



ನವ ದೆಹಲಿ: ಭಾರತದಲ್ಲಿ ನಾಲ್ಕೂವರೆ ತಿಂಗಳ ಬಳಿಕ ಮಂಗಳವಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿತ್ತು. ಪೆಟ್ರೋಲ್, ಡೀಸೆಲ್ ಬೆಲೆ ಲೀಟರ್ ಗೆ 80 ಪೈಸೆ ಹೆಚ್ಚಳ ಮಾಡಲಾಗಿತ್ತು. ಇದೀಗ ಇಂದು ಮತ್ತೆ (ಮಾರ್ಚ್ 23, ಬುಧವಾರ) ಪೆಟ್ರೋಲ್, ಡೀಸೆಲ್ ಬೆಲೆ 80 ಪೈಸೆ ಹೆಚ್ಚಳ ಮಾಡಲಾಗಿದೆ. ಸತತ ಎರಡನೇ ದಿನವೂ 80 ಪೈಸೆ ಹೆಚ್ಚಳ ಆಗಿದ್ದು ವಾಹನ ಸವಾರರಿಗೆ ಪೆಟ್ರೋಲ್, ಡೀಸೆಲ್ ಬೆಲೆ ಮತ್ತೆ ಬಿಸಿ ಮುಟ್ಟಿಸಿದೆ. ಪ್ರಸ್ತುತ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 97.01 ರೂಪಾಯಿ, ಡೀಸೆಲ್ ಲೀಟರ್ ಗೆ 88.27 ರೂಪಾಯಿ, ಚೆನ್ನೈನಲ್ಲಿ ಪೆಟ್ರೋಲ್ ಲೀಟರ್ ಗೆ 102.91 ರೂಪಾಯಿ, ಡೀಸೆಲ್ ಲೀಟರ್ ಗೆ 92.95 ರೂಪಾಯಿ, ಮುಂಬೈನಲ್ಲಿ ಲೀಟರ್ ಗೆ ಪೆಟ್ರೋಲ್ ಬೆಲೆ 111.67 ರೂಪಾಯಿ ಲೀಟರ್ ಡೀಸೆಲ್ ಬೆಲೆ 95.85 ರೂಪಾಯಿ, ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ಬೆಲೆ 106.34 ರೂಪಾಯಿ ಮತ್ತು ಡೀಸೆಲ್ ಬೆಲೆ ಲೀಟರ್ ಗೆ 91.42 ರೂಪಾಯಿ ಆಗಿದೆ. ಮತ್ತೆ ಬೆಲೆ ಏರಿಕೆ ಮೂಲಕ ದರ ಬದಲಾವಣೆ ಆಗಲಿರುವ ಬಗ್ಗೆ ಸೂಚನೆ ಲಭಿಸಿದೆ. ಈ ಮೊದಲು, ಮಾರ್ಚ್ 10 ರಿಂದಲೇ ಬೆಲೆ ಏರಿಕೆ ಆಗುವ ನಿರೀಕ್ಷೆ ಇತ್ತು. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲ ಬೆಲೆ ಏರಿಕೆ ಹಿನ್ನಲೆ ಈಗ ಭಾರತದಲ್ಲೂ ತೈಲ ಬೆಲೆ ಏರಿಕೆ ಆರಂಭವಾಗಿದೆ.
ಸುದ್ದಿ ಸಂಚಲನ ಕರಾವಳಿಯ ಸಾಮಾಜಿಕ ಜಾಲತಾಣ ಸುದ್ದಿಯಾಗಿದೆ. ನಿಖರ ಹಾಗೂ ನೈಜ ಸುದ್ದಿಯನ್ನು ನೀಡುವ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವುದು ನಮ್ಮ ಗುರಿಯಾಗಿದೆ.
© 2021 Suddi Sanchalana. All Rights Reserved.