



ಅಮೇರಿಕಾದ ಮಾಜಿ ಅಧ್ಯಕ್ಷ ಅವರನ್ನು ಗುರುವಾರ ಜಾರ್ಜಿಯಾದಲ್ಲಿ ಬಂಧಿಸಲಾಗಿದೆ. ಚುನಾವಣಾ ಅಕ್ರಮದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಬಳಿಕ ಅವರನ್ನು 1.65 ಕೋಟಿ ರೂಪಾಯಿಗಳ ಬೋರ್ಡ್ ಮೇಲೆ ಬಿಡುಗಡೆ ಮಾಡಲಾಗಿದೆ.
ಅಮೇರಿಕಾದಲ್ಲಿ 2020 ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ರದ್ದುಗೊಳಿಸಲು ಇತರ 18 ಮಂದಿ ಆರೋಪಿಗಳೊಂದಿಗೆ ಸೇರಿ ಸಂಚು ರೂಪಿಸಿದ ಆರೋಪ ಟ್ರಂಪ್ ಮೇಲಿತ್ತು. ಅಲ್ಲದೆ ಈ ಸಂಚನ್ನು ರೂಪಿಸಿ ಕಾರ್ಯಗತಗೊಳಿಸಲು ಸಹಕರಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ ಅಮೆರಿಕಕ್ಕೆ ಈ ರೀತಿಯ ಆರೋಪ ಇದೆ ಮೊದಲು ಮೊದಲನೆಯ ಬಾರಿಗೆ ಅಮೆರಿಕಾದ ಮಾಜಿ ಅಧ್ಯಕ್ಷರೊಬ್ಬರು ಈ ರೀತಿಯ ಆರೋಪವನ್ನು ಎದುರಿಸುತ್ತಿದ್ದಾರೆ. ಅಮೆರಿಕಾದ ಈ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಬಂಧಿಸಿದ ನಂತರ ಜಾರ್ಜಿಯ ಜೈಲಿನಲ್ಲಿ ಅವರಿಗೆ ಖೈದಿ ಸಂಖ್ಯೆಯನ್ನು ಕೂಡ ನೀಡಲಾಗಿತ್ತು ಎನ್ನುವ ಮಾಹಿತಿ ಬಂದಿದೆ.
ಕಳೆದ ಏಪ್ರಿಲ್ ಇಂದ ಇಲ್ಲಿಯತನಕ ಅವರು ನಾಲ್ಕು ಬಾರಿ ಹಲವು ಕ್ರಿಮಿನಲ್ ದೋಷಾರೋಪನೆಗೆ ಒಳಗಾಗಿದ್ದಾರೆ. ಅಮೇರಿಕಾದ ನ್ಯೂಯಾರ್ಕ್ ನಲ್ಲಿ ನೀಲಿ ಚಿತ್ರದ ನಟಿಗೆ ಹಣ ಪಾವತಿಸಿದ ಆರೋಪ ಕೂಡ ಟ್ರಂಪ್ ಮೇಲಿತ್ತು. ಫ್ಲೋರಿಡಾದಲ್ಲಿ ಸಹಕಾರದ ರಹಸ್ಯ ದಾಖಲೆಗಳನ್ನು ಬೇರೆಡೆ ಸಾಗಿಸಿದ ಆರೋಪ ಕೂಡ ಡೊನಾಲ್ಡ್ ರವರು ಎದುರಿಸುತ್ತಿದ್ದಾರೆ.
ತಮ್ಮನ್ನು ಬಂಧಿಸಿದ ನಂತರ ಸುದ್ದಿಗಾರರೊಂದಿಗೆ ಟ್ರಂಪ್ ಮಾತನಾಡಿದ್ದರು. ಇದು ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಬಹಳ ದುಃಖದ ದಿನ ಇವತ್ತು ಇಲ್ಲಿ ನಡೆದಿರುವುದು ನ್ಯಾಯದ ಅಣಕವಾಗಿದೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ತಮ್ಮನ್ನು ಸಮರ್ಥಿಸಿಕೊಂಡಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.