್ಕೆ ಮಾಡಲಾಗಿದೆ.

ರಜತ ಮಹೋತ್ಸವದ ಅಂಗವಾಗಿ ಜನವರಿ ತಿಂಗಳಿನಿಂದ ಡಿಸೆಂಬರ್ ವರೆಗೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಪತ್ರಿಕಾ ರಂಗಕ್ಕೆ ಸಂಬಂಧಪಟ್ಟಂತೆ ಕಾರ್ಯಾಗಾರಗಳು, ವಿವಿಧ ಕ್ಷೇತ್ರಗಳಲ್ಲಿ ಅಹರ್ನಿಶಿ ದುಡಿಯುತ್ತಿರುವ ಪತ್ರಕರ್ತರನ್ನು ಗೌರವಿಸುವ ಕಾರ್ಯಕ್ರಮಗಳನ್ನು ಸಮಿತಿ ಹಮ್ಮಿಕೊಳ್ಳಲಿದೆ. ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ತುರ್ತು ಅಗತ್ಯಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸದಸ್ಯರ ಕ್ಷೇಮಾಭಿವೃದ್ಧಿ ನಿಧಿ ಸ್ಥಾಪಿಸುವ ಉದ್ದೇಶ ಹಮ್ಮಿಕೊಳ್ಳಲಾಗಿದೆ.

ಕ್ರೀಡಾಕೂಟಗಳು, ಸಾಂಸ್ಕೃತಿಕ ಕಾರ್ಯಕ್ರಮ ಪತ್ರಿಕಾ ಸಮ್ಮೇಳನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ವ್ಯಕ್ತಿಗಳ ಜೊತೆ ಸಂವಾದ ಕಾರ್ಯಕ್ರಮ ಜನಪ್ರತಿನಿಧಿಗಳ ಜೊತೆ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಪಟ್ಟಂತೆ ಚರ್ಚಾಕೂಟಗಳು ನಡೆಯಲಿದೆ. ಶೈಕ್ಷಣಿಕ ಸಂಸ್ಥೆಗಳ ಸಹಯೋಗದ ಜೊತೆ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಆಸಕ್ತಿ ಮೂಡಿಸವ ಕಾರ್ಯಾಗಾರ, ಛಾಯಾಚಿತ್ರ ಮತ್ತು ವೀಡಿಯೋ ತರಬೇತಿ ಆಯೋಜಿಸುವ ಉದ್ದೇಶವಿದೆ. ಪತ್ರಿಕಾ ಛಾಯಾಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ನಿರ್ಮಾಣ ಮತ್ತು ಪ್ರದರ್ಶನಾ ಕಾರ್ಯಕ್ರಮ ಆಯೋಜಿಸಲಾಗಿದೆ.

ರಜತಮಹೋತ್ಸವ ಸಮಿತಿಯ ಪದಾಧಿಕಾರಿಗಳ ಪಟ್ಟಿ ಈ ಕೆಳಗಿನಂತಿದೆ

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ರಜತ ಮಹೋತ್ಸವ ಸಮಿತಿ, ಉಡುಪಿ ಜಿಲ್ಲೆ

ಸಂಚಾಲಕರು- ಮೊಹಮ್ಮದ್ ಶರೀಫ್ ಕಾರ್ಕಳ, ಅಧ್ಯಕ್ಷರು: ರಾಜೇಶ್ ಶೆಟ್ಟಿ ಅಲೆವೂರು ಪ್ರಧಾನ ಕಾರ್ಯದರ್ಶಿ: ಜಯಕರ ಸುವರ್ಣ ಜತೆ ಕಾರ್ಯದರ್ಶಿ: ದೀಪಕ್ ಜೈನ್ ಕೋಶಾಧಿಕಾರಿ- ಉಮೇಶ್ ಮಾರ್ಪಳ್ಳಿ

ಗೌರವ ಸಲಹೆಗಾರರು: ಗೋಕುಲ್‌ದಾಸ್ ಪೈ, ದಿನೇಶ್ ಕಿಣಿ, ಕಿರಣ್ ಮಂಜನಬೈಲು, ಗಣೇಶ್‌ಪ್ರಸಾದ್ ಪಾಂಡೇಲು,ಎನ್. ಗುರುರಾಜ್, ಎ.ಎಸ್.ಎನ್. ಹೆಬ್ಬಾರ್.

ಉಪಾಧ್ಯಕ್ಷರುಗಳು: ಗಣೇಶ್ ನಾಯಕ್, ಅಂದುಕಾ, ಸುರೇಶ್ ಎರ್ಮಾಳ್, ಶಶಿಧರ್ ಹೆಮ್ಮಾಡಿ, ರಾಜೇಶ್ ಅಚ್ಲಾಡಿ, ಅಜಿತ್ ಆರಾಡಿ,

ಆರ್ಥಿಕ ಸಮಿತಿ:- ಸದಸ್ಯರುಗಳಾಗಿ ಕೆ.ಸಿ.ರಾಜೇಶ್, ಆರ್.ಬಿ.ಜಗದೀಶ್, ರಾಕೇಶ್ ಕುಂಜೂರು, ಹರೀಶ್ ಹೆಜಮಾಡಿ, ನಾಗರಾಜ ರಾಯಪ್ಪನಮಠ, ಹೆಬ್ರಿ ಉದಯ ಶೆಟ್ಟಿ, ಅರುಣ್ ಕುಮಾರ್ ಶೀರೂರು, ಮೋಹನ್ ಉಡುಪ, ಜನಾರ್ದನ ಕೊಡವೂರು, ಗಣೇಶ್ ಸಾಯ್ಬರಕಟ್ಟೆ, ಗಣೇಶ್ ಕಲ್ಯಾಣಪುರ.

ಸಾಂಸ್ಕೃತಿಕ ಸಮಿತಿ:- ಶಶಿಧರ ಮಾಸ್ತಿಬೈಲು, ಆಸ್ಟ್ರೋ ಮೋಹನ್, ಅನೀಲ್ ಕೈರಂಗಳ, ರಶ್ಮಿ ಅಮ್ಮೆಂಬಳ, ಹರಿಪ್ರಸಾದ್ ನಂದಳಿಕೆ, ಉದಯ ಪಡಿಯಾರ್, ಲೋಕೇಶ್ ತೆಕ್ಕಟ್ಟೆ, ಪುಂಡಾಲಿಕ ಮರಾಠೆ, ರವೀಂದ್ರ ಕೋಟ, ನಾಗರಾಜ್ ರಾವ್ ವರ್ಕಾಡಿ, ಪ್ರವೀಣ್ ಮುದ್ದೂರು, ಜಾನ್ ಡಿಸೋಜ.

ಕ್ರೀಡಾ ಸಮಿತಿ:- ರಾಜು ಖಾರ್ವಿ, ಚೇತನ್ ಮಟಪಾಡಿ, ಪ್ರಶಾಂತ್ ಪಾದೆ, ಉದಯ ಮುಂಡ್ಕೂರು, ರಾಘವೇಂದ್ರ ಭಟ್, ಕೃಷ್ಣ ಬಿಜೂರು, ಹಮೀದ್ ಪಡುಬಿದ್ರಿ, ಚಂದ್ರಶೇಖರ್ ಬಿಜಾಡಿ, ದಿನೇಶ್ ಕಾಶಿಪಟ್ಣ, ಅಶ್ವಥ್ ಆಚಾರ್ಯ.

ಸ್ಮರಣ ಸಂಚಿಕೆ- ಪುಸ್ತಕ ಸಮಿತಿ: ಯು.ಎಸ್.ಶೆಣೈ, ಸುಜಿ ಕುರ್ಯ, ಬಾಲಚಂದ್ರ, ಬಿ.ಬಿ.ಶೆಟ್ಟಿಗಾರ್, ಸುಭಾಷ್ ಚಂದ್ರ ವಾಗ್ಳೆ, ಶೀಜಾ, ಶೇಷಗಿರಿ ಭಟ್, ರಾಧಿಕಾ.

ಕಾರ್ಯಕ್ರಮ ಆಯೋಜನ ಸಮಿತಿ:- ನಝೀರ್ ಪೊಲ್ಯ, ಪ್ರಮೋದ್ ಸುವರ್ಣ, ರಾಜೇಶ್ ಅಚ್ಲಾಡಿ, ಕೆ.ಎಂ.ಖಲೀಲ್, ಪರೀಕ್ಷಿತ್ ಶೇಟ್, ರಾಮ್ ಅಜೆಕಾರು, ರಕ್ಷಿತ್ ಬೆಳಪು, ನಿತೀಶ್, ಲಕ್ಷ್ಮೀ ಮಚ್ಚಿನ, ಅವಿನ್ ಶೆಟ್ಟಿ, ಜೀವನ್ ಆರ್.ಶೆಟ್ಟಿ. ಹರೀಶ್ ಪಾಲೆಚ್ಚಾರ್.

ಪ್ರಚಾರ ಸಮಿತಿ: ರಹೀಂ ಉಜಿರೆ, ಮೈಕಲ್ ರೋಡ್ರಿಗಸ್, ಕೃಷ್ಣ ಅಜೆಕಾರು, ಸೂರಜ್, ಅಂಕಿತ್ ಶೆಟ್ಟಿ, ಜಯಂತ್, ಹರೀಶ್ ಕುಂದರ್, ಹರೀಶ್ ತುಂಗ, ಹರೀಶ್ ಸಚ್ಚರಿಪೇಟೆ, ಜಸ್ಟಿನ್, ಶ್ರೀಕಾಂತ್ ಹೆಮ್ಮಾಡಿ, ಸಂದೀಪ್ ಪೂಜಾರಿ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.