



ಕಾರ್ಕಳ: ಸ. ಹಿ. ಪ್ರಾ. ಶಾಲೆ ಎಣ್ಣೆಹೊಳೆ ಇಲ್ಲಿ ಶಿರ್ಡಿ ಸಾಯಿ ಸಮೂಹ ಶಿಕ್ಷಣ ಸಂಸ್ಥೆ ಕಾರ್ಕಳ ಇದರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾದ ಶ್ರೀ ಹೆಚ್ ಆಶೀಷ್ ಶೆಟ್ಟಿ ಇವರು ಕೊಡಮಾಡಿದ ನೋಟ್ ಪುಸ್ತಕ ಹಾಗೂ ಎಣ್ಣೆಹೊಳೆ ಹಾಲು ಉತ್ಪಾದಕರ ಸಂಘದ ವತಿಯಿಂದ ಅಂಗನವಾಡಿ ಮತ್ತು ಹಿ.ಪ್ರಾ. ಶಾಲೆಗೆ ನೀಡಿದ ಕ್ರೀಡಾ ಸಾಮಗ್ರಿ ಜೊತೆಗೆ ಸರಕಾರದ ವತಿಯಿಂದ ಉಚಿತ ಪಠ್ಯ ಪುಸ್ತಕ ವಿತರಣಾ ಕಾರ್ಯಕ್ರಮ ಜೂ15 ರಂದು ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು SDMC ಅಧ್ಯಕ್ಷೆ ಶ್ರೀಮತಿ ಪ್ರತಿಮಾ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾದ ಮಾಜಿ ತಾಲೂಕು ಪಂಚಾಯತಿ ಉಪಾಧ್ಯಕ್ಷ ಹರೀಶ್ ನಾಯಕ್ ಇವರು ಪ್ರತಿ ಮಗು ಉತ್ತಮ ಶಿಕ್ಷಣ ಪಡೆದು ದೇಶದ ಪ್ರತಿಷ್ಠಿತ ಪ್ರಜೆಯಾಗಬೇಕೆಂದು ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಮರ್ಣೆ ಗ್ರಾಮ ಪಂ. ಸದಸ್ಯ ಶ್ರೀ ರಾಜೇಶ್ ಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯರಾದ ಸುಂದರ ನಾಯ್ಕ ಉಪಸ್ಥಿತರಿದ್ದರು. ದೈಹಿಕ ಶಿಕ್ಷಕಿ ಆಶಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಹಿರಿಯ ಶಿಕ್ಷಕಿ ಅರುಂಧತಿ ಧನ್ಯವಾದವಿತ್ತರು. ಶ್ರೀಮತಿ ಭಾರತಿ ದಾನಿಗಳ ಪರಿಚಯಗೈದರು. ಸಹಶಿಕ್ಷಕಿ ಶ್ರೀಮತಿ ಪ್ರಭಾವತಿ, ಅತಿಥಿ ಶಿಕ್ಷಕಿ ಶ್ರೀಮತಿ ಸೌಮ್ಯ ಶೆಟ್ಟಿ ಮತ್ತು ಅಂಗನವಾಡಿ ಶಿಕ್ಷಕಿ ಕೀರ್ತಿ ಕಾರ್ಯಕ್ರಮಕ್ಕೆ ಸಹಕರಿಸಿದರು.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.