logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವದ ಸಂಭ್ರಮ

ಟ್ರೆಂಡಿಂಗ್
share whatsappshare facebookshare telegram
16 Nov 2021
post image

ಉಡುಪಿ ; ಉತ್ಥಾನ ದ್ವಾದಶಿಯ ಶುಭಸಂದರ್ಭದಲ್ಲಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಾಲ್ಕು ದಿನಗಳ ಲಕ್ಷದೀಪೋತ್ಸವ ಹಾಗೂ ತೆಪ್ಪೋತ್ಸವದ ಸಂಭ್ರಮ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರ ನೇತೃತ್ವದಲ್ಲಿ ಮಂಗಳವಾರದಿಂದ ಪ್ರಾರಂಭಗೊಂಡಿದೆ.

ಶ್ರೀಕೃಷ್ಣ ಮಠದ ಪರಿಸರ, ಮಧ್ವ ಸರೋವರ, ರಥಬೀದಿಯ ಸುತ್ತಮುತ್ತ ಲಕ್ಷಕ್ಕೂ ಅಧಿಕ ಹಣತೆಯ ದೀಪಗಳು ಹಾಗೂ ವರ್ಣವೈವಿಧ್ಯದ ವಿದ್ಯುದ್ವೀಪ ಗಳು ಸಂಜೆಯ ವೇಳೆ ಬೆಳಗಿ ರಥಬೀದಿ ಪರಿಸರ ನಂದಗೋಕುಲದಂತೆ ಭಾಸವಾಗುತ್ತಿದೆ.

ಮಧ್ವಸರೋವರದಲ್ಲಿ ಮಂಟಪದ ರೀತಿಯಲ್ಲಿ ಅಲಂಕೃತ ದೋಣಿಯಲ್ಲಿ ಶ್ರೀಕೃಷ್ಣ ಹಾಗೂ ಮುಖ್ಯಪ್ರಾಣ ಉತ್ಸವಮೂರ್ತಿಗಳನ್ನು ಪ್ರದಕ್ಷಿಣೆ ಬರುವ ತೆಪ್ಪೋತ್ಸವ ನಡೆಯಿತು. ಮಧ್ವ ಸರೋವರದ ಸುತ್ತಲೂ ಮಣ್ಣಿನ ಹಣತೆಗಳಲ್ಲಿ ದೀಪವನ್ನು ಬೆಳಗಿಸುವ ಮೂಲಕ ಅಲ್ಲೊಂದು ಹೊಸ ಲೋಕವನ್ನು ಸೃಷ್ಟಿಸಲಾಯಿತು. ಪರ್ಯಾಯ ಶ್ರೀಗಳ ನೇತೃತ್ವದಲ್ಲಿ ತಪ್ಪೋತ್ಸವ ನಡೆಯಿತು. ಬಳಿಕ ರಥಬೀದಿಯ ಸುತ್ತಲೂ ಇರಿಸಿದ ಸಾವಿರಾರು ದಳಿಗಳ ಮೇಲಿರಿಸಿದ ಮಣ್ಣಿನ ಹಣತೆಯಲ್ಲಿ ಸಾರ್ವಜನಿಕರು ದೀಪವನ್ನು ಬೆಳಗಿಸುವ ಮೂಲಕ ಲಕ್ಷದೀಪೋತ್ಸವ ಆರಂಭಗೊಂಡಿತು.

ಈ ಸಾಲು ದೀಪಗಳ ಮಧ್ಯೆ ಕೃಷ್ಣ ಹಾಗೂ ಮುಖ್ಯ ಪ್ರಾಣರ ಉತ್ಸವ ಮೂರ್ತಿಯನ್ನಿರಿಸಿದ ಗರುಡ ರಥ ಹಾಗೂ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಉತ್ಸವ ಮೂರ್ತಿಯನ್ನಿರಿಸಿದ ಮಹಾಪೂಜಾ ರಥಗಳು ರಥಬೀದಿಯ ಸುತ್ತ ಸಾಗಿ ಬರುವ ದೃಶ್ಯ ನೋಡಿ ನೆರೆದ ಜನಸಮೂಹ ಭಾವಪರವಶವಾಯಿತು. ಉತ್ಸವದಲ್ಲಿ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥ ಶ್ರೀಪಾದರು,ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಹಾಗೂ ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಬಳಿಕ ಅತ್ಯಾಕರ್ಷಕ ಹಾಗೂ ವೈವಿಧ್ಯಮಯ ಸುಡುಮದ್ದುಗಳ ಪ್ರದರ್ಶನವೂ ರಥಬೀದಿಯಲ್ಲಿ ನಡೆಯಿತು.

ಅಪರಾಹ್ನ ರಥಬೀದಿಯಲ್ಲಿ ನಿರ್ಮಿಸಿದ ಅಟ್ಟಣಿಗೆಯಲ್ಲಿ ಹಣತೆಗಳಿಗೆ ಮುಹೂರ್ತವನ್ನು ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರೀಯ ಸ್ವಾಮೀಜಿಗಳಲ್ಲದೆ ಪಲಿಮಾರು ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರು,ಪೇಜಾವರ ಮಠಾಧೀಶರಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು,ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ತೀರ್ಥ ಶ್ರೀಪಾದರು, ಹಾಗೂ ಪರ್ಯಾಯ ಶ್ರೀಈಶಪ್ರಿಯತೀರ್ಥ ಶ್ರೀಪಾದರು,ಪಲಿಮಾರು ಕಿರಿಯ ಮಠಾಧೀಶರಾದ ಶ್ರೀ ವಿದ್ಯಾರಾಜೇಶ್ವರ ತೀರ್ಥರು ಇದರಲ್ಲಿ ಪಾಲ್ಗೊಂಡರು.

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.