



ಉಡುಪಿ: ಕಳೆದ ನ.23 ರಂದು ಸುಲ್ತಾನ್ ಡೈಮಂಡ್ಸ್ ನಿಂದ ಮೂರು ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ ವಾಗಿತ್ತು. .ಇದರ ತನಿಖೆ ಕೈಗೆತ್ತಿಕೊಂಡ ಉಡುಪಿ ಪೋಲೀಸರು ಮಹಾರಾಷ್ಟ್ರದ ಸೋಲಾಪುರ ದ ನಯಿ ಜಿಂದಗಿ ಎಂಬಲ್ಲಿ ಕಳ್ಳ ರನ್ನು ಬಂದಿಸಿದ್ದು ನಾಜಿಯಾ ಆಸೀಪ್ ಶೇಕ್ , ಆಸೀಪ್ ಅಸ್ಪಕ್ ಶೇಕ್ , , ಸೌದಾಗರ್ ದಿಲೀಪ್ ಗೋಂದುಕರ್ ಮೂವರನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಕೃತ್ಯ ಕ್ಕೆ ಉಪಯೊಗಿಸಿದ ತವೆರಾ ವಾಹನವನ್ನು ಹಾಗೂ ಮೊಬೈಲ್, 2,99, 792/ ಮೌಲ್ಯದ ನಾಲ್ಕು ಚಿನ್ನದ ಬಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳನ್ನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ. ಉಡುಪಿ ಜಿಲ್ಲಾ ಎಸ್.ಪಿ. ವಿಷ್ಣುವರ್ಧನ್ ಆದೇಶದಂತೆ ಹೆಚ್ಚುವರಿ ಎಸ್ ಪಿ ಕುಮಾರ ಚಂದ್ರ, ಸುದಾಕರ ಸದಾನಂದ ನಾಯ್ಕ್ ಮಾರ್ಗದರ್ಶನದಲ್ಲಿ ನಗರ ಠಾಣೆ ಪೋಲಿಸ್ ನಿರೀಕ್ಷಕ ಪ್ರಮೋದ್ ಕುಮಾರ್, ,ಉಪನಿರೀಕ್ಷಕ ವಾಸಪ್ಪ ನಾಯ್ಕ್ ,ಪ್ರೊಬೇಷನರಿ ಪಿ.ಎಸ್ .ಐ ಪ್ರಸಾದ್ , ಸಿಬ್ಬಂದಿಗಳಾದ ಸತೀಶ್ , ಸಂತೋಷ್ ರಾಥೋಡ್ , ಗಡ್ಡಯ್ಯ ಹಿರೇಮಠ, ಮಲ್ಲಯ್ಯ, ನಾಗರತ್ನ ಬಾಲಕೃಷ್ಣ, ಸುಷ್ಮ , ರಿಯಾಜ್ ಅಹ್ಮದ್ , ಲೋಕೇಶ್, ಜೀವನ್ ಕುಮಾರ್, ಆನಂದ ಗಾಣಿಗ, ಹೇಮಂತ್ ,ಶಿವಕುಮಾರ್, ರಾಘವೇಂದ್ರ ಪಾಲ್ಗೊಂಡಿದ್ದರು
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.