logo
WhatsApp Image 2026-04-02 at 14.46.04.jpeg
hindalco everlast.jpeg

ಡಿಆರ್‌ಡಿಒ ಮಾಜಿ ಮಹಾನಿರ್ದೇಶಕ ಅರುಣಾಚಲಂ ಇನ್ನಿಲ್ಲ

ಟ್ರೆಂಡಿಂಗ್
share whatsappshare facebookshare telegram
17 Aug 2023
post image

ನವದೆಹಲಿ: ರಕ್ಷಣೆ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಸಿದ್ದರಾಗಿದ್ದ ಡಿಆರ್‌ಡಿಒ ಮಾಜಿ ಮಹಾನಿರ್ದೇಶಕ ವಿಎಸ್ ಅರುಣಾಚಲಂ ಅವರು ನಿಧನರಾಗಿದ್ದಾರೆ.

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದ ಅರುಣಾಚಲಂ ಅವರು ವಯೋಸಹಜವಾಗಿ ಇಹಲೋಕ ತ್ಯಜಿಸಿದ್ದಾರೆ. ಶಾಂತಿಭೂಷಣ್ ಭಟ್ನಾಗರ್, ಪದ್ಮಭೂಷಣ, ಪದ್ಮವಿಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರು ಲಘು ಯುದ್ಧ ವಿಮಾನ ವಿನ್ಯಾಸದಲ್ಲಿ ಸಿದ್ಧಹಸ್ತರಾಗಿದ್ದರು.

ವಿಎಸ್ ಅರುಣಾಚಲಂ ಅವರು ಸಂಶೋಧನೆ ಅಭಿವೃದ್ಧಿ ಮತ್ತು ಸಂಸ್ಥೆ (DRDO)ಯ ಮುಖ್ಯಸ್ಥರಾಗಿ ಕೆಲಸ ಮಾಡಿದ್ದರಲ್ಲದೇ , ಬಾಬಾ ಪರಮಾಣು ಸಂಶೋಧನಾ ಕೇಂದ್ರ (BARC) , ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ ಮತ್ತು ರಕ್ಷಣಾ ಮೆಟಲರ್ಜಿಕಲ್ ಸಂಶೋಧನಾ ಪ್ರಯೋಗಾಲಯದ ಪ್ರಮುಖ ಹುದ್ದೆಗಳಲ್ಲಿ ಅವರು ತಮ್ಮ ಛಾಪು ಮೂಡಿಸಿದ್ದರು . 1982 – 92 ರ ಅವಧಿಯಲ್ಲಿ ರಕ್ಷಣಾ ಸಚಿವರ ಸಲಹೆಗಾರರಾಗಿದ್ದರು. ಏರೊನಾಟಿಕಲ್ ಡೆವಲಪ್ಮೆಂಟ್ ಏಜೆನ್ಸಿಯಲ್ಲಿ ಮಹತ್ತರವಾದ ಕೆಲಸಗಳನ್ನು ಮಾಡಿದ್ದರು.

ಅರುಣಾಚಲಂ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ವಿದೇಶಾಂಗ ಸಚಿವ ಜೈಶಂಕರ್ ಸಂತಾಪ ವ್ಯಕ್ತಪಡಿಸಿದ್ದಾರೆ

IMG_5455.jpg.jpeg
kamalashile 11_page-0001.jpg
Aadya 26.jpg.jpeg
WhatsApp Image 2025-03-24 at 6.54.49 AM.jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.