logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಪೇಜಾವರ ಶ್ರೀಗಳಿಂದ ಮಾಜಿ ಉಪ ಪ್ರಧಾನಿ ಅಡ್ವಾಣಿ ಭೇಟಿ: ಶ್ರೀಕೃಷ್ಣನ ಗಂಧ ಪ್ರಸಾದ, ಸ್ಮರಣಿಕೆ ಅರ್ಪಣೆ

ಟ್ರೆಂಡಿಂಗ್
share whatsappshare facebookshare telegram
12 Oct 2022
post image

ಹೊಸದಿಲ್ಲಿ; ಉಡುಪಿ ಪೇಜಾವರ ಮಠಾಧೀಶಾದ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಬುಧವಾರ ದೆಹಲಿಯಲ್ಲಿ ಮಾಜಿ ಉಪ ಪ್ರಧಾನಿ ಬಿಜೆಪಿ ಹಿರಿಯ ಧುರೀಣ ಎಲ್. ಕೆ. ಅಡ್ವಾಣಿ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದರು. ಅಡ್ವಾಣಿಯವರೊಂದಿಗೆ ಉಭಯಕುಶಲೋಪರಿ ನಡೆಸಿ ಅವರಿಗೆ ದೀರ್ಘಾಯುರಾರೋಗ್ಯವನ್ನು ಶ್ರೀಕೃಷ್ಣನಲ್ಲಿ ಪ್ರಾರ್ಥಿಸುವುದಾಗಿ ತಿಳಿಸಿದರು . ಅಯೋಧ್ಯಾ ರಾಮಜನ್ಮಭೂಮಿ ಆಂದೋಲನದಲ್ಲಿ ಅಡ್ವಾಣಿ ಯವರ ಪಾತ್ರವನ್ನು ಶ್ರೀಗಳು ಬಣ್ಣಿಸಿ ಆ ಹೋರಾಟದ ಫಲವಾಗಿ ಇಂದು ಭವ್ಯ ರಾಮ ಮಂದಿರ ನಿರ್ಮಾಣಗೊಳ್ಳುವಂತಾಗಿದೆ ಎಂದರು . ಶ್ತೀ ವಿಶ್ವೇಶತೀರ್ಥ ಶ್ರೀಪಾದರು ತಮಗೆ ಯಾವತ್ತೂ ನೀಡಿದ ಸ್ಫೂರ್ತಿಯನ್ನು ಮನಸಾರೆ ಸ್ಮರಿಸಿದರು . ಅಡ್ವಾಣಿಯವರಿಗೆ ಶ್ರೀ ಕೃಷ್ಣನ ಗಂಧ ಪ್ರಸಾದ ಶಾಲು ಸ್ಮರಣಿಕೆ ಫಲಮಂತ್ರಾಕ್ಷತೆಯಿತ್ತು ಆಶೀರ್ವದಿಸಿದರು . ಅಡ್ವಾಣಿ ಅವರ ಪುತ್ರಿ ಪ್ರತಿಭಾ ಅಡ್ವಾಣಿ ಮತ್ತು ಮನೆ ಮಂದಿ ಶ್ರೀಗಳವರನ್ನು ಬರಮಾಡಿಕೊಂಡರು . ಸ್ವಲ್ಪ ಅನಾರೋಗ್ಯವಿದ್ದರೂ ಅಡ್ವಾಣಿಜೀ ಮನೆ ಬಾಗಿಲಿನ ಬಂದು ಶ್ರೀಗಳವರನ್ನು ಬೀಳ್ಕೊಟ್ಟರು. ವಿದ್ವಾನ್ ದೇವಿಪ್ರಸಾದ್ ಭಟ್ವ, ವಿಷ್ಣುಮೂರ್ತಿ ಆಚಾರ್ಯ , ಕೃಷ್ಣ ಭಟ್ ಉಪಸ್ಥಿತರಿದ್ದರು .

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.