logo
WhatsApp Image 2025-08-20 at 6.11.39 PM - Copy.jpeg
SHARADA TECHERS.jpeg
hindalco everlast.jpeg

ತ್ಯಾಗ, ತಪಸ್ಸು, ಸೇವೆಯಿಂದ ದೈವತ್ವದಡೆಗೆ -ಬಿ.ಕೆ.ನಿರ್ಮಲಾಜೀ

ಟ್ರೆಂಡಿಂಗ್
share whatsappshare facebookshare telegram
7 Mar 2024
post image

ಕಾರ್ಕಳ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಎಸ್.ವಿ.ಟಿ.ರಸ್ತೆಯ ಸೇವಾ ಕೇಂದ್ರದಲ್ಲಿ ಸೇವಾ ಕೇಂದ್ರದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ವಸಂತಿ ಇವರಿಗೆ ನುಡಿ-ನಮನ ಕಾರ್ಯಕ್ರಮ ಮಾರ್ಚ್ ೬ರಂದು ಜರಗಿತು. ಸಮಾರಂಭದ ಅಧ್ಯಕ್ಷತೆಯನ್ನು ಈಶ್ವರೀಯ ವಿಶ್ವ ವಿದ್ಯಾಲಯ ಹುಬ್ಬಳ್ಳಿ ವಲಯದ ಸಂಚಾಲಕಿ ರಾಜಯೋಗಿನಿ ಬ್ರಹ್ಮಕುಮಾರಿ ನಿರ್ಮಲಾಜೀ ಇವರು ವಹಿಸಿದ್ದು, ಬ್ರಹ್ಮಕುಮಾರಿ ವಸಂತಿಯವರ ತ್ಯಾಗ, ತಪಸ್ಸು, ಸೇವೆ ದೈವತ್ವಕ್ಕೆ ಸಮಾನ. ಈಶ್ವರೀಯ ಸೇವೆಯಲ್ಲಿ ೪೦ವರ್ಷಗಳಿಂದ ಜೀವನವನ್ನು ಸಮರ್ಪಣೆ ಮಾಡಿ ಪ್ರತೀಯೋರ್ವರ ಮನಸ್ಸನ್ನು ಗೆದ್ದಿದ್ದು ಅವರ ನಿಧನವು ತುಂಬಲಾರದ ನಷ್ಟ ಎಂದು ತಿಳಿಸಿದರು.. ಮಂಗಳೂರು ಸೇವಾಕೆಂದ್ರದ ಸಂಚಾಲಕಿ ಬಿ.ಕೆ. ವಿಶ್ವೇಶ್ವರಿಯವರು ಜ್ಞಾನವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಇತರರಿಗೆ ತಿಳಿಸಿಕೊಡುವುದರಿಂದ ಬೇರೆಯವರಿಗೆ ಅನುಭವ ಮಾಡುವಂತಹ ವಸಂತಕ್ಕನವರ ಕಾರ್ಯ ಶೈಲಿಯನ್ನು ಶ್ಲಾಘಿಸಿದರು, ಕಾಸರಗೊಡು ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ವಿಜಯಕ್ಕನವರು ತಾವು ಹುಬ್ಬಳ್ಳಿಯಲ್ಲಿರುವಂತಹ ಸಮಯದಲ್ಲಿ ವಸಂತಕ್ಕನವರ ಜೊತೆಯ ಅನುಭವ ತಿಳಿಸಿದರು. ಕಾರ್ಕಳ ಸೇವಾ ಕೇಂದ್ರದ ಸಂಚಾಲಕಿ ಬಿ.ಕೆ. ವಿಜಯಲಕ್ಷ್ಮಿ ಅಕ್ಕನವರು ತಮ್ಮ ತನು ಮನ ಧನ, ಸಮಯ ಸಂಕಲ್ಪದಿಂದ ಈಶ್ವರೀಯ ಸೇವೆಯನ್ನು ಮಾಡಿದ ವಸಂತಕ್ಕನವರಿಗೆ ಶ್ರದ್ಧಾಂಜಲಿ ಅರ್ಪಿಸಿದರು. ಹುಬ್ಬಳ್ಳಿಯ ವಿಜಯ ಬ್ಯಾಂಕ್ ನಿವೃತ್ತ ಪ್ರಬಂಧಕ ರಾಜಗೋಪಾಲ್ ಶೆಟ್ಟಿ ಯವರು ತಾವು ಆಧ್ಯಾತ್ಮೀಕ ಜ್ಞಾನವನ್ನು ವಸಂತಕ್ಕರವರಿಂದ ಪಡೆದುಕೊಂಡಿದ್ದು ತಮಗೆ ಮಾತೃ ಸಮಾನ ಪಾಲನೆಯನ್ನು ನೀಡಿದ್ದು ಅವರಿಗೆ ಸದ್ಗತಿ ಸಿಗಲೆಂದು ಪ್ರಾರ್ಥಿಸಿದರು. ಶ್ರೀ ವೆಂಕಟರಮಣ ದೇವಸ್ಥಾನದ ಅರ್ಚಕ ವೇ. ಮೂ. ಗಣೇಶ್ ಭಟ್ ರವರು ಸದ್ಗತಿ ಪ್ರಾಥನೆ ನೆರೆವೆರೆಸಿದ್ರು. ಸುತ್ತ ಮುತ್ತಲಿನ ಸೇವಾಕೇಂದ್ರದ ಶಿಕ್ಷಕಿ, ವಿದ್ಯಾರ್ಥಿ ಗಳು ಭಾಗವಹಿ ಸಿ ದರು

Nudisiri Invitation Karkala-3_251125_112501_page-0001.jpg
Nudisiri Invitation Karkala-3_251125_112501_page-0002.jpg
WhatsApp Image 2025-10-28 at 20.32.23_e43aa502.jpg
WhatsApp Image 2025-10-09 at 20.22.41_774d43da.jpg
WhatsApp Image 2025-09-22 at 7.57.12 AM.jpeg
WhatsApp Image 2025-09-22 at 7.57.12 AM (1).jpeg
WhatsApp Image 2025-07-31 at 11.09.37 PM.jpeg
WhatsApp Image 2025-08-20 at 6.11.39 PM.jpeg
AADYA ELECTRONICS Back 11FINAL_page-0001.jpg
WhatsApp Image 2025-03-24 at 6.54.49 AM.jpeg
WhatsApp Image 2025-01-13 at 14.53.16 (1).jpeg
About Us

ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.

9900402699, 7899167180

© 2021 Suddi Sanchalana. All Rights Reserved.