



ಬ್ರಹ್ಮಾವರ:
ಹಡಿಲು ಭೂಮಿ ಕೃಷಿ ಯೋಜನೆಯಡಿ ಖರೀದಿಸಿದ 4 ಭತ್ತ ನಾಟಿ ಯಂತ್ರಗಳನ್ನು ರಿಪೇರಿ ಮಾಡುವ ನೆಪದಲ್ಲಿ ಕೊಂಡು ಹೋಗಿ ವಾಪಸ್ಸು ನೀಡದೆ ವಂಚಿಸಿರುವ ಬಗ್ಗೆ ಕೇದೋರೊತ್ಥಾನ ಟ್ರಸ್ಟ್ ಉಡುಪಿ ಇದರ ಸದಸ್ಯ ಮಹೇಂದ್ರ ಕುಮಾರ್ ಅವರು ಜೀವನ್ ಯಂತ್ರ ಕೊಟೇಶ್ವರ ಇದರ ಮಾಲೀಕ ಶ್ರೀಕಾಂತ್ ಭಟ್ ಎಂಬವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಬ್ರಹ್ಮಾವರದ ನೀಲಾವರ ಗ್ರಾಮದ ಮಹೇಂದ್ರ ಕುಮಾರ್ ಅವರು 2021-22 ನೇ ಸಾಲಿನಲ್ಲಿ ಹಡಿಲು ಭೂಮಿ ಕೃಷಿ ಯೋಜನೆಯಡಿ 12 ಲಕ್ಷ ಮೌಲ್ಯದ 4 ಭತ್ತ ನಾಟಿ ಯಂತ್ರಗಳನ್ನು ಖರೀದಿಸಿದ್ದರು. ಈ ವರ್ಷದ ನಾಟಿ ಪ್ರಾರಂಭವಾಗುವ ಮುಂಚೆ ಯಂತ್ರಗಳನ್ನು ದುರಸ್ಥಿ ಮಾಡುವ ಸಲುವಾಗಿ ಬ್ರಹ್ಮಾವರ ಕೃಷಿಕೇಂದ್ರದ ವಠಾದಲ್ಲಿ ಇಟ್ಟಿದ್ದರು. ಎಪ್ರಿಲ್ ತಿಂಗಳಲ್ಲಿ ಈ 4 ಯಂತ್ರಗಳನ್ನು ರಿಪೇರಿ ಮಾಡುವ ನೆಪದಲ್ಲಿ ಜೀವನ್ ಯಂತ್ರ ಕೊಟೇಶ್ವರ ಇದರ ಮಾಲೀಕ ಶ್ರೀಕಾಂತ್ ಭಟ್ ತೆಗೆದುಕೊಂಡು ಹೋಗಿದ್ದರು. ಬಳಿಕ ಮಹೇಂದ್ರ ಕುಮಾರ್ ಅವರು ಈ ತಿಂಗಳಲ್ಲಿ ನಾಟಿ ಮಾಡುವ ಸಂಧರ್ಭದಲ್ಲಿ ಆ ಯಂತ್ರಗಳನ್ನು ಹಲವು ಬಾರಿ ಕೇಳಿದ್ದು, ಇದುವರೆಗೂ ಯಂತ್ರಗಳನ್ನು ವಾಪಾಸ್ಸು ನೀಡದೆ ವಂಚಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.