



ಬೆಂಗಳೂರು: ಆಗಸ್ಟ್ 1ರಿಂದ ಎಲ್ಲ ಹೋಟೆಲ್ ತಿನಿಸುಗಳ ಬೆಲೆಯಲ್ಲಿ ಶೇ.10ರಷ್ಟು ಹೆಚ್ಚಳವಾಗಲಿದೆ. ತಿಂಡಿ ತಿನಿಸಿಗೆ ಐದು ರೂ ಹಾಗೂ ಊಟಕ್ಕೆ ಹತ್ತು ರೂ. ಹೆಚ್ಚಲಿದೆ.
ಹಾಲಿನ ದರ ಏರಿಕೆಯಿಂದಾಗಿ ಕಾಫಿ, ಟಿ ದರದಲ್ಲೂ ವ್ಯತ್ಯಾಸವಾಗಲಿದ್ದು, ಎರಡರಿಂದ ಮೂರು ರೂ. ಹೆಚ್ಚಿಸಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಅಕ್ಕಿ, ತರಕಾರಿ ಸೇರಿ ಅಗತ್ಯವಸ್ತುಗಳು ದುಬಾರಿಯಾಗಿದ್ದು, ವಿದ್ಯುತ್ ದರವೂ ಏರಿಕೆಯಾಗಿದೆ. ಇದರಿಂದ ಹೋಟೆಲ್ ಉದ್ಯಮ ತತ್ತರಿಸಿದೆ. ಹೀಗಾಗಿ ಹೋಟೆಲ್‌ಗಳ ತಿಂಡಿ–ತಿನಿಸುಗಳ ಬೆಲೆಯಲ್ಲಿ ಶೇ 10ರಷ್ಟು ಹೆಚ್ಚಿಸುವುದು ಅನಿವಾರ್ಯವಾಗಿದೆ ಎಂದು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘ ತಿಳಿಸಿದೆ.
ದರ ಹೆಚ್ಚಳವಂತೂ ಖಚಿತ. ಈಗಾಗಲೇ ಕೆಲ ಹೋಟೆಲ್‌ಗಳು ದರ ಹೆಚ್ಚಿಸಿವೆ. ದರ ಹೆಚ್ಚಳ ಕುರಿತು ಮಂಗಳವಾರ ನಡೆಯಲಿರುವ ಸಂಘದ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಂಘದ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾರೆ
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.